ಉದ್ಯೋಗ ಖಾತ್ರಿ ಯೋಜನೆಯನ್ನು ಸಂಪೂರ್ಣ ಬಳಸಿಕೊಳ್ಳಿ

ಗದಗ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಜನತೆ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಖುದ್ದು ಫೀಲ್ಡಿಗಿಳಿದು ಜನತೆಯೊಟ್ಟಿಗೆ ಮಾತನಾಡಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಅವರಿಗೆ ನೀಡುತ್ತಿದ್ದಾರೆ. ಅಧಿಕಾರಿಗಳೊಟ್ಟಿಗೆ ಚರ್ಚೆ ನಡೆಸಿ ಯೋಜನೆಯ ಪ್ರತಿ ಹಂತದಲ್ಲೂ ಹೇಗೆ ಸಮರ್ಪಕವಾಗಿ ನೆರವು ನೀಡಿದ್ದಾರೆನ್ನುವುದನ್ನು ಮನಗಾಣುತ್ತಾರೆ. ಸಚಿವರ ಕಾಮಗಾರಿ ವೀಕ್ಷಣೆಯ ವರದಿಯ ಡೀಟೆಲ್ಸ್ ಇಲ್ಲಿದೆ.

ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರಿಂದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗದಗ ಜಿಲ್ಲೆಯ ಬಿಂಕದಕಟ್ಟಿ ಮತ್ತು ಹಿರೇಹಂದಿಗೋಳ ಗ್ರಾಮಗಳಲ್ಲಿ 643 ಕೃಷಿ ಜಮೀನಿನಲ್ಲಿ ಅಂದಾಜು 16.50 ಕೋಟಿ ವೆಚ್ಚದಲ್ಲಿ  ಮಣ್ಣು ಮತ್ತು ಜಲ ಸಂವಧ೯ನೆಯ ಕಾಮಗಾರಿಗಳನ್ನು ವೀಕ್ಷಿಸಿದರು.

ಕಾಮಗಾರಿಯಲ್ಲಿ ತೊಡಗಿದ ಗ್ರಾಮಸ್ಥರೊಂದಿಗೆ ಕುಳಿತು ಎಪ್ರಿಲ್ ಒಂದರಿಂದ ದಿವಸದ ಕೂಲಿ 224 ರಿಂದ 236 ರೂ.ಗೆ ಹೆಚ್ಚಳವಾಗಿರುವುದು, ಹದಿನೈದು ದಿನದ ನಂತರವು ಕೂಲಿ ಹಣ ಖಾತೆಗೆ ಜಮೆಯಾಗದಿದ್ದರೆ ಒಟ್ಟು ಬಾಕಿ ಮೊತ್ತಕ್ಕೆ 0.05% ಬಡ್ಡಿ ನೀಡುವ ಕುರಿತು, ಕೆಲಸದಲ್ಲಿ ತೊಡಗುವ ತಾಯಂದಿರ ಮಕ್ಕಳ ಲಾಲನೆ ಪಾಲನೆ, ಕುಡಿಯುವ ನೀರು ಹಾಗೂ ಅಗತ್ಯದ ಸಮಯದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ, ಬಾಕಿ ಉಳಿದ ಕೂಲಿ ಪಾವತಿ, ಉದ್ಯೋಗ ನೀಡುವಿಕೆಯಲ್ಲಿನ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ  ನಡೆಸಿದರು. ಉದ್ಯೋಗ ಖಾತ್ರಿ ಯೋಜನೆ ಹೆಚ್ಚು ಜನಪರವಾಗಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಸಚಿವರು ಗ್ರಾಮಸ್ಥರ ಅಭಿಪ್ರಾಯಗಳನ್ನು ಆಲಿಸಿದರು. ಅಧಿಕಾರಿಗಳು ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s