ದಲಿತ, ಶೋಷಿತ, ದುರ್ಬಲ ವರ್ಗದವರಿಗೆ ಅಧಿಕಾರ, ಸಾಮಾಜಿಕ ಶಕ್ತಿ ನೀಡಿದವರು ಅಂಬೇಡ್ಕರ್ : ಸಚಿವ ರುದ್ರಪ್ಪ ಲಮಾಣಿ

ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 110 ನೇ ಜನ್ಮ ದಿನಾಚರಣೆ ಹಾಗೂ ಭಾರತ ರತ್ನ, ಮಹಾನ್ ಮಹಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ ಅವರ 126ನೇ ಜಯಂತಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಸಾಗುವ ಮೆರವಣಿಗೆ ವಾಹನದಲ್ಲಿದ್ದ ಉಭಯ ನಾಯಕರ ಭಾವಚಿತ್ರಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರು  ಪೂಜೆ ಸಲ್ಲಿಸಿ ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ, ವಿವಿಧ ಇಲಾಖೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ರಾಜ್ಯ ಜವಳಿ, ಮುಜರಾಯಿ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರು ಇಂದು ಸವಲತ್ತುಗಳನ್ನು ಕೇಳುತ್ತೇವೆ, ಸವಲತ್ತುಗಳನ್ನು ಕೊಡಮಾಡಿದ ಮಹಾನ್ ನಾಯಕರ ಜಯಂತಿಗೆ ಗೈರುಹಾಜರಾಗುವುದು ನಾಚಿಕೆಗೇಡಿನ ಸಂಗತಿಯೆಂದು  ಖಾರವಾಗಿ ಹೇಳಿದರು.

ದಲಿತ, ಶೋಷಿತ, ದುರ್ಬಲ ವರ್ಗದವರಿಗೆ ಅಧಿಕಾರ, ಸಾಮಾಜಿಕ ಶಕ್ತಿ, ಆರ್ಥಿಕ ಶಕ್ತಿ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಅವರನ್ನೇ ನಾವು ಮರೆತಿದ್ದೇವೆ. ಅವರು ನೀಡಿದ ಸಂವಿಧಾನ ಇಂದು ಪ್ರಭಲವಾಗಿದೆ, ವ್ಯಕ್ತಿ ದುರ್ಬಲರಾಗಿದ್ದಾರೆ. ಈ ಮಹಾನ್ ಚೇತನಗಳು ಸಾಮಾಜಿಕ ಸಮಾನತೆ, ಸರ್ವರ ಏಳ್ಗೆ, ಶೋಷಿತರಿಗೆ ನೀಡಿದ ಬಲವನ್ನು ಮರೆಯಬಾರದು ಎಂದು ತಿಳಿಸಿದರು.

ಸಮಾಜದ ಏಳ್ಗೆಗಾಗಿ ಅವರ ಕಲ್ಯಾಣಕ್ಕಾಗಿ ಕಾಯ್ದಿರಿಸಿದ ಅನುದಾನವನ್ನು ಕಾಲಮಿತಿಯೊಳಗೆ ಖರ್ಚುಮಾಡದ ಅಧಿಕಾರಿಗಳಿಗೆ ಶಿಕ್ಷೆ ಕೊಡುವಂತಹ ಕ್ರಾಂತಿಕಾರಕ ಕಾಯ್ದೆಯನ್ನು ಇಡೀ ದೇಶದಲ್ಲಿ ಜಾರಿಗೊಳಿಸಿದ ಮೊಟ್ಟಮೊದಲ ಸರ್ಕಾರ ಕರ್ನಾಟಕ ಸರ್ಕಾರ. ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಲಿತ, ಶೋಷಿತರ ಏಳ್ಗೆಗಾಗಿ ಈ ವರ್ಷದ ಬಜೆಟ್‍ನಲ್ಲಿ 84 ಸಾವಿರ ಕೋಟಿ ರೂ.ಗಳನ್ನು ಕಾಯ್ದಿರಿಸಿದ್ದಾರೆ. ದಲಿತರ ಶಿಕ್ಷಣಕ್ಕಾಗಿ ಒತ್ತುನೀಡಲು ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವವರಿಗೆ ಆರ್ಥಿಕ ನೆರವು, ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತ್ಯೋತ್ಸವ ಅಂಗವಾಗಿ ರಾಜ್ಯದ ವಸತಿ ನಿವೇಶನ ರಹಿತ ಎಲ್ಲ ದಲಿತ ಕುಟುಂಬಗಳಿಗೆ ಈ ವರ್ಷ ನಿವೇಶ, ವಸತಿ ಒದಗಿಸಲು ಗುರಿಹಾಕಿಕೊಂಡಿದ್ದಾರೆ ಎಂದು ಹೇಳಿದರು.

ಹಾವೇರಿ ಜಿಲ್ಲೆಯಲ್ಲಿ ವಸತಿ ಹಾಗೂ ನಿವೇಶನ ರಹಿತ ಎಲ್ಲ ದಲಿತರಿಗೂ ನಿವೇಶ ಹಾಗೂ ವಸತಿ ಒದಗಿಸಲಾಗುವುದು. ಹಾವೇರಿ ತಾಲೂಕಿನಲ್ಲಿ 17 ವರೆ ಎಕರೆ ಜಮೀನನ್ನನು ನಿವೇಶನಕ್ಕಾಗಿ ಗುರುತಿಸಲಾಗಿದೆ. ಶೀಘ್ರವೇ ನಿವೇಶನ ಹಂಚಿಕೆಮಾಡಿ ಮನೆ ನಿರ್ಮಿಸಿಕೊಡಲಾಗುವುದು ಎಂದು ಘೋಷಿಸಿದರು. ಈಗಾಗಲೇ ಸುಸಜ್ಜಿತವಾದ ಡಾ.ಬಿ.ಆರ್.ಅಂಬೇಡ್ಕರ್  ಭವನ ನಿರ್ಮಾಣ ಅಂತಿಮ ಹಂತದಲ್ಲಿದೆ. ಈ ಭವನ ಪೂರ್ಣಗೊಳಿಸಲು ಹೆಚ್ಚುವರಿ ರೂ.1.45 ಕೋಟಿ ಅನುದಾನವನ್ನು ಒದಗಿಸಲಾಗಿದೆ. ಮುಂದಿನ ವರ್ಷ ಅಂಬೇಡ್ಕರ ಹಾಗೂ ಬಾಬು ಜಗಜೀವನರಾಂ ಜಯಂತಿಯನ್ನು ಈ ಭವನದಲ್ಲೇ ಆಚರಿಸಲಾಗುವುದು. ಪರಿಶಿಷ್ಟ ಪಂಗಡಗಳಿಗಾಗಿ ನಿರ್ಮಿಸಲಾಗುತ್ತಿರುವ ವಾಲ್ಮೀಕಿ ಭವನ ಪೂರ್ಣಗೊಳ್ಳುವ ಹಂತದಲ್ಲಿದೆ. ವಾಲ್ಮೀಕಿ ಜಯಂತಿಯನ್ನು ಈ ವರ್ಷ ಈ ಕಟ್ಟದಲ್ಲೇ ಆಚರಿಸಲಾಗುವುದು ಎಂದು ಹೇಳಿದರು.

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s