ವಿಶ್ವಶ್ರೇಷ್ಠ ಸಂವಿಧಾನ ನೀಡಿದವರು ಡಾ.ಅಂಬೇಡ್ಕರ್

ಡಾ. ಬಿ ಆರ್ ಅಂಬೇಡ್ಕರ್ ಹುಟ್ಟಿದ ಈ ರಾಷ್ಟ್ರದಲ್ಲಿ ನಾವು ಹುಟ್ಟಿದ್ದು ನಮ್ಮ ಹೆಮ್ಮೆ ಎನ್ನಬೇಕು. ಮನುಷ್ಯನೋರ್ವನಿಗೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸಂಪೂರ್ಣ ಸ್ವತಂತ್ರವಾಗಿ ನಿಯಮಿತ ಪರಿಧಿಯೊಳಗೆ ನೆಮ್ಮದಿಯಿಂದ ಬದುಕು ಕಳೆಯಬಹುದಾದ ಕಾನೂನು ಕಟ್ಟಳೆಗಳನ್ನು ಕಟ್ಟಿಕೊಟ್ಟದ್ದು ಈ ನಿಜ ಮಣ್ಣಿನ ಅವಧೂತ. ಜಗತ್ತಿನ ಸರ್ವತಂತ್ರ ಸ್ವತಂತ್ರ ದೇಶಗಳ ಸಂವಿಧಾನಗಳೆಲ್ಲಕ್ಕಿಂತ ವಿಭಿನ್ನವಾದ ಸಂವಿಧಾನವನ್ನು ಪ್ರತೀ ಭಾರತೀಯರಿಗೆ ನೀಡಿದ್ದು ಇದೇ ಬಾಬಾ ಸಾಹೇಬ್ ಅಂಬೇಡ್ಕರ್. ಇಂಥಹ ಜಗದ ಕಣ್ಣಿನ ಬೆಳಕಿನ ಕಿರಣದ ಜಯಂತಿಯನ್ನು ಹುಬ್ಬಳ್ಳಿ ಧಾರವಾಡದಲ್ಲಿ ಹೇಗೆ ಆಚರಿಸಿದರು ಎನ್ನುವ ವಿವರ ಇಲ್ಲಿದೆ ನೋಡಿ.

ಅತ್ಯುತ್ತಮ ಸಾಮಾಜಿಕ ಮೌಲ್ಯಗಳು ಹಾಗೂ ಆಶಯಗಳನ್ನೊಳಗೊಂಡ ಶ್ರೇಷ್ಠ ಮತ್ತು ಜಗತ್ತಿನಲ್ಲಿಯೇ ಪ್ರಬಲವಾದ ಸಂವಿಧಾನ ನೀಡಿದ ಶ್ರೇಯಸ್ಸು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಎಂತಹ ಒರೆಗಲ್ಲಿಗೆ ಹಚ್ಚಿದರೂ ಅಭದ್ರವಾಗಲಾರದ ಸಂವಿಧಾನ ಹೊಂದಿದ ಹಿರಿಮೆ ಭಾರತದ್ದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ಭಾರತರತ್ನ,ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 126 ನೇ ಜಯಂತಿಯ ಮುನ್ನಾದಿನದಂದು ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಜಂಟಿ ಆಶ್ರಯದಲ್ಲಿ ಇಲ್ಲಿನ ಸನ್ಮತಿ ಮಾರ್ಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ನಮ್ಮ ಹಿರಿಯರು ಅಹಿಂಸಾ ಮಾರ್ಗದಲ್ಲಿ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟುದನ್ನು ಉಳಿಸಿಕೊಳ್ಳಲು ಸಂವಿಧಾನ ಪೂರಕವಾಗಿದೆ. ದೇಶದ ಸರ್ವಾಂಗೀಣ ಏಳ್ಗೆಗೆ ಸಂವಿಧಾನ ಅವಕಾಶ ಕಲ್ಪಿಸಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು  ತಿಳಿಸಿದರು.

ಕ.ವಿ.ವಿ. ಇತಿಹಾಸ ಹಾಗೂ ಪ್ರಾಚ್ಯ ಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಶಿವರುದ್ರ ಎಸ್. ಕಲ್ಲೋಳಿಕರ್ ಉಪನ್ಯಾಸ ನೀಡಿ, ಶೋಷಿತ ಜನಾಂಗದ ಏಳ್ಗೆಗಾಗಿ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿ, ಮಹಿಳೆಯರು,ಅಲ್ಪಸಂಖ್ಯಾತರು,ಹಿಂದುಳಿದ ವರ್ಗಗಳು ಹಾಗೂ ದಲಿತರಿಗೆ ಮೀಸಲಾತಿ ದೊರಕಿಸಿಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್. ಬುದ್ಧ, ಬಸವರ ಹಾದಿಯಲ್ಲಿ ಸಾಗಿದ ಅಂಬೇಡ್ಕರ್‍ ಅವರು ಸಮಾಜದಲ್ಲಿ ಸಮಾನತೆ ತರಲು ನೀಡಿದ ಕೊಡುಗೆ ಅಪಾರವಾದುದು. ಜಗತ್ತಿನಲ್ಲಿಯೇ ಶ್ರೇಷ್ಠ ವಿದ್ವಾಂಸ, ಸಮಾಜ ಸುಧಾರಕ ಎಂಬ ಅಧಿಕೃತ ಮಾನ್ಯತೆಯನ್ನು ಅಮೇರಿಕದ ಕೋಲಂಬಿಯಾ ವಿಶ್ವವಿದ್ಯಾಲಯವು ತನ್ನ 250 ವರ್ಷಗಳ ಇತಿಹಾಸದ ಸಮೀಕ್ಷೆ ನಡೆಸಿ, ಭಾರತದ ಹೆಮ್ಮೆಯ ಪುತ್ರ ಡಾ.ಬಿ ಆರ್ ಅಂಬೇಡ್ಕರ್‍ ಅವರಿಗೆ ಆ ಗೌರವ ನೀಡಿರುವದು ಸಮಸ್ತ ಭಾರತೀಯರು ಹೆಮ್ಮೆಪಡಬೇಕಾದ ಸಂಗತಿಯಾಗಿದೆ ಎಂದರು.


ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿರ್ದೇಶಕ ಸದಾಶಿವ ಮರ್ಜಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಗಿರೀಶ ಕಾಂಬಳೆ,ಮಹದೇವ ದೊಡ್ಡಮನಿ,ಪ್ರಿಯಾ ಪುರಾಣಿಕ,ಶಿವರಾಜಕುಮಾರ ಕಲ್ಲಿಗನೂರ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್.ಮುನಿರಾಜು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s