ಯುಗಪುರುಷರ ಆಧ್ಯಾತ್ಮಿಕ ಸಂಬಂಧದ ಅನಾವರಣ

ಬಳ್ಳಾರಿಯಲ್ಲಿ ಯುಗಪುರುಷ ನಾಟಕ ಪ್ರದರ್ಶನ ಕಂಡಿದೆ. ನಾಟಕ ನೋಡಿದವರೆಲ್ಲರಿಗೂ ಶ್ರೀಮದ್ ರಾಜ್ ಚಂದ್ರಜೀ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ನಡುವಿನ ಆಧ್ಯಾತ್ಮಿಕ ಭಾಂದವ್ಯದ ಅನಾವರಣಕ್ಕೆ ಮೂಕ ವಿಸ್ಮಿತರಾಗಿದ್ದಾರೆ. ಪ್ರದರ್ಶನದ ಮತ್ತಷ್ಟು ವಿವರ ಇಲ್ಲಿ ನೀಡಲಾಗಿದೆ.

ಬಳ್ಳಾರಿ ನಗರದ ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಶ್ರೀಮದ್ ರಾಜ್‍ಚಂದ್ರ ಮಿಷನ್ ಧರಮ್‍ಪೂರ್ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಸಹಯೋಗದಲ್ಲಿ ಸಂಘಟಿಸಲಾಗಿದ್ದ  ಶ್ರೀಮದ್ ರಾಜ್‍ಚಂದ್ರಜೀ ಮತ್ತು ಮಹಾತ್ಮ ಗಾಂಧಿಯವರ ನಡುವಿನ ಆಧ್ಯಾತ್ಮಿಕ ಸಂಬಂಧವನ್ನು ಚಿತ್ರಿಸುವ ಸ್ಫೂರ್ತಿದಾಯಕ ಪ್ರದರ್ಶನ  “ಯುಗಪುರುಷ – ಮಹಾತ್ಮರ ಮಹಾತ್ಮ”  ಯಶಸ್ವಿಯಾಯಿತು. ಶ್ರೀಮದ್ ರಾಜ್‍ಚಂದ್ರ ಮಿಷನ್ ಧರಮ್‍ಪೂರ್ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಸಹಯೋಗದಲ್ಲಿ ಸಂಘಟಿಸಲಾಗಿತ್ತು.

‘ಯುಗಪುರುಷ’ ಪ್ರದರ್ಶನವು ನಿಸ್ವಾರ್ಥತತೆಯಿಂದ ಸೇವೆ ಮತ್ತು ಪ್ರೀತಿಯನ್ನು, ವೈವಿಧ್ಯತೆಯನ್ನು ಗೌರವಿಸುವ, ಸತ್ಯವನ್ನು ಬೆಂಬಲಿಸುವ, ವಿಶ್ವಾಸವನ್ನು ಸೃಷ್ಠಿಸುವ, ಶಾಶ್ವತವಾದ ಸಮುದಾಯಗಳನ್ನು ಕಟ್ಟುವ ವ್ಯಕ್ತಿಯ ಸಾಮಥ್ರ್ಯವನ್ನು ವಿಸ್ತರಿಸುವ ಮೌಲ್ಯಗಳ ಉದಾತ್ತ ಉದ್ದೇಶಗಳನ್ನು ಎತ್ತಿ ತೋರಿಸುವಲ್ಲಿ ಯಶಸ್ವಿಯಾಯಿತು.

ಜನಪ್ರಿಯ ಬೇಡಿಕೆಯ ಮೇರೆಗೆ ರಾಷ್ಟ್ರದ ವಿವಿಧ ನಗರಗಳಲ್ಲಿ ನಾಲ್ಕು ವಿವಿಧ ತಂಡಗಳು ಈ ರೂಪಕವನ್ನು ಏಕಕಾಲಕ್ಕೆ ಪ್ರದರ್ಶಿಸುತ್ತಿವೆ. `ಯುಗಪುರುಷ’ ಪ್ರಸ್ತುತವಾಗಿ ಕನ್ನಡ, ಹಿಂದಿ, ಗುಜರಾತಿ, ಭಾಷೆಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಕೆಲವೇ ದಿನಗಳಲ್ಲಿ ಇಂಗ್ಲಿಷ್, ಮರಾಠಿ, ಬೆಂಗಾಲಿ ಮತ್ತು ತಮಿಳು ಭಾಷೆಗೆ ರೂಪಾಂತರಗೊಳ್ಳಲಿದೆ. ಮುಂಬರುವ ವರ್ಷಗಳಲ್ಲಿ ‘ಯುಗಪುರುಷ’ ರೂಪಕವು ಭಾರತದ ಎಲ್ಲ ಭಾಗಗಳಲ್ಲಿ ಅಲ್ಲದೇ ಅಮೆರಿಕ, ಕೆನಡಾ, ಬ್ರಿಟನ್, ಸಿಂಗಾಪೂರ್, ಹಾಂಕಾಂಗ್, ಮಲೇಶಿಯಾ,ಆಸ್ಟ್ರೇಲಿಯಾ, ಯುಎಇ, ಒಮನ್, ಕೀನ್ಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪ್ರದರ್ಶನಗೊಳ್ಳಲಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s