ಗಿರಿಜನರಿಗೆ ಶಾಶ್ವತ ನೆಲೆ ಕಲ್ಪಿಸಲು ಅಗತ್ಯ ಕ್ರಮ:ಸಚಿವ ಕಾಗೋಡು ತಿಮ್ಮಪ್ಪ

Diddally Isuueದಿಡ್ಡಳ್ಳಿಯ ನಿರಾಶ್ರಿತ ಆದಿವಾಸಿ ಕುಟುಂಬಗಳಿಗೆ ನಿವೇಶನ ಹಾಗೂ ಭೂಮಿ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಈ ಸಂಬಂಧ ದಿಡ್ಡಳ್ಳಿಯ ಜಾಗ ಅರಣ್ಯ ಇಲಾಖೆಗೆ ಸೇರಿದೆಯೇ ಅಥವಾ ಕಂದಾಯ ಇಲಾಖೆಗೆ ಸೇರಿದೆಯೇ ಎಂಬ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಮೂಲ ನಿವಾಸಿ ಗಿರಿಜನರಿಗೆ ಶಾಶ್ವತ ನೆಲೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.
ಕೊಡಗು ಜಿಲ್ಲೆಯ ದಿಡ್ಡಳ್ಳಿಗೆ ಭೇಟಿ ನೀಡಿ ನಿರಾಶ್ರಿತರ ಅಹವಾಲು ಆಲಿಸಿದ ನಂತರ ಸಭಾ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
Kgodu Thimmappaದಿಡ್ಡಳ್ಳಿಯ ಭೂಮಿ ಕಂದಾಯ ಇಲಾಖೆಗೆ ಸೇರಿದ್ದರೆ ಮೂರೇ ದಿನದಲ್ಲಿ ಹಕ್ಕು ಪತ್ರ ವಿತರಿಸಲಾಗುವುದು. ಅರಣ್ಯ ಇಲಾಖೆಗೆ ಜಾಗ ಸೇರಿದ್ದರೆ ಗುರ್ತಿಸಬೇಕಾಗುತ್ತದೆ. ಆದ್ದರಿಂದ ದಿಡ್ಡಳ್ಳಿ ಭೂಮಿ ಸಂಬಂಧ ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು ಎಂದು ಕಂದಾಯ ಸಚಿವರು ಹೇಳಿದರು.

ದಿಡ್ಡಳ್ಳಿಯ ಮೂಲ ನಿವಾಸಿ ಗಿರಿಜನರಿಗೆ ಜಿಲ್ಲೆಯ ಎಲ್ಲೋ ಒಂದೆರಡು ಕಡೆ ನಿವೇಶನ ಒದಗಿಸಿ ಸರಕಾರ ಸುಮ್ಮನಾಗುವುದಿಲ್ಲ. ನಿವೇಶನದ ಜೊತೆಗೆ ಕನಿಷ್ಠ ಒಂದು ಅಥವಾ ಎರಡು ಎಕರೆ ಭೂಮಿಯನ್ನಾದರೂ ಕಲ್ಪಿಸಬೇಕಲ್ಲವೇ? ಆನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡುತ್ತಿದೆ. ಆದ್ದರಿಂದ ಮೂಲ ನಿವಾಸಿ ಗಿರಿಜನರು ಯಾವ ಯಾವ ಹಾಡಿಯಲ್ಲಿ ವಾಸ ಮಾಡುತ್ತಿದ್ದೀರ, ಅಲ್ಲಿಯೇ ಜಾಗವನ್ನು ಗುರುತಿಸಿ, ನಿವೇಶನ ಹಾಗೂ ಭೂಮಿ ಹಂಚಿಕೆ ಮಾಡಲು ಪ್ರಯತ್ನಿಸಲಾಗುವುದು ಎಂದು ಕಂದಾಯ ಸಚಿವರು ನುಡಿದರು.

ಜಿಲ್ಲೆಯಲ್ಲಿ ಟಾಟಾದವರಿಗೆ ಸಾವಿರಾರು ಎಕರೆ ಕಾಫಿ ತೋಟವಿದೆ. ಆದರೆ ಆದಿವಾಸಿಗಳಿಗೆ ಕನಿಷ್ಠ ಎರಡು ಎಕರೆ ಭೂಮಿ ಸಿಗಲಿಲ್ಲವೇ. ಈ ಬಗ್ಗೆ ಆದಿವಾಸಿಗಳು ಯೋಚಿಸಬೇಕು. ಜೊತೆಗೆ ಜಾಗೃತರಾಗಬೇಕು. ಆದ್ದರಿಂದ ಗಿರಿಜನರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸರಕಾರ ಮಕ್ಕಳ ಶಿಕ್ಷಣಕ್ಕಾಗಿ ಆಶ್ರಮ ಶಾಲೆ, ವಸತಿ ಶಾಲೆ, ವಿದ್ಯಾರ್ಥಿ ನಿಲಯ ಹೀಗೆ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು ಕಾಗೋಡು ತಿಮ್ಮಪ್ಪ ಅವರು ಸಲಹೆ ಮಾಡಿದರು.

Kagodu Thimmappa1‘ಮೂಲ ನಿವಾಸಿ ಗಿರಿಜನರಿಗೆ ಸರ್ಕಾರ ದ ಲಾಭವನ್ನು ತಲುಪಿಸುವಲ್ಲಿ ಎಲ್ಲರೂ ಸೋತಿದ್ದೇವೆ. ಇಲ್ಲಿನ ಗಿರಿಜನರು ಹೇಗೆ ಜೀವನ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದರೆ, ನಮಗೆ ಬೇಸರವಾಗುತ್ತದೆ. ನಾವುಗಳು ಸಹ ನೋವು ಅನುಭವಿಸಿದವರು ಎಂದು ಕಾಗೋಡು ತಿಮ್ಮಪ್ಪ ಅವರು ಹಿಂದಿನ ಘಟನೆಗಳನ್ನು ಸ್ಮರಿಸಿದರು.’

ಮೂಲ ನಿವಾಸಿಗಳು ಆಯಾಯ ದಿನದಂದು ದುಡಿದು ತಿನ್ನುವುದು, ಆ ದಿನ ಮುಗಿದರೆ ಮುಗಿಯಿತು, ಮತ್ತೆ ಆಕಾಶ ನೋಡುವುದು, ಇದು ತಪ್ಪಬೇಕು. ಆದಿವಾಸಿಗಳಲ್ಲಿ ಯಾರಾದರೂ ಎಸ್ಎಸ್ಎಲ್ ಸಿ ಪಾಸು ಮಾಡಿದವರು ಇದ್ದಾರೆಯೇ ಎಂದು ಕಂದಾಯ ಸಚಿವರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಡವರಿಗೆ ಅನ್ನಭಾಗ್ಯ ಯೋಜನೆಯಡಿ 7 ಕೆಜಿ ಅಕ್ಕಿ ನೀಡುತ್ತಿದೆ. ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನವೂ ಹಾಲು ವಿತರಿಸಲಾಗುತ್ತದೆ. ನರೇಗಾ ಯೋಜನೆಯಡಿ ಉದ್ಯೋಗ ಪಡೆಯಿರಿ ಎಂದು ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.

‘ಶ್ರಮವೇ ಸಂಪತ್ತು ಸೃಷ್ಟಿ ಮಾಡುತ್ತದೆ. ಆದ್ದರಿಂದ ಶ್ರಮಕ್ಕೆ ಬೆಲೆ ನೀಡಿ, ಹೇಡಿತನಕ್ಕೆ ಅವಕಾಶ ನೀಡಬೇಡಿ ಎಂದು ಕಂದಾಯ ಸಚಿವರು ಕಿವಿಮಾತು ಹೇಳಿದರು.’ ಸರಕಾರ ಭೂ ಸುಧಾರಣಾ ಕಾನೂನನ್ನು ಜಾರಿಗೊಳಿಸಿದೆ. ತಾವು ಎಲ್ಲಿ ವಾಸ ಮಾಡುತ್ತಿದ್ದೀರ ಆ ಸ್ಥಳದ ಮಾಹಿತಿಯ ಅರ್ಜಿ ಯನ್ನು ಅಕ್ರಮ-ಸಕ್ರಮ ಯೋಜನೆಯಡಿ ಸಲ್ಲಿಸುವಂತೆ ಗಿರಿಜನರಿಗೆ ಸಲಹೆ ಮಾಡಿದರು. ಪ್ರತಿಯೊಂದು ಕುಟುಂಬಕ್ಕೂ ಭೂಮಿ ಸಿಗುವ ಅವಕಾಶವಿದ್ದು, ಅದನ್ನು ಸಮರ್ಪಕವಾಗಿ ಬಳಿಸಿಕೊಳ್ಳುವಂತೆ ಕಾಗೋಡು ಅವರು ಸಲಹೆ ಮಾಡಿದರು.

Diddally2ಬುಧವಾರ ಸಚಿವ ಸಂಪುಟದ ಸಭೆ ನಡೆಯಲಿದ್ದು, ಈ ಸಂಬಂಧ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಒದಗಿಸಲು ಪ್ರಮುಖರು ಬೆಂಗಳೂರಿಗೆ ಆಗಮಿಸುವಂತೆ ಸಚಿವರು ಸಲಹೆ ಮಾಡಿದರು. ಹದಿನೈದು ದಿನದ ನಂತರ ಮತ್ತೊಮ್ಮೆ ದಿಡ್ಡಳ್ಳಿಗೆ ಭೇಟಿ ನೀಡಲಾಗುವುದು ಎಂದರು.

ಶಾಸಕರಾದ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿಜು ಸುಬ್ರಮಣಿ, ಪ್ರಭಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ತಹಶೀಲ್ದಾರರಾದ ಮಹದೇವಯ್ಯ, ಐಟಿಡಿಪಿ ಅಧಿಕಾರಿ ಪ್ರಕಾಶ್, ಆದಿವಾಸಿ ಮುಖಂಡರಾದ ಅಪ್ಪಾಜಿ, ಮುತ್ತಮ್ಮ ಇತರರು ಇದ್ದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವರು ದಿಡ್ಡಳ್ಳಿ ಗಿರಿಜನರಿಗೆ ಶಾಶ್ವತ ನೆಲೆ ಕಲ್ಪಿಸಲಾಗುವುದು. ಇಲ್ಲಿನ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ದಿಡ್ಡಳ್ಳಿಯಲ್ಲಿ ಅವಕಾಶವಿದ್ದರೆ, ನಿವೇಶನ ಹಾಗೂ ಭೂಮಿ ಹಂಚಿಕೆ ಮಾಡಲಾಗುವುದು, ಇಲ್ಲದಿದ್ದಲ್ಲಿ ಬೇರೆ ಕಡೆ ಭೂಮಿ ಗುರುತಿಸಿ ಎಂದು ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ದಿಡ್ಡಳ್ಳಿ ಹಾಡಿಯ ಮನೆಗಳಿಗೆ ಭೇಟಿ ನೀಡಿ ಆದಿವಾಸಿಗಳ ಅಹವಾಲು ಆಲಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s