ಬೆಂಗಳೂರಿನ ಆಚೆಯೂ ಹೂಡಿಕೆ ಮಾಡಿ : ಸಚಿವ ಆರ್ ವಿ ದೇಶಪಾಂಡೆ

ಭಾರತದ ಜನಸಂಖ್ಯೆ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಯುವ ಭಾರತ ಜಗತ್ತಿನ ಗಮನ ಸೆಳೆಯುತ್ತಿದೆ. ಯೂತ್ ಇಂಡಿಯನ್ ಮತ್ತಷ್ಟೂ ಗಟ್ಟಿಯಾಗಬೇಕಿದ್ದರೆ ಯುವ ಸಮೂಹದ ಕೈಗಳಲ್ಲಿ ಕೆಲಸವಿರಬೇಕು, ಅದರಲ್ಲೂ ಗ್ರಾಮೀಣ ಯುವಕರಿಗೆ ಉದ್ಯೋಗ ಬೇಕೇ ಬೇಕು. ಇನ್ನು ರಾಜ್ಯದಲ್ಲಿ ಊಡಿಕೆ ಮಾಡಲು ಮುಂದಾಗಿರುವ ಬಹುತೇಕ ಕಂಪನಿಗಳಿಗೆ ಬೆಂಗಳೂರೇ ಬೆಸ್ಟ್. ಎಲ್ರೂ ಬಂದು ಬೆಂಗಳೂರಲ್ಲೇ ಕೂತ್ರೆ ಹಳ್ಳಿಗಳಲ್ಲಿನ ನಿರುದ್ಯೋಗದ ಯುವಕರಿಗೆ ಉದ್ಯೋಗ ನೀಡೋದ್ಯಾರು ?

ಉದ್ಯೋಗವನ್ನರಸಿ ಗ್ರಾಮೀಣ ಯುವಕರು ವಲಸೆ ಹೊರಡೋದು ಅನಿವಾರ್ಯ ಎನ್ನುವಂಥಹ ವಾತಾವರಣ ಸೃಷ್ಠಿಯಾಗಿದೆ. ಈ ಸಮಸ್ಯೆಯನ್ನು ಅರಿತ ಸರ್ಕಾರ ರಾಜ್ಯದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಬೆಂಗಳೂರಿನಾಚೆಯೂ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಹೂಡಿಕೆ ಮಾಡಲು ಎಲ್ಲಾ ಸವಲತ್ತುಗಳನ್ನು ನೀಡುತ್ತೇವೆ. ನೀವು ಬೆಂಗಳೂರಿನ ಆಚೆಯೂ ಹೂಡಿಕೆ ಮಾಡಿ ಎಂದು ಹೇಳಿದೆ. ಅಂಥಹ ಮಹತ್ವದ ಹೆಜ್ಜೆಯ ಪೂರ್ವಭಾವಿ ಸಭೆ ಬೆಂಗಳೂರಿನಲ್ಲಿ ನಡೆದಿದೆ. ಆ ಸಭೆಯ ವಿವರ ಇಲ್ಲಿದೆ.

ಬೆಂಗಳೂರಿನ ಬ್ಲೂ ಏಟ್ರಿಯಾ ಹೋಟೆಲ್‍ನಲ್ಲಿ ಕೋಲಾರ ಬೃಹತ್ ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾಗಿದ್ದ ಪೂರ್ವ ಭಾವಿ ಸಭೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೈಗಾರಿಕಾ ಸಚಿವರಾದ ಆರ್ ವಿ ದೇಶಪಾಂಡೆ ಅವರು ಕಂಪನಿಗಳು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ಹೊರಗೆ ಹೋಗಬೇಕಲ್ಲದೆ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗಗಳನ್ನು ಕಲ್ಪಿಸಬೇಕೆಂದು ತಿಳಿಸಿದರು.

ಭಾರತ ದೇಶವು 2025 ಕ್ಕೆ ಯುವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಪ್ರಪಂಚದಲ್ಲೇ ಅತಿ ಹೆಚ್ಚು ಯುವಕರು ಭಾರತ ದೇಶದಲ್ಲಿ ಇರುತ್ತಾರೆ. ಈ ಯುವಕರಿಗೆ ಉದ್ಯೋಗಗಳನ್ನು ಎಲ್ಲಿಂದ ನೀಡಬೇಕು. ಇದಕ್ಕಾಗಿಯೇ ಕಂಪನಿಗಳ ನಿರ್ಮಾಣಕ್ಕೆ ಸರ್ಕಾರ ಆದ್ಯತೆ ನೀಡುತ್ತದೆ. ಈ ಕಂಪನಿಗಳು ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು.

ಸಾಕಷ್ಟು ಕಂಪನಿಗಳು ಕೇವಲ ಬೆಂಗಳೂರಿನಲ್ಲಿಯೇ ಇವೆ. ಇದರಿಂದಲೇ ಬೆಂಗಳೂರಿನಲ್ಲಿ ಟ್ರಾಪಿಕ್ ಸಮಸ್ಯೆ ಹೆಚ್ಚಾಗಿದೆ. ಮಾಲಿನ್ಯ ಹೆಚ್ಚಾಗುತ್ತಿದೆ. ಅದಕ್ಕಾಗಿಯೇ ಸರ್ಕಾರವೂ ಸಹ ಬೆಂಗಳೂರಿನಿಂದ ಹೊರಗೆ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜನ ನೀಡುತ್ತಿದೆ. ಕಂಪನಿಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ ಎಂದು ನುಡಿದರು.

ಕೈಗಾರಿಕೆಗಳು ಕೋಲಾರ ಜಿಲ್ಲೆಯ ನರಸಾಪುರ, ವೇಮಗಲ್, ಮಾಲೂರು, ದಾರವಾಡ, ಜಕ್ಕಸಂದ್ರ, ಬೆಳಗಾಂ, ಧಾರವಾಡ, ನಂಜನಗೂಡು ಈ ರೀತಿಯಾಗಿ ಎಲ್ಲೆಡೆ ಹೋಗಬೇಕು. ಅಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗಗಳನ್ನು ಕಲ್ಪಿಸಬೇಕು. ಕರ್ನಾಟಕದಲ್ಲಿ ಹೆಚ್ಚು ಕಂಪನಿಗಳು ಬರಲು ಬಹುಮುಖ್ಯ ಕಾರಣವೇ ಇಲ್ಲಿನ ಯುವ ಶಕ್ತಿ ಎಂದು ಹೇಳಿದರು.

ಆಧುನಿಕ ಯುಗದಲ್ಲಿ ತಾಂತ್ರಿಕತೆಯನ್ನು ಬಳಕೆ ಮಾಡಿಕೊಳ್ಳುವುದೇ ಅಲ್ಲದೆ ಯುವಕರಿಗೆ ಉದ್ಯೋಗಗಳನ್ನು ಸೃಷ್ಠಿಸಬೇಕು. ಯುವಕರಿಗೆ ಉದ್ಯೋಗಗಳನ್ನು ಕಲ್ಪಿಸಬೇಕೆಂದು ಸರ್ಕಾರವು ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿವೆ. ಇದಕ್ಕೆ ಕೌಶಲ್ಯ ತರಬೇತಿಯನ್ನೂ ಸಹ ಸರ್ಕಾರವು ನೀಡುತ್ತಿದೆ ಎಂದು ತಿಳಿಸಿದರು.

ಕೋಲಾರ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಅಂತರ್ಜಲ ಬತ್ತಿ ಹೋಗಿದೆ. ಆದರೂ ಸಹ ಅಲ್ಲಿನ ರೈತರು ಉತ್ತಮವಾಗಿ ಕೃಷಿಯನ್ನು ಮಾಡಿ ರಾಜ್ಯಕ್ಕೆ ಹಣ್ಣುಗಳು, ತರಕಾರಿ, ಹಾಲು, ರೇಷ್ಮೆಯನ್ನು ನೀಡುತ್ತಿದ್ದಾರೆ. ಕೋಲಾರದ ಜನತೆ ಕೇವಲ ಬುದ್ದಿವಂತರು ಮಾತ್ರವೇ ಅಲ್ಲದೇ ಶ್ರಮಜೀವಿಗಳೂ ಸಹ ಆಗಿದ್ದಾರೆ ಎಂದು ನುಡಿದರು.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈಲ್ವೇ ಕೋಚ್ ಪ್ಯಾಕ್ಟರಿಯನ್ನು ನಿರ್ಮಾಣ ಮಾಡುತ್ತಿದ್ದು ಇದಕ್ಕೆ ಬಜೆಟ್‍ನಲ್ಲಿ ಹಣವನ್ನು ಬಿಡುಗಡೆಗೊಳಿಸಲಾಗಿದೆ. ಈ ಕೋಚ್ ಪ್ಯಾಕ್ಟರಿಯಿಂದಲೂ ಸಹ ಸಾಕಷ್ಟು ಮಂದಿ ಯುವಕರಿಗೆ ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಆರ್.ರಮೇಶ್ ಕುಮಾರ್, ಸಂಸದರಾದ ಕೆ.ಹೆಚ್.ಮುನಿಯಪ್ಪ, ಜಿಲ್ಲಾಧಿಕಾರಿ, ಜಿಲ್ಲಾಡಳಿತ, ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s