ಮಹಿಳೆ-ಮಕ್ಕಳ ರಕ್ಷಣೆಗೆ ಪಿಂಕ್ ಪೊಲೀಸ್, ಸುರಕ್ಷತೆ ಆ್ಯಪ್‍ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

index1ಬೆಂಗಳೂರು ನಗರದಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ 51 ಹೊಸ ಪಿಂಕ್ ಹೊಯ್ಸಳ ಗಸ್ತು ವಾಹನವನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು.

ವಿಧಾನ ಸೌಧದ ಮುಂಭಾಗದಲ್ಲಿ ಒಳಾಡಳಿತ ಇಲಾಖೆ ಇಂದು ಏರ್ಪಡಿಸಿದ್ದ ಪಿಂಕ್ ಹೊಯ್ಸಳ ವಾಹನಗಳ ಉದ್ಘಾಟನೆ ಹಾಗೂ ಬೆಂಗಳೂರು ನಗರ ಪೊಲೀಸ್ ಸುರಕ್ಷಾ ಆ್ಯಪ್‍ಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಮುಖ್ಯಮಂತ್ರಿಗಳು ನಗರದಲ್ಲಿ ಪೊಲೀಸರ ಸುರಕ್ಷಾ ಆ್ಯಪ್ ಕಾರ್ಯ ವೈಖರಿ ನೋಂದಾಯಿಸುವ ಮೊಬೈಲ್ ಸಂಖ್ಯೆಯನ್ನು ತುರ್ತು ಸಹಾಯದ ಕೋರಿಕೆಯನ್ನು ಕಮಾಂಡರ್ ಸೆಂಟರ್ ಸ್ವೀಕರಿಸಿ ತಕ್ಷಣ ತುರ್ತು ಪರಿಸ್ಥಿತಿಯಲ್ಲಿರುವ ವ್ಯಕ್ತಿಯ ಸ್ಥಳವನ್ನು ಗುರುತಿಸಿ ತಕ್ಷಣವೇ ಎಚ್ಚರಿಕೆ ಸಂದೇಶ ರವಾನಿಸುವ ಆ್ಯಪ್ ಇದಾಗಿದೆ ಎಂದರು.

indexಇತ್ತೀಚೆಗೆ ಮಹಿಳೆಯರ ಮೇಲೆ ದೌರ್ಜನ್ಯಗಳು ಸರಗಳ್ಳತನ ಹಾಗೂ ಇತರೆ ಅಪರಾಧಗಳು ನಡೆಯುತ್ತಿರುತ್ತಿವೆ.  ಪೊಲೀಸ್ ಇಲಾಖೆ ಇಂತಹ ಕೃತ್ಯಗಳನ್ನು ತಕ್ಷಣ ಬೇಧಿಸಲು ಈ ಆ್ಯಪ್ ಕೆಲಸ ಮಾಡುತ್ತದೆ ಎಂದ ಮುಖ್ಯಮಂತ್ರಿಗಳು ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಿದಲ್ಲಿ ನಗರ ಪ್ರದೇಶಗಳಲ್ಲಿನ ಅಪರಾಧಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದರು.

ಇತ್ತೀಚೆಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕೆಲಸ ಮಾಡುತ್ತಿದ್ದರೂ ಅಪರಾಧಗಳು ಕಡಿಮೆಯಾಗುತ್ತಿಲ್ಲ.  ಹೀಗಾದಲ್ಲಿ ಏನೂ ಪ್ರಯೋಜನವಾಗದು ಎಂದು ನುಡಿದ ಮುಖ್ಯಮಂತ್ರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ ಜನರ ವಿಶ್ವಾಸಗಳಿಸಿ ಕಾರ್ಯನಿರ್ವಹಿಸಬೇಕು ಎಂದರು.  ಮಹಿಳೆಯರ ಸುರಕ್ಷತೆಗಾಗಿ ಸರ್ಕಾರ ಆದ್ಯತೆ ಮೇಲೆ ಕೆಲಸ ನಿರ್ವಹಿಸುತ್ತಿದೆ.  ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s