‘ಭಗವಾನ್ ಮಹಾವೀರರು ಅಹಿಂಸಾ ಮಾರ್ಗದ ಪ್ರತಿಪಾದಕರು’

ಭಗವಾನ್ ಮಹಾವೀರರು ಅಹಿಂಸಾ ಮಾರ್ಗದ ಪ್ರತಿಪಾದಕರು, ರಾಜ ಮನೆತದಲ್ಲಿ ಜನನಿಸಿದ ಅವರು ಸಕಲ ಭೋಗ ಭಾಗ್ಯಗಳನ್ನು ತೊರೆದು, ದೀರ್ಘ ತಪಸ್ಸಿನ ಮೂಲಕ ಜ್ಞಾನದ ಬೆಳಕು ಕಂಡು ಕೊಂಡವರು ಎಂದು  ಜಿ.ಪಂ.ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಅವರು ಹೇಳಿದರು.

Haveri01

ನಗರದ ಬಸ್ತಿ ಓಣಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

 

ಸಮಾಜದಲ್ಲಿನ ಮೂಢನಂಬಿಕೆ, ಪ್ರಾಣಿಬಲಿಯಂತಹ ದುಷ್ಟ ಆಚರಣೆಗಳನ್ನು ತೊಡೆದುಹಾಕಿ, ಅಹಿಂಸೆ ಮತ್ತು ಸಮಾನತೆಗಾಗಿ ನಿರಂತರ ಶ್ರಮಿಸಿದರು. ಜೈನಧರ್ಮದಲ್ಲಿ ಮಹಾವೀರ ಅವರನ್ನು 24ನೇ ತೀರ್ಥಂಕರರೆಂದು ಗೌರವಿಸಲಾಗಿದೆ. ಮಹಾವೀರರು ಜಗದ ಉದ್ಧಾರಕ್ಕಾಗಿ ರಾಜಭೋಗ ತೊರೆದು ಕಠಿಣ ತಪಸ್ಸುಮಾಡಿ, ಕೇವಲಜ್ಞಾನ ಸಂಪಾದಿಸಿ ಜಗತ್ತಿಗೆ ಶಾಂತಿಯ ಸಂದೇಶ ಸಾರಿದರು.ಜೈನ ಪರಂಪರೆಯ ಪ್ರಕಾರ ಮಹಾವೀರರು 24ನೇ ತೀರ್ಥಂಕರರು, ಜೈನರು ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.  ಧರ್ಮ, ಜಾತಿ ಬೇಧಭಾವವಿಲ್ಲದೆ ಎಲ್ಲರೂ ಒಂದಾಗಿ ಭಗವಾನ್ ಮಹಾವೀರರ ಜಯಂತಿ ಆಚರಿಸೋಣ ಎಂದರು.

Haveri 2

ಬ್ರಹ್ಮಚಾರಾಣಿ ಸುಮಂಗಲಮ್ಮ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ  ಶಿವಬಸಪ್ಪ ಹಲಗಣ್ಣನವರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಉಪವಿಭಾಗಾಧಿಕಾರಿ ಬಸವರಾಜ ಸೋಮಣ್ಣನವರ, ತಹಶೀಲ್ದಾರ ಜಗದೀಶ ಮಜ್ಜಗಿ, ದಿಗಂಬರ ಜೈನ ಸಮಾಜದ ಮಹಾವೀರ ಉಪಾಧ್ಯ, ಆದಿರಾಜ ಮುರಗಿ, ಶ್ವೇತಾಂಬರ ಜೈನ ಸಮಾಜದ ಟಿ.ಡಿ.ರಾಥೋಡ್ ಅವರು ಸೇರಿದಂತೆ ಸಮಾಜದ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಮೆರವಣಿಗೆ:

ಕಾರ್ಯಕ್ರಮ ನಂತರ ನಗರದ ದಿಗಂಬರ ಜೈನ ಬಸದಿಯಿಂದ ಮಹಾವೀರ ತೀರ್ಥಂಕರರ ಮೆರವಣಿಗೆ ಜಿ.ಪಂ.ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಅವರು ಚಾಲನೆ ನೀಡಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s