‘ಅಹಿಂಸಾ ತತ್ವ ಪಾಲನೆ ಮಹಾವೀರರ ಸರ್ವಕಾಲಿಕ ಸತ್ಯ ಸಂದೇಶ’

koppalಅಹಿಂಸೆಯೇ ಪರಮ ಧರ್ಮ ಎಂಬ ಭಗವಾನ್ ಮಹಾವೀರರ ಅಹಿಂಸಾ ತತ್ವ ಪಾಲನೆಯು ಸರ್ವಕಾಲಕ್ಕೂ ಪ್ರಸ್ತುತವೆನಿಸುವ ಸಂದೇಶವಾಗಿದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.

 

ಕೊಪ್ಪಳ ನಗರದ ನಗರದ ಮಹಾವೀರ ಜೈನ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಭಗವಾನ್ ಮಹಾವೀರ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

 

k3ಅಹಿಂಸೆಯೇ ಪರಮ ಧರ್ಮ ಎಂಬುದು ಭಗವಾನ್ ಮಹಾವೀರರ ಸರ್ವಕಾಲಿಕ ಸತ್ಯವಾದ   ಸಂದೇಶವಾಗಿದೆ.   ಅಹಿಂಸಾ ತತ್ವ ಹಾಗೂ ಮಾನವೀಯ ಮೌಲ್ಯಗಳನ್ನು ನಾವು ಜೈನ ಸಮುದಾಯದಲ್ಲಿ ಹೆಚ್ಚು ಕಾಣಲು ಸಾಧ್ಯ.  ಕರ್ನಾಟಕ ರಾಜ್ಯ, ಇಡೀ ದೇಶದಲ್ಲಿಯೇ ಭಗವಾನ್ ಮಹಾವೀರರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುತ್ತಿರುವ ಮೊದಲ ರಾಜ್ಯವಾಗಿದೆ.

 

k2ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮಹಾವೀರರ ಅಹಿಂಸಾ ತತ್ವಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಿದ್ದಾರೆ.  ಕೊಪ್ಪಳ ನಗರದಲ್ಲಿ ನಿರ್ಮಿಸಲಾಗುತ್ತಿರುವ ಮಹಾವೀರ ಜೈನ ಬೃಹತ್ ಭವನಕ್ಕೆ ಈಗಾಗಲೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ಅನುದಾನವನ್ನು ನೀಡಿದ್ದು, ಇನ್ನೂ 10 ಲಕ್ಷ ರೂ. ಗಳ ಅನುದಾನವನ್ನು ಒದಗಿಸಿ, ಉತ್ತಮ ಭವನ ನಿರ್ಮಿಸಲು ಸಹಕರಿಸಲಾಗುವುದು.  ಅಲ್ಲದೆ ಇಲ್ಲಿನ ಗೋಶಾಲಾ ರಸ್ತೆಗೆ ಭಗವಾನ್ ಮಹಾವೀರ ರಸ್ತೆ ಎಂಬುದಾಗಿ ಹಾಗೂ ಬಹದ್ದೂರಬಂಡಿ-ಚುಕ್ಕನಕಲ್ ಕೂಡು ರಸ್ತೆಯ ವೃತ್ತಕ್ಕೆ ಭಗವಾನ ಮಹಾವೀರ ವೃತ್ತ ಎಂದು ನಾಮಕರಣಗೊಳಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು.

 

k4ಭಗವಾನ ಮಹಾವೀರರ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಎಸ್.ಎಂ. ಕಂಬಾಳಿಮಠ ಅವರು,  ಅಹಿಂಸಾ ತತ್ವವು ಮಾನವ ಸಮಾಜಕ್ಕೆ ನೀಡಿದ ಅನನ್ಯ ಸಂದೇಶವಾಗಿದೆ.  ಹಿಂದೂ, ಜೈನ್, ಬೌದ್ಧ, ಸಿಖ್ ಸೇರಿದಂತೆ ಎಲ್ಲ ಧರ್ಮಗಳು ಮಾನವನ ಒಳಿತನ್ನೇ ಬಯಸಿ, ವಿಚಾರಗಳನ್ನು ಹೊಂದಿವೆ.  ಈ ನಾಡಿನ ಬಹುತೇಕ ಶರಣರು, ಮಹನೀಯರು ಅಹಿಂಸಾ ತತ್ವವನ್ನೇ ಮನುಕುಲಕ್ಕೆ ಬೋಧಿಸಿದ್ದಾರೆ.  ಶರಣರ ವಚನಗಳೂ ಕೂಡ ‘ದಯವೇ ಧರ್ಮದ ಮೂಲವಯ್ಯ’, ‘ಕಳಬೇಡ-ಕೊಲಬೇಡ ಹುಸಿಯ ನುಡಿಯಲು ಬೇಡ’ ಮುಂತಾದ ಅಹಿಂಸೆಯ ಸಂದೇಶವನ್ನೇ ನೀಡಿವೆ.   ಧರ್ಮಗಳಲ್ಲಿನ ಮೌಢ್ಯತೆಗಳು, ಅಜ್ಞಾನ, ಮೂಢ ನಂಬಿಕೆಗಳಿಂದ ನಲುಗಿದ್ದ ಸಮಾಜಕ್ಕೆ ಮಹಾವೀರರು, ಅಹಿಂಸೆಯ ತತ್ವಗಳನ್ನು ಬೋಧಿಸಿ, ಸುಧಾರಣೆಗೆ ಶ್ರಮಿಸಿದರು.

 

k6ಮಹಾವೀರರು,  ರಾಜಮನೆತನದಲ್ಲಿ ಹುಟ್ಟಿದರೂ, ಮನುಷ್ಯ-ಮನುಷ್ಯನಂತೆ ಬದುಕಲು, ವ್ಯಸನ ಮುಕ್ತ ಜೀವನ ನಡೆಸಲು, ಸಕಲ ಸುಖ ವೈಭೋಗಗಳನ್ನು ತ್ಯಜಿಸಿ ಅವರು ಸನ್ಯಾಸಿಯಾದರು.  ತ್ಯಾಗಮೂರ್ತಿಗಳಾಗಿದ್ದ ಮಹಾವೀರರು, ಅಹಿಂಸಾ ತತ್ವಗಳ ಬಗ್ಗೆ ದಾಖಲೀಕರಣ ಮಾಡಿದ್ದರಿಂದ, ಅವರ ಸಂದೇಶಗಳನ್ನು ಇತರರು ಅರಿತುಕೊಳ್ಳಲು ಸಾಧ್ಯವಾಗಿದೆ.   ಕೊಪ್ಪಳ ಜಿಲ್ಲೆಯೂ ಕೂಡ ಬೌದ್ಧ ಧರ್ಮದ ವಿಕಾಸಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ.  ಜೈನ ಕಾಶಿ ಎಂದೇ ಖ್ಯಾತವಾಗಿರುವ ಈ ಜಿಲ್ಲೆಯಲ್ಲಿ ಭೌದ್ಧ ಧರ್ಮ ಸ್ವೀಕರಿಸಿದ್ದ ಅಶೋಕ ಚಕ್ರವರ್ತಿಯ ಶಿಲಾ ಶಾಸನಗಳು ಇಲ್ಲಿ ಕಂಡುಬಂದಿರುವುದು, ಇದಕ್ಕೆ ಸಾಕ್ಷಿಯಾಗಿದೆ.   ಜೈನಧರ್ಮದ ತತ್ವ, ಸಂದೇಶಗಳು ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪೂರಕವಾಗಿವೆ ಎಂದರು.

k7ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಜೈನ ಸಮಾಜದ ವತಿಯಿಂದ ರಕ್ತದಾನ ಶಿಬಿರವನ್ನು ಜೈನ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.  ಕಾರ್ಯಕ್ರಮಕ್ಕೂ ಮುನ್ನ ನಗರದ ಅಶೋಕ ವೃತ್ತದ ಬಳಿಯಿಂದ ಭಗವಾನ್ ಮಹಾವೀರರ ಭಾವಚಿತ್ರದ ಮೆರವಣಿಗೆಗೆ ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಚಾಲನೆ ನೀಡಿದರು.  ಜವಾಹರ ರಸ್ತೆ, ಗಡಿಯಾರ ಕಂಭ ಮೂಲಕ ಮಹಾವೀರ ಜೈನ ಭವದವರೆಗೆ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.  ಮೆರವಣಿಗೆಯಲ್ಲಿ ಹಲವು ಕಲಾತಂಡಗಳು ಪಾಲ್ಗೊಂಡು, ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s