ನಮ್ಮ ನಡಿಗೆ ಖಿನ್ನತೆಯಿಂದ ಉತ್ಸಾಹದೆಡೆಗೆ

ವಿಶ್ವ ಆರೋಗ್ಯ ದಿನಾಚರಣೆಯನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳು ಆಚರಿಸುತ್ತಿವೆ. ಭಾರತದ ಎಲ್ಲಾ ರಾಜ್ಯಗಳಲ್ಲೂ  ಆಚರಿಸಲಾಗುತ್ತಿದೆ. ನಮ್ಮ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕಾರ್ಯಕ್ರಮಗಳು ಜರುಗಿವೆ. ‘ಖಿನ್ನತೆಯಿಂದ ಉತ್ಸಾಹದೆಡೆಗೆ’ ಎಂಬ ಘೋಷವಾಕ್ಯದೊಂದಿಗೆ ರಾಜ್ಯಾದ್ಯಂತ ಕಾರ್ಯಕ್ರಮಗಳು ಏರ್ಪಟ್ಟಿವೆ. ಈ ವೇಗದ ಜಗತ್ತಿನಲ್ಲಿ ಅದರ ವೇಗಕ್ಕನುಗುಣವಾಗಿ ಬದಲಾದ ಜೀವನ ಶೈಲಿಯಿಂದ ಇಂದು ಯಾವ ವಯೋಮಾನದಲ್ಲಿ ಯಾರಿಗೆ ಯಾವ ಖಾಯಲಿ ಬರುತ್ತೋ ಹೇಳಕ್ಕಾಗಲ್ಲ.

ಹೊಸ ಹೊಸ ಆವಿಷ್ಕಾರಗಳು ನಡೆದಂತೆಲ್ಲಾ ಹೊಸ ಹೊಸ ಖಾಯಿಲೆಗಳು ಹುಟ್ತಾನೇ ಇವೆ. ಒಂದಕ್ಕೆ ಮೆಡಿಸನ್ ಸಿಕ್ತು ಅನ್ನುವಷ್ಟರಲ್ಲಿ ಇನ್ನೊಂದು ಹೊಸ ಖಾಯಿಲೆ ಬಂದು ಬಿಟ್ಟಿರುತ್ತೆ. ಇದಕ್ಯಾವ ಹೆಸ್ರು ಕೊಡ್ಬೇಕು ಅಂತ ತಜ್ಞರು ತೀರ್ಮಾನ ಮಾಡುವಷ್ಟರಲ್ಲಿ ಮತ್ತೊಂದು ಬಗೆಯ ಖಾಯಿಲೆ ರೆಡಿ ಇರುತ್ತೆ. ಅಂಥಹ ಹಲವು ಖಾಯಲಿಗಳ ಪಟ್ಟಿಯಲ್ಲಿ ಖಿನ್ನತೆಯ ಖಾಯಿಲೆಯೂ ಒಂದು.

ಒತ್ತಡದ ಪರಿಸ್ಥಿತಿ ಎಲ್ರಿಗೂ ಇರುತ್ತೆ. ಒಂದು ಹಂತದವರೆಗೂ ಎಲ್ಲರೂ ಒತ್ತಡವನ್ನು ಮ್ಯಾನೇಜ್ ಮಾಡ್ತಾರೆ. ಕೆಲವೊಮ್ಮೆ ಪರಿಸ್ಥಿತಿ ಕೈಮೀರುತ್ತಲ್ಲಾ, ಆಗ ಖಿನ್ನತೆ ಖಾಯಿಲೆ ರೂಪ ಪಡೆಯುತ್ತೆ. ಖಿನ್ನತೆಯ ಸೂಚನೆಗಳು ಸಿಕ್ಕಿದ ತಕ್ಷಣ ಅದರಿಂದ ಆಚೆ ಬರೋದು ಹೇಗೆ ಅಂತ ದಾರಿನೂ ಗೊತ್ತಿರುತ್ತೆ ಎರಡೆಜ್ಜೆ ಪ್ರಯತ್ನಪಟ್ರೆ ಮುಗೀತು ನೀವು ಸೇಫ್.

ಜಗತ್ತಿನಲ್ಲಿ ನೀವು ಪೂರ್ತಿ ನಂಬುವಂಥಹ ಜೀವವೊಂದು ಇದ್ದೇ ಇರುತ್ತಲ್ಲಾ, ಅವರ ಹತ್ತಿರ ಮುಕ್ತವಾಗಿ ಮಾತನಾಡಿ. ನಿಮ್ಮೆಲ್ಲಾ ಶಂಕೆ, ಒತ್ತಡ ಮಾನಸಿಕ ತಳಮಳ ಏನೇನಿದೆಯೋ ಎಲ್ಲವನ್ನೂ ಹೇಳಿಕೊಳ್ಳಿ. ಸಾಧ್ಯವಾದ್ರೆ ನಿಮಗೆ ಘಾಸಿ ಮಾಡಿರುವ ವಿಚಾರದ ಕುರಿತು ಚರ್ಚೆ ಮಾಡಿ. ಏನಾದ್ರೂ ಸಲಹೆಗಳು ಬಂದ್ರೆ ಮುಕ್ತವಾಗಿ ತಗೊಳ್ಳಿ. ಸಡನ್ನಾಗಿ ಜಾರಿಯಾಗಬೇಕೆಂದೇನೂ ಇಲ್ಲ. ಹಂತ ಹಂತವಾಗಿ ನೀವು ಪಡೆದ ಸಲಹೆಗೆ ಒಗ್ಗಿಕೊಳ್ಳಿ. ಪುಟ್ಟ ಮಕ್ಕಳೊಂದಿಗೆ ಕೆಲ ಕಾಲ ಕಳೆಯಿರಿ. ಒಳ್ಳೆಯ ಸಂಗೀತ ಕೇಳಿ. ಅಥವಾ ನಿಮ್ಮ ಇಷ್ಟದ ಹಾಬಿಯಲ್ಲಿ ಕಳೆದು ಹೋಗಿ.

ಖುಷಿ, ನೆಮ್ಮದಿಗಿಂತ ಮಿಗಿಲಾದ್ದು ಈ ಜಗತ್ತಿನಲ್ಲಿ ಏನೂ ಇಲ್ಲ. ನೀವು ಹಾಯಾಗಿದ್ದು ಸಾಧ್ಯವಿದ್ದರೆ ನಿಮ್ಮ ನೆರೆಹೊರೆಯವರನ್ನೂ ಖುಷಿಯಾಗಿಡಿ. ಇಲ್ಲಿ ಯಾರಿಗೂ ಎರಡು ಬದುಕುಗಳಿಲ್ಲ. ಸುಮ್ಮನೆ ಖಿನ್ನತೆಯಿಂದ ಅಮೂಲ್ಯ ಜೀವನಕ್ಕೇಕೆ ಶಿಕ್ಷೆ ಕೊಡ್ಬೇಕು ಅಲ್ವಾ ? ಈ ಖಿನ್ನತೆಯ ಕುರಿತು ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ  ಕೋಲಾರದಲ್ಲಿ ಆಚರಿಸಲಾಗಿದೆ. ಕಾರ್ಯಕ್ರಮದ ವಿವರವನ್ನು ಇಲ್ಲಿ ನೋಡಬಹುದು.

ಖಿನ್ನತೆ ಮನಸ್ಸಿಗೆ ಬರುವ ಕಾಯಿಲೆಯಾಗಿದ್ದು ಇದರಿಂದ ಹೊರಬರುವ ಆತ್ಮಸ್ಥೈರ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಖಿನ್ನತೆ ಎಂಬುವುದು ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುತ್ತದೆ. ಇದಕ್ಕೆ ನಿಗದಿತ ವಯೋಮಾನ ಇರುವುದಿಲ್ಲ. ಎಲ್ಲಾ ವಯೋಮಾನದವರಿಗೂ ಖಿನ್ನತೆಯ ಕಾಯಿಲೆ ಬರುವ ಸಾಧ್ಯತೆ ಇದೆ. ಹಾಗಾಗಿ ಇದನ್ನು ನಿರ್ಲಕ್ಷಿಸಬಾರದು ಎಂದು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ನುಡಿದರು.

ಒತ್ತಡದಿಂದ ದೂರವಿರಿ

ಬಿ.ಪಿ, ಶುಗರ್ ರೀತಿ ಇದೂ ಒಂದು ಖಾಯಿಲೆ, ಹೆಣ್ಣು ಮತ್ತು ಗಂಡು ಇಬ್ಬರಿಗೂ ಖಿನ್ನತೆ ಖಾಯಿಲೆ  ಬರುತ್ತದೆ. 15 ರಿಂದ 29 ವರ್ಷದೊಳಗಿನವರು ಖಿನ್ನತೆಗೆ ಒಳಗಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗಿರುತ್ತದೆ. ಖಿನ್ನತೆಯು ಜೀವನವನ್ನೇ ಕಳೆದುಕೊಳ್ಳುವ ಸ್ಥಿತಿಗೆ ದೂಡುತ್ತದೆ, ಹೆಚ್ಚಾಗಿ ಗಂಡಸರು ಖಿನ್ನತೆ ಒಳಗಾಗುತ್ತಾರೆ ಎಂದು ಸಮೀಕ್ಷೆ ತಿಳಿಸುತ್ತದೆ. ಖಿನ್ನತೆ ಖಾಯಿಲೆ ಬಂದವರಿಗೆ ಅವರದೇ ವೈಯುಕ್ತಿಕ ಸಮಸ್ಯೆಗಳಿರುತ್ತವೆ. ಮನಸ್ಸನ್ನು ಘಾಸಿಗೊಳಿಸುವ ವಿಚಾರಗಳನ್ನು, ಮನದಾಳದ ತೊಳಲಾಟಗಳನ್ನು ಸ್ನೇಹಿತರೊಂದಿಗೆ ಹಂಚಿಕೊಂಡಾಗ ಒಂದಷ್ಟು ಸಮಾಧಾನ ದೊರೆಯುತ್ತದೆ. ಈ ರೀತಿ ಹಂಚಿಕೊಳ್ಳುವುದರಿಂದ ಖಿನ್ನತೆಗೆ ಒಳಗಾಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.

ನೀವೂ ಮಾತನಾಡಿ

ಈ ಬಾರಿಯ ಘೋಷ ವಾಕ್ಯ ಖಿನ್ನತೆ (ಬೇಜಾರು ಕಾಯಿಲೆ) – ನಾವು ಮಾತನಾಡೋಣ ಎಂಬುವುದಾಗಿದೆ. ಖಿನ್ನತೆಗೆ ನಾವು ಗುರಿಯಾಗಬಾರದು. ಅಷ್ಟೇ ಅಲ್ಲದೆ ಬೇರೆಯವರೂ ಸಹ ಈ ರೀತಿಯ ಖಿನ್ನತೆಗೆ ಒಳಗಾಗದಂತೆ ನೋಡಿಕೊಳ್ಳುವ ಪರಿಪಾಠವನ್ನು ಎಲ್ಲರೂ ಬೆಳಸಿಕೊಳ್ಳಬೇಕು. ಯಾರಾದರೂ ಖಿನ್ನತೆಗೆ ಒಳಗಾಗುವಂತಿದ್ದರೆ ಅವರೊಂದಿಗೆ ಮಾತನಾಡುವುದೇ ಅಲ್ಲದೆ ಸೂಕ್ತ ಸಲಹೆ ನೀಡಬೇಕು. ಅಗತ್ಯವಿದ್ದರೆ ತಜ್ಞರಿಗೆ ದೂರು ನೀಡುವ ಕೆಲಸ ಮಾಡಬೇಕು ಎಂದರು.

ಕೋಲಾರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿಶ್ವ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯ್ತು. ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s