ಬಾಬೂಜಿ ಹಸಿರು ಕ್ರಾಂತಿಯ ಹರಿಕಾರರಾಗಿದ್ದು ಹೀಗೆ

2ಶೋಷಿತ ಸಮುದಾಯಗಳು ಸರ್ಕಾರ ರೂಪಿಸಿದ ಮೂಲಭೂತ ಸೌಕರ್ಯಗಳ ಸೌಲಭ್ಯ ಪಡೆದುಕೊಳ್ಳಬೇಕು ಕೆಳ ಸಮುದಾಯದಲ್ಲಿ ವಾಸಿಸುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ರಸ್ತೆ, ನೀರು, ವಾಸಿಸಲು ಮನೆ, ಶಿಕ್ಷಣ, ಮುಂತಾದ ಯೋಜನೆಗಳನ್ನು ಸರ್ಕಾರದಿಂದ ಒದಗಿಸಲಾಗುತ್ತಿದೆ. ಅವೆಲ್ಲವುಗಳನ್ನು ಪಡೆದು ಸ್ವಾಭಿಮಾನ ಹಾಗೂ ಆದರ್ಶ ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಚೈತ್ರಾ ಶಿರೂರು ತಿಳಿಸಿದರು.

2ಧಾರವಾಡ ನಗರದ ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ನಡೆದ ಹಸಿರು ಕ್ರಾಂತಿ ಹರಿಕಾರ ಭಾರತದ ಮಾಜಿ ಉಪಪ್ರಧಾನಿ ಡಾ ಬಾಬು ಜಗಜೀವನರಾಂ ಅವರ 110 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಸಿರು ಕ್ರಾಂತಿಯ ಹರಿಕಾರ:

ಜಾತಿ ಹುಟ್ಟಿನಿಂದ ಬಂದಿದ್ದಲ್ಲ, ವೃತ್ತಿಯಿಂದ ಬಂದದ್ದು ಮೇಲು ಕೀಳು, ವರ್ಣಬೇದ ಮಾಡುವುದರಿಂದ ವ್ಯಕ್ತಿಯು ದೊಡ್ಡವನಾಗುವುದಿಲ್ಲ, ಡಾ.ಬಾಬು ಜಗಜೀವನರಾಂ ಅವರ ಪ್ರತಿಭೆಯಿಂದ ಉನ್ನತ ಹುದ್ದೆ ಅಲಂಕರಿಸಿದವರು. 3ಡಾ.ಬಾಬು ಜಗಜೀವನರಾಂ ಅವರು ಕೃಷಿಮಂತ್ರಿಗಳಾಗಿ ಕೃಷಿ ಸಲಕರಣೆ ಹಾಗೂ ಕೃಷಿಕರಿಗೆ ಆರ್ಥಿಕ ಸೌಲಭ್ಯ ಒದಗಿಸಿ ಭಾರತಕ್ಕೆ ಆಗಿರುವ ಆಹಾರ ಧಾನ್ಯಗಳ ಕೊರತೆ ನೀಗಿಸಿದ್ದರು ಹಾಗೂ ಹೊರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ ಆಹಾರ ಧಾನ್ಯ ನಿಲ್ಲಿಸಿದರು. ಹೆಚ್ಚು ಕೃಷಿ ಉತ್ಪನ್ನಗಳನ್ನು ಉತ್ಪಾದಿಸಿ ರಪ್ತು ಮಾಡುವ ಹಂತಕ್ಕೆ ತಂದರು. ಆದ್ದರಿಂದ ರೈತರ ಆರ್ಥಿಕ, ಆಹಾರ ಧಾನ್ಯ ಉತ್ಪಾದನೆ ಹೆಚ್ಚಿಸಿದ್ದರಿಂದ ಹಸಿರು ಕ್ರಾಂತಿ ಹರಿಕಾರ ಎಂದು ಕರೆಯಲಾಗುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು.

7ಕೇಂದ್ರ ಸರ್ಕಾರ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಂತರ ಅನೇಕ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದರು ಸತತ 50 ವರ್ಷ ಸಂಸದರಾಗಿ ವಿಶ್ವ ದಾಖಲೆ ಬರೆದ ಡಾ.ಬಾಬು ಜಗಜೀವನರಾಂ ಶೋಷಿತ ಜನಾಂಗದವರಿಗೆ ಸಮಾನತೆಯ ಮೀಸಲಾತಿ, ಆಹಾರ ನೀತಿ ಸೇರಿದಂತೆ ಇನ್ನೂ ಅನೇಕ ನೀತಿಗಳನ್ನು ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಅವರು ನುಡಿದರು.
6ಸನ್ಮಾನ:
ಡಾ.ಬಾಬು ಜಗಜೀವನರಾಂ ಅವರ 110 ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 5 ಮಹನೀಯರಾದ ಸಮಾಜ ಕ್ಷೇತ್ರದಲ್ಲಿ ನಿಂಗಪ್ಪ ದು. ಮುಗಳಿ, ಮತ್ತು ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಸಿದ್ದರಾಜು ಯ.ಹಿಪ್ಪರಗಿ, ಕೃಷಿ ಸಂಶೋಧನೆ ಕ್ಷೇತ್ರದಲ್ಲಿ ಡಾ. ಶಿವ ಸೋಮಣ್ಣ ನಿಟ್ಟೂರ, ಸರ್ಕಾರಿ ಸೇವೆಯಲ್ಲಿ ಡಾ.ದಿವಾಕರ ಕೆ. ಶಂಕಿನದಾಸರ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮಣ್ಣ ಮಾದರ ಅವರನ್ನು ಸನ್ಮಾನಿಸಲಾಯಿತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s