ಡಾ ಹೊ  ಶ್ರೀನಿವಾಸಯ್ಯ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

Microsoft Word - PN-HO SRINIVASAIAHರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸತ್ವ-ಭರಿತ ತತ್ವಗಳು ಹಾಗೂ ಮೌಲಿಕ ಆದರ್ಶಗಳಿಂದ ಪ್ರಭಾವಿತರಾದ ಲಕ್ಷಾಂತರ ಮಂದಿಯಲ್ಲಿ ಶ್ರೀನಿವಾಸಯ್ಯ ಅವರೂ ಒಬ್ಬರು.

ಮೆಕಾನಿಕಲ್ ಇಂಜಿನಿಯರ್ ಆಗಿ ಜರ್ಮನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಶ್ರೀನಿವಾಸಯ್ಯ ಅವರಿಗೆ ಗಾಂಧೀಜಿ ಅವರ ಸರಳತೆಯ ಸಿದ್ದಾಂತ ಅತ್ಯಾಕರ್ಷಕವಾಗಿ ಕಂಡಿತು.

ಸರಳತೆ ಬೋಧಿಸಲು ಸುಲಭ. ಆದರೆ ಪಾಲಿಸಲು ಕಷ್ಟ ಎಂಬುದನ್ನು ಮನಗಂಡ ಶ್ರೀನಿವಾಸಯ್ಯ ಅವರು ಮೊದಲು ಸರಳತಾ ದೀಕ್ಷೆ ಪಡೆದರು.

ಖಾದಿ ಬಟ್ಟೆ ತೊಟ್ಟರು.  ಜಾತ್ಯಾತೀತ ನಿಲುವಿಗೆ ಬದ್ಧರಾದರು.

ಗಾಂಧೀಜಿ ಅವರ ಸಂದೇಶಗಳನ್ನು ಪ್ರಚುರ ಪಡಿಸಲು ಟೊಂಕ ಕಟ್ಟಿ ನಿಂತರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿಯಾಗಿ ಹಾಗೂ ಅಧ್ಯಕ್ಷರಾಗಿ ಮೂರು ದಶಕಗಳಿಗೂ ಹೆಚ್ಚು ಸೇವೆ ಸಲ್ಲಿಸಿದ ಶ್ರೀನಿವಾಸಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಗಾಂಧಿ ಭವನವನ್ನು ಸದಾ ಚಟುವಟಿಕೆಗಳ ಕೇಂದ್ರವನ್ನಾಗಿಸಿದ್ದರು.

ಮದ್ಯಪಾನ ಸಂಯಮ ಹಾಗೂ ಮಾದಕ ವಸ್ತುಗಳ ಬಳಕೆಯ ತಡೆ ಮೂಲಕ ವ್ಯಸನ-ಮುಕ್ತ ಕರ್ನಾಟಕ ರೂಪಿಸಲು ಶ್ರಮಿಸಿದ್ದರು.

ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ವರ್ಷವಿಡೀ ಕಾರ್ಯಕ್ರಮಗಳನ್ನು ರೂಪಿಸಿ ಅತ್ಯಂತ ಸರಳತೆಯಿಂದ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಯೋಜಿಸಿದ್ದರು.

ಶ್ರೀನಿವಾಸಯ್ಯ ಅವರ ಕನಸು ಸಾಕಾರಗೊಳ್ಳುವ ಮುನ್ನವೇ ಅವರು ಇಲ್ಲವಾಗಿದ್ದಾರೆ ಎಂಬುದು ನನ್ನಲ್ಲಿ ಅತ್ಯಂತ ದು:ಖ ಹಾಗೂ ನೋವನ್ನು ಉಂಟು ಮಾಡಿದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s