ಗಾಂಧಿವಾದದ ಹೆಜ್ಜೆ ಗುರುತು ಮೂಡಿಸಿ ಮರೆಯಾದರು ಹೊ ಶ್ರೀನಿವಾಸಯ್ಯ

4ಹಿರಿಯ ಗಾಂಧೀವಾದಿ, ಸ್ವಾತಂತ್ರ್ಯ ಹೋರಾಟಗಾರ ಡಾ. ಹೊ ಶ್ರೀನಿವಾಸಯ್ಯ ಅವರು ಗುರುವಾರ ಮುಂಜಾನೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾದರು.  ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು ಅವರಿಗೆ 93 ವರ್ಷ ವಯಸ್ಸಾಗಿತ್ತು.

ಅವರ ಅಂತಿಮ ಇಚ್ಛೆಯಂತೆ  ಪಾರ್ಥಿವ ಶರೀರವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದೇಹದಾನ ಮಾಡಲಾಗಿದೆ.

ಸರ್ಕಾರವು ಹೊ. ಶ್ರೀನಿವಾಸಯ್ಯನವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಅವರ ಪಾರ್ಥಿವ ಶರೀರಕ್ಕೆ ಸಕಲ ಪೊಲೀಸ್ ಗೌರವ ರಕ್ಷೆ ನೀಡಲು ಅಧಿಸೂಚನೆ ಹೊರಡಿಸಿದೆ.

1925 ರಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಚೌದರಿಕೊಪ್ಪಲು ಗ್ರಾಮದಲ್ಲಿ ಜನಿಸಿದ  ಹೋ ಶ್ರೀನಿವಾಸಯ್ಯ ಅವರದು ಹೋರಾಟದ ಬದುಕು.

9ಅವರು ಇಂಜಿನಿಯರಿಂಗ್ ಪದವೀಧರರು.  ಅವರು ಎಚ್.ಎ.ಎಲ್.ನಲ್ಲಿ ಕಾರ್ಯ ನಿರ್ವಹಿಸಿ ಬಿ.ಇ.ಎಂ.ಎಲ್.ನಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ  1983 ರಲ್ಲಿ ನಿವೃತ್ತಿಗೊಂಡಿದ್ದರು.  ಇವರು 1942-47 ರವರೆಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.  1946ರಲ್ಲಿ ವಂದೇ ಮಾತರಂ ಸಂಗ್ರಾಮದಲ್ಲಿ ಭಾಗವಹಿಸಿದ್ದರು.

61942-50 ರವರೆಗೆ  ಯುವ ಕಾಂಗ್ರೆಸ್ ಸಮಿತಿ ಸದಸ್ಯರಾಗಿದ್ದರು.  1943 ರಲ್ಲಿ ಚರಕ ಕೇಂದ್ರ ಹಾಗೂ ವಯಸ್ಕರ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿದರು.

ಅವರು ಕಳೆದ 25 ವರ್ಷಗಳಿಂದ ಕರ್ನಾಟಕ ಗಾಂಧೀ ಸ್ಮಾರಕ ನಿಧಿಯಲ್ಲಿ ಅಧ್ಯಕ್ಷರಾಗಿದ್ದರು. ಅವರು ಗಾಂಧೀ ಭವನದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.  ಕಳೆದ ನಾಲ್ಕು ದಶಕಗಳಿಂದ ಅವರು ಸಮಾಜ ಸೇವೆ, ಗಾಂಧೀ ತತ್ವಗಳ ಪ್ರಚಾರದಲ್ಲಿ ತೊಡಗಿದ್ದರು.  ಗಾಂಧಿವಾದಿ, ಪತ್ರಕರ್ತ, ಸಮಾಜ ಸೇವೆ, ಸಾಹಿತಿ ಹೀಗೆ ನಾನಾ ಪಾತ್ರಗಳನ್ನು ಇವರು ಯಶಸ್ವಿಯಾಗಿ ನಿರ್ವಹಿಸಿದರು.

8ಸಾವಿರಾರು ಶಾಲಾ ಕಾಲೇಜುಗಳಲ್ಲಿ ಗಾಂಧೀ ಕುರಿತಾದ ಪ್ರವಚನ ನೀಡಿ ಯುವ ಮನಗಳಿಗೆ ಮಾರ್ಗದರ್ಶನ ನೀಡಿದರು.  ಸಹಕಾರ ತತ್ವದ ಮೇಲೆ ಸಹಕಾರ ಬ್ಯಾಂಕ್‍ಗಳನ್ನು ಸ್ಥಾಪಿಸಿದರು.

ಗಾಂಧೀ ಸಾಹಿತ್ಯ ಸಂಘ, ಗ್ರಂಥ ಭಂಡಾರ ಸ್ಥಾಪಿಸಿದರು.  ಪ್ರಕೃತಿ ಜೀವನ ಕೇಂದ್ರದ ಸ್ಥಾಪಕ ಹಾಗೂ ಅಧ್ಯಕ್ಷರಾಗಿದ್ದರು.

 ಕರ್ನಾಟಕ ಅಲ್ಲದೆ ಹೊರ ನಾಡಿನಲ್ಲೂ ತರಗತಿ ವ್ಯವಸ್ಥೆ ಮಾಡಿಸಿದ್ದರು.  ಅವರು ಹುಟ್ಟೂರಾದ ಚೌದರಿಕೊಪ್ಪಲಿನಲ್ಲಿ ಶ್ರೀರಾಮ ಸೇವಾ ಯುವಜನ ಸೇವಾ ಸಂಸ್ಥೆ ಪ್ರಾರಂಭಿಸಿದ್ದರು.

10ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠ, ಬೆಂಗಳೂರು ಶಾಖೆ ಧರ್ಮದರ್ಶಿಗಳು ಸೇರಿದಂತೆ ಇತರ ಧಾರ್ಮಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ವಿವಿಧ ಸ್ಥಾನಗಳಲ್ಲಿ ಕೆಲಸ ನಿರ್ವಹಿಸಿದ್ದರು.  ಇವರು “ಪ್ರಕೃತಿ ಜೀವನ” ಎಂಬ ಕನ್ನಡ ಪತ್ರಿಕೆಯ ಸಂಪಾದಕರಾಗಿದ್ದರು.

ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪ್ರಕೃತಿ ಚಿಕಿತ್ಸೆ ಯೋಗ ಸೇವೆಗಾಗಿ ಸರ್ಕಾರದ ಪತಂಜಲಿ ಸುವರ್ಣ ಪದಕ, ಸಮಾಜ ಸೇವೆಗೆ ರಾಜ್ಯ ಪ್ರಶಸ್ತಿ, ಯೋಗಿಶ್ರೀ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕನ್ನಡಶ್ರೀ, ಕರ್ನಾಟಕ ಶ್ರೀ, ಸಮಾಜ ಸೇವಾಭೂಷಣ ಚುಂಚಶ್ರೀ, ಮಾಸ್ಟರ್ ಆರ್ಟ್ ಮಿಲೆನಿಯಮ್, ವಾರ್ತಾ ಇಲಾಖೆಯಿಂದ ಗಾಂಧೀ ಸೇವಾ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕರ್ಮಯೋಗಿ  ಎಂ.ಎಸ್. ರಾಮಯ್ಯ ಪ್ರಶಸ್ತಿ, ವೂಡೆ ಪ್ರಶಸ್ತಿ, ಡಾ: ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ, ಹಂಸರತ್ನ ಪ್ರಶಸ್ತಿ ಲಭಿಸಿದೆ.  ಇವರಿಗೆ 1988 ರಲ್ಲಿ ದೆಹಲಿ ಪ್ರಕೃತಿ ಚಿಕಿತ್ಸಾ ಪರಿಷತ್ ನಿಂದ ಪ್ರಕೃತಿ ಚಿಕಿತ್ಸೆಗೆ ಗೌರವ ಡಾಕ್ಟರೇಟ್ ಲಭಿಸಿದೆ.

3ಸಾಹಿತಿಯಾಗಿಯೂ ಹೆಸರು ಮಾಡಿದ ಇವರಿಗೆ  ಇವರ “ನಾ ಕಂಡ ಜರ್ಮನಿ” ಕೃತಿಗೆ 1970 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.   ಅಲ್ಲದೆ ಇವರು ನೂರಾರು ಪುಸ್ತಕಗಳನ್ನು ಬರೆದಿದ್ದಾರೆ.  ಅಲ್ಲದೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆದು. ಆಕಾಶವಾಣಿಯ ಮೂಲಕ ಗಾಂಧಿ ಚಿಂತನೆ ಕುರಿತು ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.  ಇವರಿಗೆ ಅನೇಕ ಸನ್ಮಾನಗಳು ಸಂದಿವೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s