ಜನ್ಮದಿನದಲ್ಲೂ ಹಸಿರಾದ ಹಸಿರು ಕ್ರಾಂತಿಯ ಹರಿಕಾರ ಜಗಜೀವನರಾಮ್ ನೆನಪು

2ದೇಶದ ರಾಜಕೀಯ ಮುತ್ಸದ್ದಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಾಜಿ ಉಪ ಪ್ರದಾನಿ ಬಾಬು ಜಗಜೀವನ ರಾಮ್ ಅವರ 110ನೇ ಜನ್ಮ ದಿನಾಚರಣೆಯನ್ನು ಏಪ್ರಿಲ್ 5ರಂದು ರಾಜ್ಯಾಧ್ಯಂತ ಆಚರಿಸಲಾಯಿತು. ಅಸ್ಪೃಶ್ಯತೆ ವಿರುದ್ದ ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಹೋರಾಟ ಮಾಡಿದ್ದವರು ಬಾಬು ಜಗಜೀವನ ರಾಮ್.

ದೇಶದ ಸುದೀರ್ಘ ಅವಧಿಯ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ವಿಶ್ವ ದಾಖಲೆ ಬಾಬೂಜಿ ಅವರ ಹೆಸರಿನಲ್ಲಿದೆ. 1ಸಾಮಾಜಿಕ ಸಮಾನತೆಗಾಗಿ ದುಡಿದ ಅಪೂರ್ವ ಆಡಳಿತಗಾರ ಬಾಬು ಜಗಜೀವನ ರಾಮ್ ಅವರ ಹುಟ್ಟು ಹಬ್ಬವನ್ನು ತುಳಿತಕ್ಕೊಳಗಾದ ಜನರ ಆಶಾಕಿರಣವಾಗಿ ರಾಷ್ಟ್ರದೆಲ್ಲೆಡೆ ಆಚರಿಸಲಾಗುತ್ತಿದೆ.

ಮುಖ್ಯಮಂತ್ರಿಗಳಿಂದ ಗೌರವಾರ್ಪಣೆ:

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ರೈಲ್ವೇ ನಿಲ್ದಾಣ ವೃತ್ತದ ಬಳಿ ಇರುವ ಬಾಬು ಜಗಜೀವನ ರಾಮ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ವಿಧಾನ ಸೌಧದ ಬಳಿ ಜನ್ಮ ಜಯಂತಿ:

3ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರು ವಿಧಾನಸೌಧ ಬಳಿಯಿರುವ ಬಾಬು ಜಗಜೀವನ ರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಬಾಬು ಜಗಜೀವನ ರಾಮ್ ಅವರು ಭಾರತದ ಉಪ ಪ್ರಧಾನ ಮಂತ್ರಿಯಾಗಿ ರಕ್ಷಣೆ/ಗೃಹ, ಕೃಷಿ ಸಚಿವರಾಗಿ ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದವರು. ಅವರು ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದರು. ಆ ಕಾರಣಕ್ಕಾಗಿ ಅವರನ್ನು ಹಸಿರುಕ್ರಾಂತಿ ಹರಿಕಾರರೆಂದು ಕರೆಯಲಾಗುತ್ತಿದೆ ಎಂದು ಸಚಿವರು ಸ್ಮರಿಸಿದರು.
4ಈ ಸಂದರ್ಭದಲ್ಲಿ ಸಂಸದರಾದ ಕೆ ಎಚ್ ಮುನಿಯಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಠಿಯಾ, ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಅವರು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s