ಲಾರಿ ಮುಷ್ಕರದಿಂದ ಅಗತ್ಯ ಸಾರ್ವಜನಿಕ ವಸ್ತುಗಳ ಕೊರತೆ ಉಂಟಾಗದಿರಲಿ

5ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರದಿಂದ ಸಾರ್ವಜನಿಕರಿಗೆ ಅಗತ್ಯ ವಸ್ತುಗಳಾದ ಹಾಲು,ಔಷಧಿ,ಪೆಟ್ರೋಲಿಯಂ ಉತ್ಪನ್ನಗಳು,ತರಕಾರಿ,ಅಡಿಗೆ ಅನಿಲ ,ಮೇವು ಸರಬರಾಜು ಮತ್ತು ಶಾಲೆ-ಕಾಲೇಜುಗಳ ವಾಹನ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟುಮಾಡಬಾರದು. 4ಮುಷ್ಕರನಿರತರು ಒತ್ತಾಯಪೂರ್ವಕವಾಗಿ ವಾಹನಗಳನ್ನು ತಡೆಯುವ, ಸಂಚಾರ ವ್ಯವಸ್ಥೆಗೆ ಅಡಚಣೆ ತರುವ ಕಾರ್ಯ ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚಿಸಿದ್ದಾರೆ.

ಕಾನೂನು ಸುವ್ಯವಸ್ಥೆಗೆ ಧಕ್ಕೆ ಆದರೆ ಕ್ರಮ:

3ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಲಾರಿ ಮುಷ್ಕರಕ್ಕೆ ಸಂಬಂಧಿಸಿದ ತುರ್ತುಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು. ಲಾರಿ ಮಾಲೀಕರ ಬೇಡಿಕೆಗಳ ಕುರಿತು ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ವರದಿ ಕಳುಹಿಸಿದೆ. ಕೇಂದ್ರ ಸರಕಾರ ಈ ವಿಷಯದಲ್ಲಿ ನಿರ್ಣಯ ಕೈಗೊಳ್ಳಲಿದೆ.ಸಂಘಟನೆಗಳು ಮುಷ್ಕರ ಕೈಬಿಡಬೇಕೆಂದು ಮನವಿ ಮಾಡುತ್ತೇನೆ. ಒಂದು ವೇಳೆ ಮುಷ್ಕರ ಮುಂದುವರೆದರೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆವುಂಟಾಗದಂತೆ ಸಂಘಟನೆಗಳು ಎಚ್ಚರವಹಿಸಬೇಕು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಹಾಗೂ ಗಸ್ತು ಸಂಚಾರದ ಏರ್ಪಾಡು ಮಾಡಿದೆ.
2ಸಹಾಯ ವಾಣಿ:
ಆಹಾರ,ತರಕಾರಿ,ಹಾಲು,ಔಷಧಿ,ಮೇವು,ಕುಡಿಯುವ ನೀರು,ಅಡಿಗೆ ಅನಿಲ ಸೇರಿದಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ಯಾವುದೇ ವಾಹನಗಳ ಸಂಚಾರಕ್ಕೂ ವ್ಯತ್ಯಯ ಉಂಟಾಗಬಾರದು.ಅಗತ್ಯ ಬಿದ್ದರೆ,ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ,ಸರಕಾರದ ವಿವಿಧ ಇಲಾಖೆಗಳಿಗೆ ಸೇರಿದ ವಾಹನಗಳನ್ನು ಗುರುತಿಸಿ ಅಗತ್ಯ ಸೇವೆಗಳ ಸರಬರಾಜಿಗೆ ಸಿದ್ಧವಾಗಿಟ್ಟುಕೊಂಡಿರಬೇಕು. 1ಪೆಟ್ರೋಲಿಯಂ ಕಂಪೆನಿಗಳೂ ಸಹ ಸಾಕಷ್ಟು ಸಂಗ್ರಹವನ್ನು ಇಟ್ಟುಕೊಂಡಿರಬೇಕು.ಪೆಟ್ರೋಲ್ ಬಂಕ್‍ಗಳಲ್ಲಿ ಸರಕಾರಿ ವಾಹನಗಳಿಗೆ ಇಂಧನವನ್ನು ಮೀಸಲಾಗಿಟ್ಟುಕೊಂಡಿರಬೇಕು. ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಸಹಾಯವಾಣಿ ಸಂಖ್ಯೆಗಳ ಮೂಲಕ ಜಿಲ್ಲಾಡಳಿತ ಮತ್ತು ಪೊಲೀಸರ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s