ಉಪ ಚುನಾವಣೆ:ಮತದಾನ ಖಾತರಿ ಪಾರದರ್ಶಕತೆಗೆ ವಿವಿ ಪ್ಯಾಟ್ ಯಂತ್ರ ಬಳಕೆ

2ವಿಧಾನ ಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ 236 ಮತಗಟ್ಟೆಗಳಲ್ಲೂ ಬಳಸಲಾಗುವ ವಿದ್ಯುನ್ಮಾನ ಮತ ಯಂತ್ರ ಹಾಗೂ ಮತದಾರರಿಗೆ ಮತ ಚಲಾವಣೆಯನ್ನು ತೋರಿಸುವ ವಿವಿಪ್ಯಾಟ್ ನ ಪಾರದರ್ಶಕತೆಯನ್ನು ಖಾತರಿಪಡಿಸಿಕೊಳ್ಳಲು ಹಲವಾರು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ತಿಳಿಸಿದ್ದಾರೆ.

ಮಾರ್ಚ್ 29 ರಿಂದ 31 ರವರೆಗೆ ಮೊದಲ ಹಂತದ ಬ್ಯಾಲೆಟ್ ಯೂನಿಟ್ ಹಾಗೂ ಕಂಟ್ರೋಲ್ ಯೂನಿಟ್ ಮತ್ತು ವಿವಿ ಪ್ಯಾಟ್ ಪರಿಶೀಲನಾ ಕಾರ್ಯವನ್ನು ಅಭ್ಯರ್ಥಿಗಳು ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬ್ಯಾಲೆಟ್ ಯೂನಿಟ್ ಹಾಗೂ ಕಂಟ್ರೋಲ್ ಯೂನಿಟ್ ಮತ್ತು ವಿವಿ ಪ್ಯಾಟ್‍ಗಳ ಮೊದಲ ಹಾಗೂ ಎರಡನೇ ಹಂತದ ರ್ಯಾಂಡಮೈಜೇಶನ್ ಹಾಗೂ ಮತಗಟ್ಟೆಗಳಿಗೆ ಹಂಚಿಕೆ ಕಾರ್ಯವನ್ನು 1ಅಭ್ಯರ್ಥಿಗಳ ಸಮ್ಮುಖದಲ್ಲಿ ಏಪ್ರಿಲ್ 3 ರಂದು ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಬ್ಯಾಲೆಟ್ ಯೂನಿಟ್‍ಗೆ ಅಭ್ಯರ್ಥಿಗಳ ಹೆಸರು ಅಳವಡಿಕೆ ಹಾಗೂ ಬ್ಯಾಲೆಟ್ ಯೂನಿಟ್ ಹಾಗೂ ಕಂಟ್ರೋಲ್ ಯೂನಿಟ್ ಮತ್ತು ವಿವಿ ಪ್ಯಾಟ್ ಬಳಸಿ ಅಣುಕು ಮತದಾನವನ್ನು ಏಪ್ರಿಲ್ 3 ಮತ್ತು 4 ರಂದು ಅಳವಡಿಸಲಾಗಿದೆ.ಒಟ್ಟು 236 ಮತಗಟ್ಟೆಗಳಿರುವುದರಿಂದ ಕನಿಷ್ಠ ಶೇ. 5 ರಷ್ಟು ಇವಿಎಂಗಳನ್ನು ಅಂದರೆ 13 ಇಎಂವಿಗಳನ್ನು ಬಳಸಿ ಪ್ರತಿ ಮತಯಂತ್ರದಲ್ಲಿ ಒಂದು ಸಾವಿರ ಮತಗಳನ್ನು ಈ ಅಣುಕು ಮತದಾನದಲ್ಲಿ ಮಾಡಲಾಗಿದೆ. ಫಲಿತಾಂಶ ಹಾಗೂ ವಿವಿಪ್ಯಾಟ್ ಪ್ರಿಂಟ್ ಔಟ್ ಪರಿಶೀಲನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.⁠⁠⁠⁠

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s