‘ಚೋಮನ ದುಡಿ’ ಕಾಡುವಂತೆಯೇ ಪದ್ಮಾ ಕುಮಟ ಸದಾ ಕಾಲಕ್ಕೂ ಕಾಡುತ್ತಾರೆ

5‘ಚೋಮನ ದುಡಿ’ ಈಗಲೂ ಹಲವರನ್ನು ಕಾಡುತ್ತದೆ. ಆ ಚಿತ್ರದ ಮೂಲಕ ಬೆಳಕಿಗೆ ಬಂದ ಬೆಳ್ಳಿ ಕೂಡ ಎಲ್ಲರನ್ನೂ ಹೆಚ್ಚು ಕಾಲ ಕಾಡುವರು.  ಪದ್ಮಾ ಅವರ ಇಡೀ ಕುಟುಂಬ ಕಲಾವಂತಿಕೆಯ ಬದುಕಿಗೆ ಅರ್ಪಿಸಿಕೊಂಡಿದ್ದರು. ಇದು ಅತ್ಯಂತ ವಿರಳವಾದ ನಿದರ್ಶನವಾಗಿದೆ ಎಂದು ಮಾಧ್ಯಮ ತಜ್ಞ ಜಿ ಎನ್ ಮೋಹನ್ ಅವರು ಪದ್ಮಾ ಕುಮಟಾ ಅವರ ಗುಣಗಾನ ಮಾಡಿದರು. ಕರ್ನಾಟಕ ಚಲನ ಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶನಿವಾರ ಆಯೋಜಿಸಿದ್ದ ‘ಬೆಳ್ಳಿ ಸಿನಿಮಾ-ಬೆಳ್ಳಿ ಮಾತು’ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ನಟಿ ಪದ್ಮಾ ಕುಮಟ ಅವರಿಗೆ ಶ್ರದ್ದಾಂಜಲಿ ಅರ್ಪಿಸಿ ಜಿ ಎನ್ ಮೋಹನ್ ಅವರು ಮಾತನಾಡಿದರು.

 

1ಮೊದಲ ಚಿತ್ರದಲ್ಲಿಯೇ ‘ಬೆಳ್ಳಿ’ಯಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಪದ್ಮಾ ಕುಮಟ ಕನ್ನಡ ಚಿತ್ರರಂಗದ ಬೆಳ್ಳಿತಾರೆಯಾಗಿ ಮಿನುಗಿದರು ಎಂದು ಹಿರಿಯ ನಟ ಸುಂದರ್ ರಾಜ್ ಸ್ಮರಿಸಿಕೊಂಡರು. ಪದ್ಮಾ ಹೃದಯವಂತರಾಗಿದ್ದರು. ‘ಚೋಮನ ದುಡಿ’ ನನಗೆ ಎರಡನೇ ಚಿತ್ರ. ಅದರಲ್ಲಿ’ ಪದ್ಮಾ ಅವರಿಗೆ ಬೆಳ್ಳಿಯ ಪಾತ್ರ, ಅದಾದ ಬಳಿಕ ಅವರೊಂದಿಗೆ ಸಹೃದಯತೆ ಕಾಯ್ದುಕೊಂಡಿದ್ದೆ. ಅವರ ಹೃದಯ ವೈಶಾಲ್ಯವನ್ನು ಎಷ್ಟು ಕೊಂಡಾಡಿದರೂ ಸಾಲದು ಎಂದು ಅವರು ಹೇಳಿದರು.

 

4ನಾನು ಪದ್ಮಾ ಕುಮಟ ಕುಟುಂಬಕ್ಕೆ ತುಂಬಾ ನಿಕಟವಾಗಿದ್ದವನು, ಆಕೆ ಒಂದು ದಿನವು ಅನಾರೋಗ್ಯದ ಕಾರಣಕ್ಕೆ ಇಂಜೆಕ್ಷನ್ ತೆಗೆದುಕೊಂಡವರಲ್ಲ. ಏಕಾಏಕಿ ಅವರ ಅಗಲಿಕೆ ಸಹಜವಾಗಿ ನೋವು ತಂದಿದೆ ಎಂದು ಹಿರಿಯ ನಟ ಜೈ ಜಗದೀಶ್ ಹೇಳಿದರು. ಪದ್ಮಾ ಕುಮಟ ಅವರನ್ನು ನೆನೆದು ಮಾತನಾಡಿದ ಗಾಯತ್ರಿ ಪ್ರಭಾಕರ್ ತಮ್ಮಿಬ್ಬರ ಭಾವನಾತ್ಮಕ ಕ್ಷಣಗಳನ್ನು ಹಂಚಿಕೊಂಡು ಭಾವೋದ್ವೇಗಕ್ಕೆ ಒಳಗಾದರು.

ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯೆ ಪ್ರಫುಲ್ಲಾ ಮಧುಕರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ರಾಜೇಂದ್ರಸಿಂಗ್ ಬಾಬು ಮಾತನಾಡಿದರು.ಅಕಾಡೆಮಿ ರಿಜಿಸ್ಟ್ರಾರ್ ಎಚ್ ಬಿ ದಿನೇಶ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದ್ಮಾ ಕುಮಟ ಅವರ ಸ್ಮರಣೆಯ ನಂತರ ಅವರು ನಟಿಸಿದ್ದ ‘ಚೋಮನ ದುಡಿ’ ಚಲನ ಚಿತ್ರದ ಪ್ರದರ್ಶನ ನಡೆಯಿತು. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕಾರ್ಯಕ್ರಮ ಜರುಗಿತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s