ಸಮುದಾಯದತ್ತ ಮುಖಮಾಡಿದ ಹೊಸ ಪೊಲೀಸ್ ಬೀಟ್ ಜಾರಿ

1ಪೊಲೀಸರು ಜನಸ್ನೇಹಿಯಾಗಬೇಕು, ಪೊಲೀಸ್ ವ್ಯವಸ್ಥೆ ಸಮುದಾಯದತ್ತ ಚಲಿಸಬೇಕೆಂಬುದು ಸರ್ಕಾರದ ನೀತಿ.

ಈ ನೀತಿಯನ್ನು ಜಾರಿಗೊಳಿಸಲು ಶೇಕಡಾ 90 ರಷ್ಟಿರುವ ಪೊಲೀಸ್ ಪೇದೆಗಳು ಮತ್ತು ಪೊಲೀಸ್ ಮುಖ್ಯ ಪೇದೆ ಗಳನ್ನು ಜನಮುಖಿಗಳಾಗಿಸುವ ದೃಷ್ಟಿಯಿಂದ ಪೊಲೀಸ್ ಇಲಾಖೆಯ ‘ಗಸ್ತು ವ್ಯವಸ್ಥೆ’ (beat system) ಯ ರಚನೆ ಮತ್ತು ಕಾರ್ಯವಿಧಾನವನ್ನು ಬದಲಿಸಿ ಕ್ರಾಂತಿಕಾರಿಯೆನಿಸುವ ‘ಸುಧಾರಿತ ಗಸ್ತು ವ್ಯವಸ್ಥೆ’ಯನ್ನು ಜಾರಿಗೊಳಿಸಿ ಸರ್ಕಾರವು ಮಾರ್ಚ್ 21 ರಂದು ಆದೇಶಿಸಿದೆ.

 

 

 

ಪೇದೆಗಳಿಗೆ ಬೀಟ್ ಹೊಣೆಗಾರಿಕೆ:

2

ಪ್ರತಿ ಪೊಲೀಸ್ ಠಾಣೆಯಲ್ಲಿರುವ ಪೊಲೀಸ್ ಪೇದೆಗಳು ಮತ್ತು ಪೊಲೀಸ್ ಮುಖ್ಯ ಪೇದೆ ಗಳ ಒಟ್ಟು ಸಂಖ್ಯೆಗೆ ಸರಿಸಮವಾಗಿ ಪೊಲೀಸ್ ಠಾಣೆಯ ವ್ಯಾಪ್ತಿಯನ್ನು ವಿಭಜಿಸಿ, ವಿಂಗಡಿಸಿ ಪ್ರತಿ ಪ್ರದೇಶವನ್ನು ‘ಬೀಟ್’ (ಗಸ್ತು) ಎಂದು ಪರಿಗಣಿಸಲಾಗಿದೆ. ಆಯಾ ಠಾಣೆಯ ಪ್ರತಿ ಪೊಲೀಸ್ ಪೇದೆಗಳು ಮತ್ತು ಪೊಲೀಸ್ ಮುಖ್ಯ ಪೇದೆ ಗಳಿಗೆ ಆಯಾ ಬೀಟ್‍ನ ಹೊಣೆಗಾರಿಕೆಯನ್ನು ನೀಡಿದ್ದು, ಆಯಾ ಬೀಟಿನ ಎಲ್ಲಾ ಪೊಲೀಸ್ ಕರ್ತವ್ಯಾಧಿಕಾರಿಗಳನ್ನು ಮತ್ತು ಸಂಪೂರ್ಣ ಜವಬ್ದಾರಿಯನ್ನು ಅವರಿಗೇ ನೀಡಲಾಗಿದೆ. ಇದರಿಂದ ತಳಹಂತದ ಸಿಬ್ಬಂದಿಗಳ ಸಬಲೀಕರಣ (empowerment) ಸಾಕಾರವಾಗಲಿದೆ.

 

 

 

 

 

ಸಬಲೀಕರಣಕ್ಕೆ ನಾಂದಿ:

3

ಆಯಾ ಬೀಟ್(ಗಸ್ತು)ನಲ್ಲಿ ಬರುವ ಗ್ರಾಮಗಳು ಅಥವಾ ಪ್ರದೇಶಗಳಲ್ಲಿ ಎಲ್ಲಾ ಧರ್ಮ, ಜಾತಿ ವಯೋಮಾನಕ್ಕೆ ಸೇರಿದ ಸೂಕ್ತವೆನಿಸುವಷ್ಟು ಸಂಖ್ಯೆಯ ಸ್ತ್ರೀ ಪುರುಷರನ್ನು ಸಮುದಾಯದಿಂದ ‘ನಾಗರಿಕ ಸದಸ್ಯ’ರನ್ನಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.

ಬೀಟ್(ಗಸ್ತು)ನ ಸಿಬ್ಬಂದಿಗಳು ಈ ಸದಸ್ಯರೊಡನೆ ಸತತ ಸಂಪರ್ಕದಲ್ಲಿದ್ದು, ಆಯಾ ಬೀಟ್ ಪ್ರದೇಶಗಳ ಆಗುಹೋಗುಗಳ ಬಗ್ಗೆ ಮಾಹಿತಿ ಪಡೆದು ಕಾರ್ಯೋನ್ಮುಖರಾಗುವ ಅವಕಾಶ ಮಾಡಿಕೊಡಲಾಗಿದೆ. ಜನರು ಪೊಲೀಸರ ನಡುವೆ ಬಾಂಧವ್ಯದ ಸೇತುವೆ ಕಟ್ಟಲು ಈ ವ್ಯವಸ್ಥೆ ಅವಕಾಶ ಮಾಡಿಕೊಡುವುದರ ಮೂಲಕ ಸಮುದಾಯದತ್ತ ಪೊಲೀಸ್-ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸಾಕಾರಗೊಳಿಸುವುದರ ಜೊತೆಗೆ ಪೊಲೀಸರ ಸಬಲೀಕರಣಕ್ಕೂ ನಾಂದಿ ಹಾಡಿದೆ.

4ಸರ್ಕಾರ ಜಾರಿಗೆ ತಂದಿರುವ ಸುಧಾರಿತ ಗಸ್ತು(ಬೀಟ್) ವ್ಯವಸ್ಥೆಯ ಮೂಲಕ ಇನ್ನು ಮುಂದೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ‘ಗಸ್ತು(ಬೀಟ್) ಪ್ರದೇಶ’ವೇ ಅತ್ಯಂತ ಸಣ್ಣ ಘಟಕವಾಗಲಿದೆ.

ಆಯಾ ಗಸ್ತಿ(ಬೀಟ್)ನ ಪೊಲೀಸ್ ಪೇದೆಗಳು ಮತ್ತು ಪೊಲೀಸ್ ಮುಖ್ಯ ಪೇದೆಗಳು ಗಸ್ತಿ(ಬೀಟ್)ನ ಪೊಲೀಸ್ ಪ್ರಮುಖರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಜನಸ್ನೇಹಿ ಅಂಶ ಮತ್ತು ಪೊಲೀಸ್ ಸಿಬ್ಬಂದಿಗಳ ಸಬಲೀಕರಣದ ಸಮತೋಲನವನ್ನು ಒಳಗೊಂಡಿರುವ ಸುಧಾರಿತ ಗಸ್ತುವ್ಯವಸ್ಥೆಯು ಪೊಲೀಸ್ ಕಾರ್ಯವೈಖರಿಯನ್ನು ಬದಲಿಸುವ ಕ್ರಾಂತಿಕಾರಿ ವ್ಯವಸ್ಥೆಯಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s