“ನಮ್ಮ ಸರ್ಕಾರ ಜನರೊಂದಿಗೆ ಇರುವ ಸರ್ಕಾರ, ಜನರ ಏಳಿಗೆಯೇ ನಮ್ಮ ಗುರಿ”:ಮುಖ್ಯಮಂತ್ರಿ ಸಿದ್ಧರಾಮಯ್ಯ

Zn3LJWqO

ನಮ್ಮ ಸರ್ಕಾರ ಜನರೊಂದಿಗೆ ಇರುವ ಸರ್ಕಾರ, ಜನರ ಏಳಿಗೆಯೇ ನಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಬಜೆಟ್ ಆಶಯಗಳನ್ನು ಸಾಕಾರಗೊಳಿಸಲು ಬದ್ದತೆ ಇಟ್ಟುಕೊಂಡಿದೆ ಎಂದು ಮುಖ್ಯಮಂತ್ರಿಗಳು ನುಡಿದರು.

ನುಡಿದಂತೆ ನಡೆದಿದ್ದೇವೆ:

ಜನರಿಗೆ ನೀಡಿದ್ದ ಭರವಸೆಗಳ ಪೈಕಿ ಶೇ. 90ರಷ್ಟು ಈಡೇರಿಸಿ ನುಡಿದಂತೆ ನಡೆದುಕೊಂಡಿದ್ದೇವೆ.

ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದವರ ಪರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ನಾನು ಅಹಿಂದ ವರ್ಗದವರ ಪರ ಎಂಬ ಹಣೆಪಟ್ಟಿ ಹಚ್ಚಲು ಅವರು ಪ್ರಯತ್ನ ಮಾಡುತ್ತಿದ್ದಾರೆ. ನಾನು ಅಹಿಂದ ಪರ ಎಂದು ಹೇಳಿಕೊಳ್ಳಲು ನಾಚಿಕೆ ಅಥವಾ ಮುಜುಗರ ಇಲ್ಲ. ಅಹಿಂದ ಪರವಾಗಿ ಇರುವುದು ನಮ್ಮ ಬದ್ಧತೆ. ಸಾಮಾಜಿಕ ನ್ಯಾಯದ ಪರವಾಗಿ ಇರುವುದು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿ.

ನಮ್ಮ ದೃಷ್ಟಿ ಎಲ್ಲ ವರ್ಗದ ಬಡವರ ಕಡೆ ಇದೆ. ಹೀಗಾಗಿಯೇ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಬಡವರಿಗಾಗಿ ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ನಾಳೆಯಿಂದ ಏಳು ಕೆ.ಜಿ. ಅಕ್ಕಿ :

ಅನ್ನಭಾಗ್ಯ ಯೋಜನೆಯಲ್ಲಿ 1.8 ಕೋಟಿ ಬಿಪಿಎಲ್ ಕಾರ್ಡ್‍ದಾರರಿಗೆ ನಾಳೆಯಿಂದ ಏಳು ಕೆ.ಜಿ.ವರೆಗೆ ಉಚಿತವಾಗಿ ಅಕ್ಕಿ ವಿತರಿಸಲಾಗುವುದು. ನಾಲ್ಕು ಕೋಟಿ ಜನರಿಗೆ ಈ ಸೌಲಭ್ಯ ಸಿಗಲಿದೆ.

ಪ್ರತಿಯೊಬ್ಬರೂ ಎರಡು ಹೊತ್ತು ಊಟ ಮಾಡಬೇಕು ಎಂಬುದು ನಮ್ಮ ನಿಲುವು.

ಉಚಿತವಾಗಿ ಅಕ್ಕಿ ಕೊಟ್ಟು ಸರ್ಕಾರ ಬಡವರನ್ನು ಸೋಮಾರಿಗಳನ್ನಾಗಿ ಮಾಡಿದೆ ಎಂಬ ಆರೋಪ ಬಂತು.

ಬಡವರು ದುಡಿದು, ಬೆವರು ಸುರಿಸಿ ಸಾಕಾಗಿದೆ. ಅವರು ವಿಶ್ರಾಂತಿ ತೆಗೆದುಕೊಳ್ಳಲಿ ನೀನು  ಕೆಲಸ ಮಾಡು ಎಂದು ಆರೋಪ ಮಾಡಿದವರಿಗೆ ಹೇಳಿದೆ.

ಶ್ರೀಮಂತರು ಮಾತ್ರ ಎರಡು ಹೊತ್ತು ಊಟ ಮಾಡಬೇಕೇ ? ಬಡವರು ಮಾಡಲಿ ಬಿಡಿ ಎಂದು ಮುಖ್ಯಮಂತ್ರಿಯವರು ಹೇಳಿದರು.

ಕ್ಷೀರಧಾರೆ:

ಇದಲ್ಲದೆ ಕ್ಷೀರಧಾರೆ ಕಾರ್ಯಕ್ರಮಕ್ಕೆ 1200 ಕೋಟಿ ರೂ. ನೀಡಲಾಗುತ್ತಿದೆ. ಯೋಜನೆಯಲ್ಲಿ ನಾಳೆಯಿಂದ ವಾರದಲ್ಲಿ ಐದು ದಿನ ಶಾಲಾ ಮಕ್ಕಳಿಗೆ ಹಾಲು ನೀಡಲಾಗುವುದು. 1.2 ಕೋಟಿ ಮಕ್ಕಳು ಈ ಸೌಲಭ್ಯ ಪಡೆಯಲಿದ್ದಾರೆ.

ಅಂಗನವಾಡಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ವಿತರಿಸಲಾಗುವುದು. ಒಂದೂವರೆ ಲಕ್ಷ ಪದವೀಧರರಿಗೆ ಲ್ಯಾಪ್ ಟಾಪ್ ನೀಡುವ ಯೋಜನೆಯೂ ಜಾರಿಗೆ ಬಂದಿದೆ.

ರೈತರಿಗೆ ಮೂರು ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುತ್ತಿದೆ. ಸ್ತ್ರೀಶಕ್ತಿ ಸಂಘಗಳೂ ಬಡ್ಡಿ ರಹಿತವಾಗಿ ಸಾಲ ಪಡೆಯಬಹುದು.

ಒಣಭೂಮಿ ಬೇಸಾಯ ಮಾಡುವ ರೈತರಿಗೆ ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ಇದು ಮೊದಲ ಬಾರಿಗೆ ನಮ್ಮ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮ. 1.25 ಲಕ್ಷ ಕೃಷಿಹೊಂಡಗಳನ್ನು ಯೋಜನೆಯಲ್ಲಿ ನಿರ್ಮಿಸಲಾಗಿದೆ. ಹಿಂದಿನ ಸರ್ಕಾರಗಳು ಇದನ್ನು ಮಾಡಲಿಲ್ಲ.

ಗರ್ಭಿಣಿಯರು, ಬಾಣಂತಿಯರಿಗೆ ಬಿಸಿಯೂಟ ನೀಡಲು ಮಾತೃ ಪೂರ್ಣ ಯೋಜನೆ ರೂಪಿಸಿದೆ. ಮನಸ್ವಿನಿ, ಮೈತ್ರಿ, ವಿದ್ಯಾಸಿರಿ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಗಳು.ಜಾತಿ ಮತ್ತು ಧರ್ಮದ ಆಧಾರದ ಮೇಲೆ ನಾವು ರಾಜಕೀಯ ಮಾಡುವುದಿಲ್ಲ. ನಮಗೆ ಎಲ್ಲ ವರ್ಗದವರೂ ಬೇಕು. ಜಾತಿ ಹೆಸರಲ್ಲಿ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.

ಕರ್ನಾಟಕ ಅಭಿವೃದ್ದಿ ಮಾದರಿ:

ನಮ್ಮದು ಕರ್ನಾಟಕ ಅಭಿವೃದ್ಧಿ ಮಾದರಿಯೇ ಹೊರತು ಗುಜರಾತ್ ಅಥವಾ ಉತ್ತರ ಪ್ರದೇಶ ಮಾದರಿಯಲ್ಲ. ನಮ್ಮ ಕೆಲಸಗಳನ್ನು ನೋಡಿ. ನುಡಿದಂತೆ ನಡೆದುಕೊಂಡಿದ್ದೇವೆ ನಾವು.

ಪರಿಶಿಷ್ಟರು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರಿಗೆ ಅನೇಕ ಕಾರ್ಯಕ್ರಮಗಳು ಜಾರಿಗೆ ಬಂದಿದೆ ಎಂದು ಮುಖ್ಯಮಂತ್ರಿ ಗಳು ಹೇಳಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s