“ಜನರನ್ನು ಹಸಿವು ಮುಕ್ತ ಮಾಡುವುದೇ ನಮ್ಮ ಸರ್ಕಾರದ ಗುರಿ”:ಮುಖ್ಯಮಂತ್ರಿ ಸಿದ್ದರಾಮಯ್ಯ  

 
iರಾಜ್ಯದಲ್ಲಿ  ಒಂದು ಕೋಟಿ ಎಂಟು ಲಕ್ಷ ಬಿ.ಪಿ.ಎಲ್. ಕಾರ್ಡ್‍ಗಳಿದ್ದು  ನಾಲ್ಕು ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆಯ ಮೂಲಕ ಆಹಾರ ವಿತರಣೆ ನಡೆಯುತ್ತಿದೆ.  ಕಳೆದ ಆರು ವರ್ಷಗಳಿಂದ ರಾಜ್ಯ ಬರಗಾಲದಲ್ಲಿದ್ದು ಕಳೆದ ಎರಡು ವರ್ಷಗಳಿಂದ ತೀವ್ರ ಬರಗಾಲ ಕಂಡಿದೆ.  ಆದರೂ ಸಹ ಹಳ್ಳಿಗಳಲ್ಲಿ ಕೂಲಿ ಅರಸಿ ಗುಳೆ ಹೋಗುವುದು ಕಡಿಮೆಯಾಗಿದೆ ಎಂದರೆ ಅದಕ್ಕೆ ಅನ್ನಭಾಗ್ಯ ಯೋಜನೆ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

 

ಟೀಕೆಗಳಿಗೆ ಅಂಜುವುದಿಲ್ಲ:

i

ನಗರದ ಫ್ರೀಡಂಪಾರ್ಕ್‍ನಲ್ಲಿ ಆಯೋಜನೆಯಾಗಿದ್ದ  ಉಚಿತ ಹೆಚ್ಚುವರಿ ಅಕ್ಕಿ ವಿತರಣೆ ಹಾಗೂ ಜಾಗೃತ ಸಮಿತಿ ಸದಸ್ಯರಿಗೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿವು ಅನುಭವಿಸಿದವರಿಗೆ ಮಾತ್ರ ಗೊತ್ತು.  ಹೊಟ್ಟೆ ತುಂಬಿದವರಿಗೆ ಅನ್ನಭಾಗ್ಯ ಯೋಜನೆ ಲಘುವಾಗಿ ಕಾಣಿಸುತ್ತದೆ.  ಟೀಕೆಗಳಿಗೆ ಅಂಜುವುದಿಲ್ಲ.  ರಾಜ್ಯವನ್ನು ಹಸಿವು ಮುಕ್ತ ಮಾಡುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯ ಎಂದರು.

 

hಸಾಂಕೇತಿಕವಾಗಿ 5 ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ಪ್ರತಿ ಯೂನಿಟ್‍ಗೆ 7 ಕೆ.ಜಿ. ಅಕ್ಕಿ  ಮತ್ತು ಒಂದು ಕೆ.ಜಿ. ಬೇಳೆಯನ್ನು ವಿತರಿಸುವ ಮೂಲಕ ಹೊಸ ಯೋಜನೆಗೆ ಚಾಲನೆ ನೀಡಿದರು.

 

 

 

‘ಜನಮನ’ ಕಾರ್ಯಕ್ರಮದ ಮೂಲಕ ಈ ಮುಂಚೆ ಪ್ರತಿ ವ್ಯಕ್ತಿಗೆ ನೀಡುತ್ತಿದ್ದ 5 ಕೆ.ಜಿ.  ಅಕ್ಕಿ ಸಾಲುತ್ತಿಲ್ಲ ಎಂಬ ಫಲಾನುಭವಿಗಳ  ಬೇಡಿಕೆ ಮೇರೆಗೆ ಮಾನ್ಯ ಮಾಡಿ ಈಗ ಪ್ರತಿ ವ್ಯಕ್ತಿಗೆ 7 ಕೆ.ಜಿ. ಅಕ್ಕಿಯಂತೆ ಮನೆಯ ಎಲ್ಲಾ ಸದಸ್ಯರಿಗೂ ಸೇರಿ ಪೌಷ್ಟಿಕ ಆಹಾರದ ಸಲುವಾಗಿ ಒಂದು ಕೆ.ಜಿ. ಬೇಳೆಯನ್ನು ಸಹಾ ನೀಡಲಾಗುತ್ತಿದೆ.

g

ಕಳೆದ ವಾರ ಬಜೆಟ್‍ನಲ್ಲಿ ಮಂಡಿಸಿದ್ದ ಹೆಚ್ಚುವರಿ ಅಕ್ಕಿ ನೀಡುವ ಯೋಜನೆಗೆ ಈಗಾಗಲೆ ಚಾಲನೆ ನೀಡಿರುವುದು ನಮ್ಮ ಸರ್ಕಾರದ ಜವಾಬ್ದಾರಿಯನ್ನು  ತೋರಿಸುತ್ತದೆ.   ಏಪ್ರಿಲ್ 1 ರಿಂದ ಈಗಾಗಲೇ ಬಜೆಟ್‍ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳ ಜಾರಿಗೆ ಸರ್ಕಾರ ಟೊಂಕಕಟ್ಟಿ ನಿಂತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

 

 

ವಂಚನೆಗೆ ಬ್ರೇಕ್:  

f

ಆಹಾರ ವಿತರಣೆ ಸಹಾ ದೊಡ್ಡ ಜವಾಬ್ದಾರಿಯಾಗಿದ್ದು ಪ್ರತಿ ವಿತರಣಾ ಕೇಂದ್ರದಲ್ಲಿ ಜಾಗೃತ ಸಮಿತಿಯನ್ನು ರಚಿಸಲಾಗಿದ್ದು ವಿತರಕರಿಂದ ಫಲಾನುಭವಿಗಳಿಗೆ ಮೋಸವಾಗುವುದನ್ನು ತಡೆಯುವುದು ಈ ಸಮಿತಿಯ ಮುಖ್ಯ ಉದ್ದೇಶವಾಗಿದೆ.

 

ಈಗಾಗಲೇ ರಾಜ್ಯಾದ್ಯಂತ 5,000 ಸದಸ್ಯರನ್ನು ನೇಮಿಸಲಾಗಿದ್ದು ಅವರಿಗೆ ತಮ್ಮ ಜವಾಬ್ದಾರಿಗಳ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ.  ವಿತರಕರು ಜಾಗೃತ ಸಮಿತಿ ನೀಡುವ ದೂರಿನ ಅನ್ವಯ ಮೋಸ ಮಾಡಿದ್ದು ಸಾಬೀತಾದಲ್ಲಿ ಅಂಗಡಿ ಲೈಸನ್ಸ್ ಅನ್ನು ತಕ್ಷಣವೆ ರದ್ದು ಮಾಡುವುದಾಗಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.

cಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಹಾಗೂ  ಹಜ್ ಸಚಿವ ಆರ್. ರೋಷನ್‍ಬೇಗ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಶಾಸಕರಾದ ದಿನೇಶ್ ಗುಂಡೂರಾವ್, ವೆಂಕಟರಮಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s