ಎರಡು ಹಂತದಲ್ಲಿ ಪಲ್ಸ್ ಪೋಲಿಯೋ : ಡಾ.ಶಾಲಿನಿ ರಜನೀಶ್

Polio

ರಾಜ್ಯದಲ್ಲಿನ ಐದು ವರ್ಷ ಒಳಗಿನ 74.90 ಲಕ್ಷ ಮಕ್ಕಳಿಗೆ ಎರಡು ಹಂತದ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಏಪ್ರಿಲ್ 2 ಹಾಗೂ 30 ರಂದು ಆಯೋಜಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಅವರು ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 2014 ರಲ್ಲೇ ಭಾರತ ಪೊಲೀಯೋ ಮುಕ್ತ ರಾಷ್ಟ್ರ ಎಂದು ವಿಶ್ವಸಂಸ್ಥೆ ಘೋಷಿಸಿದೆ. 2016 ರಲ್ಲಿ ಮೂರು ರಾಷ್ಟ್ರಗಳಲ್ಲಿ 37 ಪೊಲೀಯೋ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಏಪ್ರಿಲ್ 2 ರಂದು ರಾಜ್ಯಾದ್ಯಂತ ಐದು ವರ್ಷದ ಒಳಗಿನ ಮಕ್ಕಳಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ ಎಂದು ಹೇಳಿದರು.

ಸಕಲ ಸಿದ್ಧತೆ :

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರು ಚಾಲನೆ ನೀಡಲಿದ್ದಾರೆ ರಾಜ್ಯಾದ್ಯಂತ ಹಳ್ಳಿ, ನಗರ, ಪಟ್ಟಣಗಳು ಸೇರಿದಂತೆ, ಬಸ್‍ನಿಲ್ದಾಣ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿಲಯೂ ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದ ಡಾ: ಶಾಲಿನಿ ರಜನೀಶ್ ಅವರು ರಾಜ್ಯಾದ್ಯಂತ 32,617 ಲಸಿಕಾ ಬೂತುಗಳನ್ನು ಸ್ಥಾಪಿಸಲಾಗುವುದು ಹಾಗೂ 51,732 ತಂಡಗಳನ್ನು ರಚಿಸಲಾಗಿದೆ. 1,03,464 ಲಸಿಕಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ. ಪೊಲಿಯೋ ಹನಿ ಹಾಕಿರುವುದನ್ನು ಖಾತರಿಪಡಿಸಲು 6522 ಮೇಲ್ವಿಚಾರಕರು, 1,020 ಸಂಚಾರಿ ಘಟಕಗಳು ಕಾಲಕಾಲಕ್ಕೆ ಕಾರ್ಯಕರ್ತರಿಗೆ, ಸಲಹೆ ಸೂಚನೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ರಾಜ್ಯವೇ ಮುಂಚೂಣಿ :Polio1

ಮಕ್ಕಳಿಗೆ ಉಚಿತವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಯಶಸ್ವಿಗೊಳಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಇದರ ಜೊತೆಗೆ ಕಳೆದ ಫೆಬ್ರವರಿ 7 ರಿಂದ ಮಾರ್ಚ್ 19 ರವರೆಗೆ ದಡಾರ-ರೂಬೆಲ್ಲಾ ಲಸಿಕಾ ಶಿಬಿರಗಳು ಯಶಸ್ವಿಯಾಗಿವೆ ಎಂದ ಡಾ: ಶಾಲಿನಿ ರಜನೀಶ್ ಅವರು ಕೊಪ್ಪಳ ಜಿಲ್ಲೆ ಹೆಚ್ಚಿನ ಪ್ರಗತಿ ಸಾಧಿಸಿದ ಜಿಲ್ಲೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ (106.93%) ಎಂದರು.
ವಿಶ್ವ ಆರೋಗ್ಯ ಪರಿವೀಕ್ಷಣೆಗೆ ಅನ್ವಯ ಶಿವಮೊಗ್ಗ ಜಿಲ್ಲೆ ಅತಿ ಹೆಚ್ಚು ಪ್ರಗತಿ ಸಾಧಿಸಿದ ಈ ಜಿಲ್ಲೆಯಾಗಿದ್ದು, ಅಂತರಾಷ್ಟ್ರೀಯ ಮೇಲ್ವಿಚಾರಣ ವಿಶೇಷ ತಂಡದಿಂದ ಕೋಲಾರ ಜಿಲ್ಲೆ ವಿಶೇಷ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ ಎಂದು ಡಾ: ಶಾಲಿನಿ ರಜನೀಶ್ ಅವರು ತಿಳಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s