ನಿಮ್ಮ ಬದುಕನ್ನು ನೀವೇ ಕಟ್ಟಿಕೊಳ್ಳಿ : ಸಚಿವ ಆಂಜನೇಯ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗಗಳ ಪತ್ರಿಕೋದ್ಯಮ ಪದವೀದರರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ತರಬೇತಿ ಪಡೆದ ಯುವಕರಿಗೆ ಲ್ಯಾಪ್‍ಟ್ಯಾಪ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ ಅವರು ಹಿಂದಿನ ಕಾಲದಲ್ಲಿ ಪತ್ರಿಕೋದ್ಯಮ ಕ್ಷೇತ್ರ ಕೇವಲ ಕೆಲವೇ ವರ್ಗಗಳಿಗೆ ಮೀಸಲಾಗಿತ್ತು, ಇಂದು ಕಾಲ ಬದಲಾಗಿದ್ದು ಪತ್ರಿಕೋದ್ಯಮದಲ್ಲಿ ಎಲ್ಲಾ ವರ್ಗದ ಜನರು ಇದ್ದಾರೆ, ನಿಮ್ಮ ಬದುಕನ್ನು ನೀವೇ ಕಟ್ಟಿಕೊಂಡು ಇತರರಿಗೆ ಮಾದರಿಯಾಗಿ ಬೆಳೆಯಬೇಕು ಎಂದು ಹೇಳಿದರು.

ಪತ್ರಿಕೋದ್ಯಮದಲ್ಲಿ ಇಂದು ಪ್ರತಿಭೆಗೆ ಹೆಚ್ಚಿನ ಬೆಲೆ ಇದ್ದು ಅವಕಾಶಗಳನ್ನು ಬಳಸಿಕೊಂಡು ಬೆಳೆಯಿರಿ, ನಾನು ಒಂದು ಪತ್ರಿಕೆಯ ಸಂಪಾದಕ ಹಾಗೂ ಪ್ರಕಾಶಕನಾಗಿದ್ದೆ, ನಾನು ಪತ್ರಿಕೋದ್ಯಮದಲ್ಲಿ ಇದ್ದಾಗ ಅನೇಕ ಹಿರಿಯ ಪತ್ರಕರ್ತರ ಒಡನಾಟವಿತ್ತು ಎಂದು ತಮ್ಮ ಪತ್ರಿಕೋದ್ಯಮದ ದಿನಗಳನ್ನು ಸ್ಮರಿಸಿಕೊಂಡರು.

ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‍ಟ್ಯಾಪ್ ಎನ್ನುವುದು ಗಗನ ಕುಸುಮವಾಗಿತ್ತು, ಅವರ ಆಸೆಗಳನ್ನು ಈಡೇರಿಸಲು ಸರ್ಕಾರ ಶ್ರಮಿಸುತ್ತಿದೆ. ಇಂದಿನ ಕಂಪ್ಯೂಟರ್ ಯುಗದಲ್ಲಿ ಇಂಟರನೆಟ್ ಬಳಸಿಕೊಳ್ಳುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಿ ಎಂದು ಹೇಳಿ ನೆರೆದಿದ್ದ ಎಲ್ಲಾರಿಗೂ ಶುಭ ಕೋರಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅವರು ಮಾತನಾಡಿ ಹೊಸದಾಗಿ ಪದವಿ ಪಡೆದ ಯುವಕರು ಸಣ್ಣ ಉದ್ಯೋಗವೆಂದು ತಾತ್ಸಾರ ಮಾಡದೇ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಬೆಳೆಯಬೇಕು. ಚಿಕ್ಕ ಅವಕಾಶಗಳು ಮುಂದೊಂದು ದಿನ ದೊಡ್ಡ ಅವಕಾಶಗಳಿಗೆ ಅನುಭವ ನೀಡುತ್ತವೆ. ಯುವಕರು ಬೆಳೆಯುವ ಜೊತೆ ಜೊತೆಯಲ್ಲಿ ಸಮಾಜಿಕ ಜವಬ್ಧಾರಿಯನ್ನು ಸಹ ಬೆಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ತರಬೇತಿ ನಿರ್ದೇಶಕ ಹಿರಿಯ ಪತ್ರಕರ್ತ ಈಶ್ವರ ದೈತೋಟ ಅವರು ಮಾತನಾಡಿ ಲಕ್ಷಾಂತರ ಕೋಟಿ ರೂಪಾಯಿಗಳ ವ್ಯವಹಾರವಾಗಿ ಬೆಳೆದಿರುವ ಪತ್ರಿಕೋದ್ಯಮದಲ್ಲಿ ಪತ್ರಕರ್ತ ಎಂಬುದರ ಜೊತೆಯಲ್ಲಿ ಅನೇಕ ಹೊಸ ಅವಕಾಶಗಳು ಉದಯಿಸಿದ್ದು ತಾಂತ್ರಿಕತೆ ಬೆಳೆದಂತೆ ಹಲವು ಹೊಸ ಹುದ್ದೆಗಳು ಸೃಷ್ಟಿಯಾಗುತ್ತಿರುವ ಈ ಸಮಯದಲ್ಲಿ ವಿದ್ಯಾರ್ಥಿಗಳು ಭಾಷೆ ಮೇಲಿನ ಹಿಡಿತ ಮತ್ತು ಕಂಪ್ಯೂಟರ್ ಜ್ಞಾನ ಬೆಳಸಿಕೊಳ್ಳುವುದರ ಮೂಲಕ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕ ರವಿಕುಮಾರ್, ಪ್ರಾದೇಶಿಕ ಸಹಕಾರ ಸಂಸ್ಥೆ ನಿರ್ದೇಶಕ ವಸಂತನಾಯ್ಕ ಉಪ ನಿರ್ದೇಶಕ ಎ.ಆರ್. ಪ್ರಕಾಶ್ ಉಪಸ್ಥಿತರಿದ್ದರು.

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s