ವಾಕ್ ಚಾತುರ್ಯದ ಚತುರ ಮುಖ್ಯಮಂತ್ರಿ ಸಿದ್ದರಾಮಯ್ಯ

ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ: ಅದ್ಭುತ ವಾಗ್ಮಿ

ಇಂದು ನಾನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿರುವ ಈ ಮಾತುಗಳು ಬಹಳ ದಿನಗಳಿಂದ ನನ್ನ ಮನಸ್ಸಿನ ಮೂಲೆಯಲ್ಲಿ ಬೆಚ್ಚಗೆ ಕುಳಿತು ಕಾವು ಪಡೆದು ಕೊಳ್ಳುತ್ತಿದ್ದವು. ಕಳೆದ ವಾರ ಮಾನ್ಯ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕದ ಮಂಡನೆ ಸಮಯದಲ್ಲಿ ಮತ್ತು ವಿಧಾನ ಸೌಧದ ಮುಂದೆ 78 ಸಂಚಾರಿ ಅರೋಗ್ಯ ಘಟಕಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ್ದನ್ನು ಕೇಳಿದ ನಂತರ ನನ್ನ ಮನಸ್ಸಿನಲ್ಲಿದ್ದ ಅವರ ವಾಕ್ ಶೈಲಿಯ ಬಗೆಗಿನ ಮೆಚ್ಚುಗೆಯ ಮೊಟ್ಟೆಗಳು ಕವಚ ಒಡೆದುಕೊಂಡು ರೆಕ್ಕೆ ಪುಕ್ಕದೊಡನೆ ಪುಟ್ಟ ಪುಟ್ಟ ಮುದ್ದು ಮರಿಗಳಾಗಿ ಹೊರಬಂದು ಹೀಗೆ ಬರಹ ರೂಪದಲ್ಲಿ ನಿಮ್ಮ ಮುಂದೆ ನಲಿದಾಡುತ್ತಿವೆ.

ನಿಮಗೆಲ್ಲಾ ತಿಳಿದಿರುವಂತೆ ನಮ್ಮ ಮುಖ್ಯಮಂತ್ರಿಗಳು ಒಬ್ಬ ಅಪರೂಪದ ವಾಗ್ಮಿ. ಅವರ ಮಾತಿನ ಶೈಲಿ ಅದ್ಭುತ. ಅವರ ಮಾತಿನ ಮೋಡಿ ವರ್ಣನಾತೀತ. ಹಾವಾಡಿಗನ ಪುಂಗಿಗೆ ಹಾವು ತಲೆದೂಗುವಂತೆ ಅವರ ಮುಂದೆ ಕೂತವರು ಅವರ ಮಾತುಗಳಿಗೆ ತಲೆದೂಗಲೇ ಬೇಕು. ಅವರು ಅಂತಹ ಅದ್ಬುತ ಮಾತುಗಾರ. ವಚನ ಸಾಹಿತ್ಯದ ಮೇರು ಪ್ರತಿಭೆ ಬಸವಣ್ಣನವರೇ ಹೇಳಿದ ಶೈಲಿಯಲ್ಲಿ ಹೇಳುವುದಾದರೆ  “ಲಿಂಗ ಮೆಚ್ಚಿ ಅಹುದಹುದು ಎನುವಂತಿರಬೇಕು” ಎನ್ನುವಂತೆ ಇರುತ್ತದೆ ಅವರ ಮಾತುಗಾರಿಕೆಯ ವೈಖರಿ.

ಸಂಚಾರಿ ಆರೋಗ್ಯ ಘಟಕ’ವಾಹನಗಳ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.

ನಾನು ಗಮನಿಸಿರುವಂತೆ ಕೆಲವರಿಗೆ ಅದ್ಬುತ ವಾಕ್ ಚಾತುರ್ಯ ಇರುತ್ತದೆ. ಆದರೆ ಅವರ ಕೀರಲು, ಮೆದು ಅಥವಾ ಕರ್ಕಶ , ಗೊಗ್ಗರು ಧ್ವನಿ ಅವರಿಗೆ ಕೈ ಕೊಡುತ್ತಿರುತ್ತದೆ.ಇನ್ನು ಕೆಲವರು ಪ್ರಕಾಂಡ ಪಂಡಿತರಾಗಿರುತ್ತಾರೆ. ಆದರೆ ಸಮರ್ಥ ವಾದ ಮಂಡನೆಯ ಶೈಲಿ ಅವರ ಕೈ ಹಿಡಿದಿರುವುದಿಲ್ಲ. ಇನ್ನು ಕೆಲವರಿಗೆ ಉತ್ತಮ ಧ್ವನಿ, ವಾದ ಮಂಡನಾ ಶೈಲಿ , ಉತ್ತಮ ವೇದಿಕೆ ಇರುತ್ತದೆ. ಆದರೆ ತಾವು ಮಂಡಿಸುತ್ತಿರುವ ವಿಷಯದ ಬಗ್ಗೆ ಅವರಿಗೇ ವಿಶ್ವಾಸ , ನಂಬಿಕೆ ಇರುವುದಿಲ್ಲ.ಇನ್ನು ಕೆಲವರಿಗೆ ಎಲ್ಲವೂ ಇರುತ್ತದೆ. ಆದರೆ ಅವರಿಗೆ ನಿಂತು ಮಾತಾಡುವ ಅತ್ಯುನ್ನತ ವೇದಿಕೆ , ಸ್ಥಾನಮಾನಗಳಿರುವುದಿಲ್ಲ. ಆದರೆ ಇವೆಲ್ಲವೂ ಏಕಕಾಲಕ್ಕೆ ನಮ್ಮ ಮುಖ್ಯಮಂತ್ರಿಗಳಲ್ಲಿ ಮೇಳೈವಿಸಿವೆ .

ನಮ್ಮ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾತುಗಾರಿಕೆಗೆ ಮುಖ್ಯವಾಗಿ ಬೇಕಿರುವ ಗಟ್ಟಿಯಾದ ,ಗಡುಸು ಧ್ವನಿಯಿದೆ. ಸಂದರ್ಭವನ್ನರಿತು ಧ್ವನಿ ಏರಿಳಿತ ಮಾಡುವ ಹಾಗೂ ಹಾವ -ಭಾವ ವ್ಯಕ್ತ ಪಡಿಸುವ ಅದ್ಬುತ ಕಲೆಗಾರಿಕೆ ಅವರ ಕೈ ಹಿಡಿದಿದೆ .ಸರಳವಾಗಿ , ನೇರವಾಗಿ ವಿಷಯ ಮಂಡಿಸುವ ಶೈಲಿ ಅವರಿಗೆ ಸಿದ್ದಿಸಿದೆ. ತಾವು ಮಂಡಿಸುವ ವಿಷಯದ ಬಗ್ಗೆ ಅವರಿಗೆ ಅಪಾರವಾದ ನಂಬಿಕೆ , ವಿಶ್ವಾಸವಿದೆ . ಇವೆಲ್ಲಕ್ಕೂ ಕಳಶವಿಟ್ಟಂತೆ ನಾಡಿನ ಮುಖ್ಯಮಂತ್ರಿ ಹುದ್ದೆಯಲ್ಲಿ ಅವರಿದ್ದಾರೆ . ವಿಷಯ ಮಂಡಿಸಲು ರಾಜ್ಯದ ಅತ್ಯುನ್ನತ ವೇದಿಕೆಗಳಾದ ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳೇ ಅವರಿಗೆ ದಕ್ಕಿವೆ.

ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) 2016 ವಿಧೇಯಕ ಅನುಮೋದನೆಗೊಂಡ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.

ಅವರು ಅಪರೂಪದ ವಾಗ್ಮಿ, ಅದ್ಭುತ ಮಾತುಗಾರ ಎನ್ನುವುದಕ್ಕೆ ಇನ್ನೇನು ಬೇಕು. ಈ ಕಿರು ಲೇಖನದ ಜೊತೆ ಅವರು ಸದನದಲ್ಲಿ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ವಿಧೇಯಕ ಮಂಡನೆಯ ಸಂದರ್ಭದಲ್ಲಿ ಮತ್ತು ಸಂಚಾರಿ ಅರೋಗ್ಯ ಘಟಕ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ಸಂದರ್ಭದಲ್ಲಿ ಮಾತನಾಡಿರುವ ದೃಶ್ಯಾವಳಿಗಳನ್ನು ಅಂಟಿಸಿದ್ದೇನೆ. ಲೇಖನ ಓದಿ ದೃಶ್ಯಾವಳಿಗಳನ್ನು ನೋಡಿದ ನಂತರ ಸಿದ್ದರಾಮಯ್ಯನವರ ವಾಕ್ ಚಾತುರ್ಯದ ಬಗ್ಗೆ ನಿಮ್ಮ ನಿಮ್ಮ ನಿಲುವನ್ನು ನೀವೇ ನಿರ್ಧರಿಸಿಕೊಳ್ಳಿ .

 

 

Advertisements

One thought on “ವಾಕ್ ಚಾತುರ್ಯದ ಚತುರ ಮುಖ್ಯಮಂತ್ರಿ ಸಿದ್ದರಾಮಯ್ಯ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s