78 ಸಂಚಾರಿ ಆರೋಗ್ಯ ಘಟಕಗಳ ಲೋಕಾರ್ಪಣೆ  

ರಾಜ್ಯದಲ್ಲಿನ ಗ್ರಾಮೀಣ ಪ್ರದೇಶದ ಜನರಿಗೆ, ವೈದ್ಯಕೀಯ ಸೇವೆಯಿಂದ ವಂಚಿತವಾದ ಹಳ್ಳಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಸಂಚಾರಿ ಆರೋಗ್ಯ ಘಟಕಗಳು ಸೇವೆ ಸಲ್ಲಿಸಲಿವೆ. ಇದು ಜನಪರ, ನಾಡಿನ ಜನತೆಯ ಆಶೋತ್ತರಗಳಿಗೆ ಸರ್ಕಾರದ ಕೊಡುಗೆ. ಈ ಸಂಚಾರಿ ಆರೋಗ್ಯ ಘಟಕಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಸೌಧದ ಮುಂಭಾಗ ಲೋಕಾರ್ಪಣೆ ಮಾಡಿದರು. ಸಂಚಾರಿ ಆರೋಗ್ಯ ಘಟಕಗಳ ವೈಶಿಷ್ಟ್ಯ, ಮತ್ತು ವಿವರಗಳು ಇಲ್ಲಿವೆ.

 

1)     ಕೆಲವು ಗ್ರಾಮೀಣ ಪ್ರದೇಶದ ಜನರಿಗೆ, ಅದರಲ್ಲೂ ಬೆಟ್ಟ ಗುಡ್ಡಗಾಡು ಪ್ರದೇಶಗಳು, ದುರ್ಗಮ ಪ್ರದೇಶಗಳು, ಸಾರಿಗೆ ಸಂಪರ್ಕವಿಲ್ಲದ  ಪ್ರದೇಶಗಳು, ಆರೋಗ್ಯ ಸಂಸ್ಥೆಯಿಂದ ದೂರವಿರುವ ಗ್ರಾಮಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸಿಸುವ ಗ್ರಾಮಸ್ಥರಿಗೆ ಕನಿಷ್ಠ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳುವುದಕ್ಕೆ ತೊಂದರೆ ಇರುತ್ತದೆ,

2)     ಅಂತಹ ಗ್ರಾಮಗಳಿಗೆ, ಕನಿಷ್ಠ ಆರೋಗ್ಯ ಸೇವೆ, ಅವರ ಗ್ರಾಮ ಮಟ್ಟದಲ್ಲಿ ಒದಗಿಸಲು  ಕರ್ನಾಟಕ ಸರ್ಕಾರವು ಪ್ರಪ್ರಥಮ ಬಾರಿಗೆ ಸಂಚಾರಿ ಆರೋಗ್ಯ ಘಟಕಗಳ ಸೇವೆಯನ್ನು  ಪಸ್ತುತ 2016-17 ನೇ ಸಾಲಿನಿಂದ ಪ್ರಾರಂಭಿಸಿದೆ.

3)     ಸಂಚಾರಿ ಆರೋಗ್ಯ ಘಟಕ ಸೇವೆಗೆ ಒಂದು ಹೊಸ ಟೆಂಪೋ ಟ್ರಾವಲರ್ ವಾಹನ ನಿಗದಿಪಡಿಸಲಾಗಿದೆ. ಇದನ್ನು ಸೇವೆಗೆ ಅನುಗುಣವಾಗಿ ಪ್ಯಾಬ್ರಿಕೇಶನ್ ಮಾಡಲಾಗಿದೆ. ಈ ವಾಹನದೊಳಗೆ ಅಗತ್ಯ ಪೀಠೋಪಕರಣಗಳು, ಔಷಧಿಗಳು, ಲ್ಯಾಬ್ ವಸ್ತುಗಳನ್ನು ಒದಗಿಸಲಾಗಿದೆ. ಇದರಲ್ಲಿ ತಲಾ ಓರ್ವ ಎಂ.ಬಿ.ಬಿ.ಎಸ್ ವೈದ್ಯರು, ಶುಶ್ರೂಶಕರು, ಔಷಧಿ ವಿತರಕರು, ಕಿರಿಯ ಮಹಿಳಾ ಆರೋಗ್ಯ ಸಹಾಯಕರು, ಪ್ರಯೋಗಾಲಯ ತಜ್ಞರು ಮತ್ತು  ವಾಹನ ಚಾಲಕರಿರುತ್ತಾರೆ.

4)     2016-17 ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ 64 ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆ ನೀಡಲಾಗಿದೆ. ಅಂತೆಯೇ, ರಾಯಚೂರು, ಕಲಬುರಗಿ, ಕೊಪ್ಪಳ,  ವಿಜಯಪುರ, ಬಳ್ಳಾರಿ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ 14 ಮೀಸಲು ವಿಧಾನ ಸಭಾ ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರದ ವಿಶೇಷ ಘಟಕ ಯೋಜನೆ ಮತ್ತು  ಗಿರಿಜನ ಉಪ ಯೋಜನೆ ಅನುದಾನದಿಂದ 14 ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆ ನೀಡಲಾಗಿದೆ. ಒಟ್ಟಾರೆ 78 ಸಂಚಾರಿ ಆರೋಗ್ಯ ಘಟಕಗಳನ್ನು ಪ್ರಾರಂಭಿಸಲಾಗಿದೆ.

5)     ಸಂಚಾರಿ ಆರೋಗ್ಯ ಘಟಕವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ನಡೆಸಲಾಗುತ್ತಿದೆ.  ಈ ಸೇವೆಗಳನ್ನು ನೀಡಲು ಅರ್ಹ ಸರ್ಕಾರೇತರ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

6)     ಸಂಚಾರಿ ಆರೋಗ್ಯ ಘಟಕ ನಡೆಸುವ ಸೇವೆದಾರರು ಪ್ರಾರಂಭಿಕ ಎಲ್ಲಾ ಬಂಡವಾಳ ಹೂಡಿರುತ್ತಾರೆ. ಅವರಿಗೆ ತಿಂಗಳ ಖರ್ಚನ್ನು ಸರ್ಕಾರದ ವತಿಯಿಂದ ಭರಿಸಲಾಗುವುದು.

7)     ಈ ಸಂಚಾರಿ ಆರೋಗ್ಯ ಘಟಕಗಳು ಪ್ರತಿ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10-00 ಗಂಟೆಯಿಂದ ಮದ್ಯಾಹ್ನ 1-00 ಗಂಟೆಯವರೆಗೆ ಒಂದು ಹಳ್ಳಿಯಲ್ಲಿ ಮತ್ತು  ಮದ್ಯಾಹ್ನ 2-30 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ಮತ್ತೊಂದು ಹಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.

8)     ಪ್ರತಿ ಸಂಚಾರಿ ಆರೋಗ್ಯ ಘಟಕಗಳಿಗೆ 13 ರಿಂದ 15 ಹಳ್ಳಿಗಳನ್ನು ನಿಗದಿಪಡಿಸಲಾಗಿದೆ. ಇಂತಹ ಪ್ರತಿ ಹಳ್ಳಿಗೆ ಸಂಚಾರಿ ಆರೋಗ್ಯ ಘಟಕವು ತಿಂಗಳಲ್ಲಿ ಕನಿಷ್ಠ ನಾಲ್ಕು ಅಥವಾ  ಐದು ಬಾರಿ ಭೇಟಿ ನೀಡುತ್ತದೆ.

9)     ಸಂಚಾರಿ ಆರೋಗ್ಯ ಘಟಕವು ನಿಗದಿತ ಹಳ್ಳಿಗೆ ಪ್ರತಿ ದಿನ ಭೇಟಿ ನೀಡಿ,  ಆರೋಗ್ಯ ತಪಾಸಣೆ, ಪ್ರಯೋಗಾಲಯ ಪರೀಕ್ಷೆ ಮತ್ತು ಔಷಧಿಗಳನ್ನು ಸಮಾಜದ  ಎಲ್ಲಾ ವರ್ಗಗಳ ಜನರಿಗೆ ಉಚಿತವಾಗಿ ನೀಡುತ್ತದೆ.

10)    ಸಂಚಾರಿ ಆರೋಗ್ಯ ಘಟಕವು ಗ್ರಾಮದ ಜನರಿಗೆ ದೀರ್ಘಕಾಲದ ಕಾಯಿಲೆಗಳಾದ ಸಕ್ಕರೆ ಖಾಯಿಲೆ, ರಕ್ತದೊತ್ತಡ, ಕೀಲು ನೋವು, ಶ್ವಾಸಕೋಶದ ಕಾಯಿಲೆಗಳಿಗೆ ತಪಾಸಣೆ, ಚಿಕಿತ್ಸೆ, ಅನುಸರಣೆ ಮತ್ತು ವಾರಕ್ಕೆ ಬೇಕಾದ ಔಷಧಿಗಳನ್ನು ಉಚಿತವಾಗಿ ನೀಡುತ್ತದೆ.

11)     ಸಂಚಾರಿ ಆರೋಗ್ಯ ಘಟಕವು ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ಮೇಲ್ದರ್ಜೆಯ  ಆಸ್ಪತ್ರೆಗೆ ಕಳುಹಿಸಿಕೊಡುವ (ರೆಪóರಲ್ ಸರ್ವಿಸ್) ಸೇವೆಯನ್ನೂ ಸಹ ಒದಗಿಸುತ್ತದೆ.

12)    ಸಂಚಾರಿ ಆರೋಗ್ಯ ಘಟಕಗಳು ಅವುಗಳ ಸಿಬ್ಬಂದಿಯ ನೆರವಿನೊಂದಿಗೆ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತವೆ.

13)     ಸಂಚಾರಿ ಆರೋಗ್ಯ ಘಟಕವು ಸೇವೆಗಳನ್ನು ಸೇವೆ ಒದಗಿಸುವ ಸೇವೆದಾರರ ವ್ಯವಸ್ಥಾಪಕರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಅಧಿಕಾರಿಗಳು ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳು  ಮೇಲ್ವಿಚಾರಣೆ ಹಾಗೂ ಪ್ರಗತಿ ಪರಿಶೀಲನೆ ನಡೆಸುತ್ತಾರೆ.

14)    ಮುಂದಿನ ದಿನಗಳಲ್ಲಿ ಎಲ್ಲಾ ಸಂಚಾರಿ ಆರೋಗ್ಯ ಘಟಕಗಳಿಗೆ ಜಿಪಿಎಸ್ ಅಳವಡಿಸಿ,  ಕೇಂದ್ರೀಕೃತ ಅಂತರ್ಜಾಲ ಮೇಲ್ವಿಚಾರಣೆ ವ್ಯವಸ್ಥೆ ವ್ಯಾಪ್ತಿಯೊಳಗೆ ತರಲಾಗುವುದು.

15)    2017-18 ನೇ ಸಾಲಿನಲ್ಲಿ, 64 ಸಂಚಾರಿ ಆರೋಗ್ಯ ಘಟಕಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ನೆರವಿನಿಂದ ಮುಂದುವರೆಸಲಾಗುವುದು. ಇದಕ್ಕಾಗಿ ಬೇಕಾಗುವ 24 ಕೋಟಿ ರೂ ಅನುದಾನಕ್ಕೆ, ರಾಜ್ಯ ಸರ್ಕಾರ  10 ಕೋಟಿ ರೂ ಅನುದಾನ ಒದಗಿಸುತ್ತದೆ.

16)    2017-18 ನೇ ಸಾಲಿನಲ್ಲಿ 50 ತಾಲ್ಲೂಕುಗಳಲ್ಲಿ ಶೇಕಡಾ 40 ಕ್ಕಿಂತಲೂ ಹೆಚ್ಚಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಾಸಿಸುವ ಆಯ್ದ ಗ್ರಾಮಗಳಲ್ಲಿ ರಾಜ್ಯ ಸರ್ಕಾರ  ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಕಾರ್ಯಕ್ರಮದಡಿಯಲ್ಲಿ ಹೆಚ್ಚುವರಿಯಾಗಿ  50 ಸಂಚಾರಿ ಆರೋಗ್ಯ ಘಟಕಗಳನ್ನು ಪ್ರಾರಂಭಿಸುತ್ತಿದೆ.

17)    ಇದಕ್ಕಾಗಿ 2017-18 ನೇ ಸಾಲಿನ ಆಯವ್ಯಯದಲ್ಲಿ 25.34 ಕೋಟಿ  ರೂ ಅನುದಾನವನ್ನು ಕಲ್ಪಿಸಲಾಗಿದೆ.

18)    ಒಟ್ಟಾರೆ 2017-18 ನೇ ಸಾಲಿನ ಆರ್ಥಿಕ ವರ್ಷಾಂತ್ಯದಲ್ಲಿ 48.39 ಕೋಟಿ ರೂ ವೆಚ್ಚದಲ್ಲಿ   128 ಸಂಚಾರಿ ಆರೋಗ್ಯ ಘಟಕಗಳನ್ನು ರಾಜ್ಯದ ಜನತೆಯ ಸೇವೆಗೆ  ಲೋಕಾರ್ಪಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s