ಕೋಲಾರ ಜಿಲ್ಲೆಯಲ್ಲಿ ಏ.2 ರಿಂದ ಏ.30 ರವರೆಗೆ ಲಸಿಕೆ ಆಂದೋಲನ

Kolarರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ಏ.02 ರಿಂದ ಏ.30 ವರೆಗೆ ನಡೆಯಲಿದೆ. ಈ ಕುರಿತು ಜಿಲ್ಲಾಧಿಕಾರಿ ಡಾ ಕೆ ವಿ ತ್ರಿಲೋಕ್ ಚಂದ್ರ ಅವರು ಪೂರ್ವಭಾವಿ ಸಭೆ ನಡೆಸಿದರು. ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಸಭೆ ನಡೆಯಿತು.

1.65 ಲಕ್ಷ ಲಸಿಕೆ ಗುರಿ:

ಕೋಲಾರ ಜಿಲ್ಲೆಯಲ್ಲಿ ಏಪ್ರಿಲ್ 02 ರಿಂದ 3 ದಿನಗಳ ಕಾಲ ಗ್ರಾಮೀಣ ಪ್ರದೇಶದಲ್ಲಿ ಮತ್ತು 4 ದಿನಗಳ ಕಾಲ ನಗರ ಪ್ರದೇಶದಲ್ಲಿ ಪಲ್ಸ್ ಪೋಲಿಯೊ ಲಸಿಕೆ ಹಾಕಲಾಗುವುದು. ನಂತರ ಏಪ್ರಿಲ್ 30 ರಿಂದ ಗ್ರಾಮೀಣ ಪ್ರದೇಶದಲ್ಲಿ 3 ದಿನಗಳ ಕಾಲ ಮತ್ತು ನಗರ ಪ್ರದೇಶದಲ್ಲಿ 4 ದಿನಗಳ ಕಾಲ ಲಸಿಕೆ ಹಾಕಲಾಗುವುದು ಎಂದು ಜಿಲ್ಲಾದಿಕಾರಿ ಡಾ. ಕೆ ವಿ ತ್ರಿಲೋಕ್ ಚಂದ್ರ ತಿಳಿಸಿದರು. ಮೊದಲ ದಿನ ಬೂತ್‍ಗಳಲ್ಲಿ ಮತ್ತು ನಂತರ 2 ದಿನಗಳ ಕಾಲ ಕಾರ್ಯಕರ್ತರು ಮನೆಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ. 5 ವರ್ಷದೊಳಗಿನ ಮಕ್ಕಳಿಗೆ  ಲಸಿಕೆಯನ್ನು ಹಾಕಿಸಬೇಕು. ಜಿಲ್ಲೆಯಲ್ಲಿ ಒಟ್ಟು 1,65,699 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಬೇಕೆಂದು ಗುರುತಿಸಲಾಗಿದೆ.

803 ಲಸಿಕೆ ಬೂತ್ ಗಳು:

ಜಿಲ್ಲೆಯಾದ್ಯಂತ ಒಟ್ಟು 803 ಬೂತ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ, ಇವುಗಳಲ್ಲಿ ಒಟ್ಟು 2900 ಮಂದಿ ಕೆಲಸ ನಿರ್ವಹಿಸುವರು. ಸಿಬ್ಬಂದಿ ವರ್ಗವು ಮೊದಲ ದಿನ ಬೂತ್‍ಗಳಲ್ಲಿ ಕೆಲಸ ಮಾಡಿದರೆ ನಂತರ ಗ್ರಾಮಾಂತರ ಪ್ರದೇಶದಲ್ಲಿ 2 ದಿನ ಹಾಗೂ ನಗರ ಪ್ರದೇಶದಲ್ಲಿ 3 ದಿನಗಳ ಕಾಲ ಮನೆ ಮನೆಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ. ಜಿಲ್ಲೆಯಾಧ್ಯಂತ ಒಟ್ಟು 3,40,612 ಮನೆಗಳಿದ್ದು ಇವುಗಳಿಗೆ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಪಲ್ಸ್ ಪೋಲಿಯೊ ಲಸಿಕೆ ಅಭಿಯಾನದಲ್ಲಿ ಒಟ್ಟು 3,306 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು 156 ಮಂದಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುವರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮೊಬೈಲ್ ಟೀಂಗಳು:

Kolar 1ಗುಡಿಸಲು, ಇಟ್ಟಿಗೆ ಪ್ಯಾಕ್ಟರಿಗಳು ಹೀಗೆ ಬೇರೆ ಬೇರೆ ಕಡೆ ಬಿಡಾರಗಳನ್ನು ಹಾಕಿಕೊಂಡು ಸಾಕಷ್ಟು ಮಂದಿ ವಾಸಿಸುತ್ತಾರೆ. ಇವರಿಗೂ ಸಹ ತಪ್ಪದೆ ಲಸಿಕೆ ಹಾಕಬೇಕೆಂಬ ಉದ್ದೇಶದಿಂದ 4 ಮೊಬೈಲ್‍ ಟೀಂಗಳನ್ನು ರಚಿಸಲಾಗಿದೆ. ಈ ಕುರಿತು ಕರಪತ್ರ, ಬ್ಯಾನರ್‍ ಹಾಗೂ ಆಟೋಗಳ ಮೂಲಕ ಪ್ರಚಾರ ನಡೆಸಲಾಗುವುದು. ಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ಜಾಥಾ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾದಿಕಾರಿಗಳು ತಿಳಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s