ಉದ್ದಿಮೆಗಳ ಪುನಶ್ಚೇತನಕ್ಕೆ ಕಾರ್ಯನೀತಿ ಮೌಲ್ಯ ನಿರ್ಧರಣೆ : ಸಚಿವ ಈಶ್ವರ ಬಿ ಖಂಡ್ರೆ

⁠⁠ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಪುನಶ್ಚೇತನಕ್ಕಾಗಿ ಸರ್ಕಾರದ ಯೋಜನಾ ಇಲಾಖೆಯ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ವತಿಯಿಂದ ಮೌಲ್ಯ ನಿರ್ಧರಣೆ ಮತ್ತು ಕೆ.ಪಿ.ಎಂ.ಜಿ. ಹಾಗೂ ಎಫ್.ಐ.ಸಿ.ಸಿ.ಐ. ಸಹಭಾಗಿತ್ವದಲ್ಲಿ ಆಯಕಟ್ಟಿನ ಕಾರ್ಯನೀತಿ ಮೌಲ್ಯನಿರ್ಧರಣೆ ಅಧ್ಯಯನ ಜರುಗಿಸಲಾಗುತ್ತಿದೆ.

ಈ ಸಂಸ್ಥೆಗಳು ನೀಡುವ ಅಂತಿಮ ವರದಿಯನ್ನಾಧರಿಸಿ ಸಾರ್ವಜನಿಕ ಉದ್ದಿಮೆಗಳ ಸಂಬಂಧಪಟ್ಟ ಆಡಳಿತ ಇಲಾಖೆಗಳು ಕ್ರಮ ಕೈಗೊಳ್ಳುತ್ತವೆ ಎಂದು ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ತಿಳಿಸಿದರು.

ಭದ್ರಾವತಿಯಲ್ಲಿರುವ ಮೈಸೂರು ಕಾಗದ ಕಾರ್ಖಾನೆಯನ್ನು ಗುತ್ತಿಗೆ ಆಧಾರದ ಮೇಲೆ ಖಾಸಗಿಯವರಿಗೆ, ನಿರ್ಧಿಷ್ಟ ಅವಧಿಗೆ ಹಾಗೂ ಅಗತ್ಯ ಷರತ್ತು ಮತ್ತು ನಿಬಂಧನೆಗಳೊಂದಿಗೆ ನೀಡಲು ಕ್ರಮಕೈಗೊಳ್ಳಲಾಗಿದೆ. ಮೈಸೂರು ಕಾಗದ ಕಾರ್ಖಾನೆಯ ಖಾಯಂ ನೌಕರರಿಗೆ ವಿಶೇಷ ಸ್ವಯಂ ನಿವೃತ್ತಿ ಯೋಜನೆ ಮತ್ತು ಗುತ್ತಿಗೆ ಕಾರ್ಮಿಕರಿಗೆ ಸ್ವ-ಇಚ್ಫಾ ನಿರ್ಗಮನ ಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.⁠⁠⁠⁠

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s