ಯಾವುದೇ ಜಮೀನು ಹಂಚಿಕೆಯಾಗಿಲ್ಲ : ಸಚಿವ ಆರ್. ವಿ. ದೇಶಪಾಂಡೆ

ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಶಪಡಿಸಿಕೊಂಡಿರುವ ಭೂಮಿಯಲ್ಲಿ ಯಾವುದೇ ಜಮೀನು ಹಂಚಿಕೆಗೆ ಲಭ್ಯವಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಆರ್. ವಿ. ದೇಶಪಾಂಡೆ ಅವರು ತಿಳಿಸಿದರು.

1979 ನೇ ಸಾಲಿನಲ್ಲಿ ಕುಂಬಳಗೂಡು 1 ನೇ ಹಂತಕ್ಕಾಗಿ 135.04 ಎಕರೆ ಹಾಗೂ 1982ನೇ ಸಾಲಿನಲ್ಲಿ ಕುಂಬಳಗೂಡು 2ನೇ ಹಂತಕ್ಕಾಗಿ 86.66 ಎಕರೆ ಜಮೀನನ್ನು ಅಭಿವೃದ್ಧಿಪಡಿಸಿ, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಈ ಮೂಲಭೂತ ಸೌಕರ್ಯಗಳನ್ನು ಪುನ: ಅಭಿವೃದ್ಧಿಪಡಿರುವ ಕಾಮಗಾರಿಗಳನ್ನು ಮುಂಬರುವ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಎಂ-ಸ್ಯಾಂಡ್ ಉತ್ಪಾದನೆ

ರಾಜ್ಯದಲ್ಲಿ ಪ್ರಸ್ತುತ 164 ಎಂ-ಸ್ಯಾಂಡ್ ತಯಾರಿಸುವ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಅಂದಾಜು 20 ದಶಲಕ್ಷ ಟನ್ ಎಂ. ಸ್ಯಾಂಡ್ ಉತ್ಪಾದನೆಯಾಗುತ್ತಿದ್ದು, ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಪೂರೈಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಅವರು ತಿಳಿಸಿದರು. ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆಯ ಒಟ್ಟು ಮೊತ್ತ ರೂ 10.00 ಕೋಟಿಗಿಂತ ಮೇಲ್ಪಟ್ಟಿರುವ ಎಲ್ಲಾ ಕಾಮಗಾರಿಗಳಲ್ಲಿ ಕಡ್ಡಾಯವಾಗಿ ಉತ್ಪಾದಿತ ಮರಳನ್ನು ಬಳಸಲು ತಿಳಿಸಲಾಗಿದೆ ಎಂದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s