ಮೂರು ವರ್ಷಗಳಲ್ಲಿ 3.73 ಲಕ್ಷ ಮನೆ ಮಂಜೂರು : ಸಚಿವ ಎಂ. ಕೃಷ್ಣಪ್ಪ

ಕಳೆದ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ಬಸವ ವಸತಿ ಯೋಜನೆಯಡಿ 3,73,810 ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ವಸತಿ ಸಚಿವ ಎಂ. ಕೃಷ್ಣಪ್ಪ ಅವರು ತಿಳಿಸಿದರು.

ಸಾಮಾಜಿಕ ಆರ್ಥಿಕ ಜಾತಿ ಜನಗಣತಿ 2011 ರ ಆಧಾರದ ಮೇಲೆ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. 2013-14 ನೇ ಸಾಲಿನಿಂದ ಇಲ್ಲಿಯವರೆಗೆ ಕೊಡಗು ಜಿಲ್ಲೆಗೆ 5,378 ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆಗಳನ್ನು ಮಂಜೂರು ಮಾಡಲಾಗಿದ್ದು, ಇದರಲ್ಲಿ ಒಟ್ಟು 2,418 ಮನೆಗಳು ಪೂರ್ಣಗೊಂಡಿದ್ದು, 1,365 ಮನೆಗಳ ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಉಳಿದಂತೆ 1,595 ಮನೆಗಳು ಪ್ರಾರಂಭವಾಗಬೇಕಿದೆ. ಇದಲ್ಲದೆ 2016-17 ನೇ ಸಾಲಿಗೆ ಹೆಚ್ಚುವರಿಯಾಗಿ 450 ಮನೆಗಳ ಗುರಿಯನ್ನು ಬಸವ ವಸತಿ ಯೋಜನೆಯಡಿ ಮಂಜೂರು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಇಂಟರ್‍ ನೆಟ್ ಸಂಪರ್ಕ

ರಾಜ್ಯದ ಒಟ್ಟು 6022 ಗ್ರಾಮ ಪಂಚಾಯಿತಿಗಳಲ್ಲಿ 4737 ಗ್ರಾಮ ಪಂಚಾಯಿತಿಗಳಿಗೆ ಎನ್‍ಓಎಫ್‍ಎನ್ ಯೋಜನೆಯಡಿ ಇಂಟರ್‍ ನೆಟ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಅವರು ತಿಳಿಸಿದರು.
ರಾಜ್ದದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇಂಟರ್‍ ನೆಟ್ ಸೌಲಭ್ಯ ಒದಗಿಸಲು ಈಗಾಗಲೇ ಎನ್‍ಒಎಫ್‍ಎನ್ ಯೋಜನೆಯಡಿ 4737 ಗ್ರಾಮ ಪಂಚಾಯಿತಿಗಳಿಗೆ ಬಿಎಸ್‍ಎನ್‍ಎಲ್ ಸಂಪರ್ಕ ಕಲ್ಪಿಸಲಾಗಿದೆ. ಉಳಿದ 824 ಗ್ರಾಮ ಪಂಚಾಯಿತಿಗಳಿಗೆ ಮಾರ್ಚ್ 31 ರೊಳಗೆ ಹಾಗೂ 461 ಹೊಸ ಗ್ರಾಮ ಪಂಚಾಯಿತಿಗಳಿಗೆ 2017 ನೇ ಸಾಲಿನ ಜೂನ್ 30 ರೊಳಗೆ ಇಂಟರ್‍ ನೆಟ್ ಸೌಲಭ್ಯ ಒದಗಿಸುವಂತೆ ಮಾರ್ಚ್ 10 ರಂದು ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರು ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಬಿಎಸ್‍ಎನ್‍ಎಲ್ ಸಂಸ್ಥೆಯವರಿಗೆ ತಿಳಿಸಿದ್ದಾರೆ ಎಂದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s