ಪಡಿತರ ಚೀಟಿ ವ್ಯವಸ್ಥೆ ಸುಧಾರಿಸಲು ಕ್ರಮ : ಸಚಿವ ಯು ಟಿ ಖಾದರ್

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ 58 ನ್ಯಾಯಬೆಲೆ ಅಂಗಡಿಗಳು, 43,405 ಬಿಪಿಎಲ್ ಪಡಿತರ ಚೀಟಿಗಳು, 1,003 ಎ.ಪಿ.ಎಲ್ ಪ.ಚೀಟಿಗಳು ಒಟ್ಟು 44,408 ಪಡಿತರ ಚೀಟಿಗಳಿವೆ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರಾದ ಯು.ಟಿ. ಖಾದರ್ ಅವರು ತಿಳಿಸಿದರು.

ಯಶವಂತಪುರ ವಿಧಾನಸಭಾ ಸದಸ್ಯರಾದ ಸೋಮಶೇಖರ್ ಎಸ್.ಟಿ. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಪಡಿತರ ವ್ಯವಸ್ಥೆ ಸುಧಾರಿಸಲು ಕುಟುಂಬದ ದತ್ತಾಂಶ ಸಿದ್ಧಪಡಿಸಿ ಆಧಾರ್ ಗೆ ಜೋಡಣೆ ಮಾಡುವ ಮೂಲಕ ನಕಲಿ ಚೀಟಿಗಳ ಪತ್ತೆ ಹಚ್ಚಲಾಗುತ್ತಿದೆ. ನಗರಪ್ರದೇಶಗಳಲ್ಲಿ ಬಯೋಮೆಟ್ರಿಕ್ ಕೂಪನ್ ವ್ಯವಸ್ಥೆ ತರುತ್ತಿದ್ದು, ನೈಜ ಪಡಿತರ ಚೀಟಿದಾರರು ಮಾತ್ರ ಪಡೆಯುವಂತಾಗುತ್ತದೆ. ಗ್ರಾಮಾಂತರ ಪ್ರದೇಶದ ಪಡಿತರ ವಿತರಣೆಯ ಮಾಹಿತಿಯನ್ನು ಆನ್ ಲೈನ್ ಐವಿಆರ್‍ಎಸ್ ಮೂಲಕ ಅಪ್‍ಡೇಟ್ ಮಾಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಜಾಗೃತ ಸಮಿತಿ ರಚಿಸಲಾಗುತ್ತಿದೆ. ಆಧಾರ್ ನೊಂದಾಯಿತ ಮೊಬೈಲ್ ಸಂಖ್ಯೆಯಿಂದ ದೂರು ದಾಖಲಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪಡಿತರ ಪದಾರ್ಥಗಳ ದುರುಪಯೋಗ ತಡೆಯಲು ಬಹುಮಾನ ಯೋಜನೆ ಜಾರಿಗೆ ತರಲಾಗಿದೆ ಎಂದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s