ರಾಜ್ಯಾಧ್ಯಂತ 316 ಮೇವು ಬ್ಯಾಂಕ್ ಸ್ಥಾಪನೆ:ಸಚಿವ ಕಾಗೋಡು ತಿಮ್ಮಪ್ಪ

 

 

kagodu-timmappa

ಮುಂದಿನ ದಿನಗಳಲ್ಲಿ ಮೇವಿನ ಕೊರತೆಯನ್ನು ನೀಗಿಸಲು ಮೇವಿನ ಬೀಜದ ಮಿನಿಕಿಟ್‍ಗಳನ್ನು ರೈತರಿಗೆ ಉಚಿತವಾಗಿ ವಿತರಿಸಲು ಕಂದಾಯ ಇಲಾಖೆಯಿಂದ 10 ಕೋಟಿ ರೂ. ಗಳನ್ನು ಹಾಗೂ ಕೃಷಿ ಇಲಾಖೆಯಿಂದ 8 ಕೋಟಿ ರೂ. ಗಳನ್ನು ಬಿಡುಗಡೆಮಾಡಲಾಗಿದೆ. ಎಲ್ಲ ಮೇವಿನ ಅಭಾವ ತೀವ್ರವಾಗಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಮೂಲಕ ಮೇವು ಬೆಳೆಯಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.

ಸಚಿವರು ವಿಧಾನ ಪರಿಷತ್ತಿನ ಕಲಾಪದಲ್ಲಿ ಪದವೀಧರರ ಕ್ಷೇತ್ರದ ನಿರಾಣಿ ಹನಮಂತ್ ರುದ್ರಪ್ಪ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿ, ರಾಜ್ಯದಲ್ಲಿ 316 ಮೇವು ಬ್ಯಾಂಕ್‍ಗಳನ್ನು ಸ್ಥಾಪಿಸಲಾಗಿದ್ದು, ಗೋಶಾಲೆಗಳಲ್ಲಿ ಜಾನುವಾರುಗಳಿಗೆ ನೆರಳು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.ಪ್ರಸ್ತುತ ರಾಜ್ಯದಲ್ಲಿ 53.42 ಲಕ್ಷ ಮೆಟ್ರಿಕ್ ಟನ್ ಮೇವು ದಾಸ್ತಾನು ಲಭ್ಯವಿದ್ದು, ಮುಂದಿನ 11 ವಾರಗಳಿಗೆ ಲಭ್ಯವಿದ್ದು, ಮೇವು ಬ್ಯಾಂಕ್‍ನಲ್ಲಿರುವ ಮೇವನ್ನು ರೈತರಿಗೆ ಕೆ.ಜಿ.ಗೆ 2 ರೂ ನಂತೆ, ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಮೇವು ಲಭ್ಯವಾಗದ ಸಂದರ್ಭದಲ್ಲಿ ಹೊರ ರಾಜ್ಯಗಳಿಂದಲೂ ಮೇವು ಖರೀದಿಸಲು ಪರಿಶೀಲಿಸಲಾಗುತ್ತಿದೆ ಎಂದು ನುಡಿದ ಸಚಿವರು ಅವರು ರಾಜ್ಯಾದ್ಯಂತ 78 ಗೋಶಾಲೆಗಳನ್ನು ಸಹ ತೆರೆಯಲಾಗಿದೆ ಎಂದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s