ಅನ್ನಪೂರ್ಣೇಶ್ವರಿ ನಗರಕ್ಕೆ ಪೊಲೀಸ್ ಠಾಣೆ :ಸಚಿವ ಜಿ ಪರಮೇಶ್ವರ್

ನಗರದ ಜ್ಞಾನ ಭಾರತಿ ಪೊಲೀಸ್ ಠಾಣೆ ಸರಹದ್ದು ಬಹು ವಿಸ್ತಾರವಾಗಿದ್ದರಿಂದ, ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ, ಜ್ಞಾನ ಭಾರತಿ ಪೊಲೀಸ್ ಠಾಣೆ ಸರಹದ್ದನ್ನು ವಿಂಗಡಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯನ್ನು ಹೊಸದಾಗಿ ಸೃಜಿಸಿ, ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಠಾಣಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಠಾಣೆಯ ಸರಹದ್ದಿನ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು ಗೃಹ ಸಚಿವರಾದ ಜಿ ಪರಮೇಶ್ವರ್ ಸದನಕ್ಕೆ ತಿಳಿಸಿದರು.

ವಸತಿ ಗೃಹ ನಿರ್ಮಾಣ :

ರಾಜ್ಯದ ತುಮಕೂರು ಜಿಲ್ಲೆಯಲ್ಲಿ ಪೊಲೀಸ್ ಗೃಹ ನಿರ್ಮಾಣಕ್ಕೆ 2020 ಯೋಜನೆಯಡಿಯಲ್ಲಿ 24 ಪಿ.ಸಿ. ಮತ್ತು 6 ಎಸ್‍ಐ ವಸತಿ ಗೃಹಗಳನ್ನು ಹಾಗೂ ಹಂತ -3 ರಲ್ಲಿ 120 ಪಿಸಿ ಮತ್ತು 6 ಎಸ್‍ಐ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ಹನ್ನೊಂದು ಸಾವಿರ ಮನೆಗಳನ್ನು 2275 ಕೋಟಿ ರೂ. ಗಳಲ್ಲಿ ಮೂರು ಹಂತಗಳಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದ ಕಾಮಗಾರಿ ಮುಗಿದಿದ್ದು ಎರಡನೇ ಹಂತದ ಕೆಲಸ ಪ್ರಗತಿಯಲ್ಲಿದ್ದು, ಮೂರನೇ ಹಂತಕ್ಕೆ ಟೆಂಡರ್ ಪ್ರಕಿಯೆ ಪ್ರಾರಂಭವಾಗಿದೆ ಎಂದು ಗೃಹ ಸಚಿವ ತಿಳಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s