ಬೀದಿ ಬದಿ ತಿನಿಸುಗಳಲ್ಲಿ ರಾಸಾಯನಿಕ ಬಳಸದಂತೆ ಸೂಕ್ತ ಕ್ರಮ:ಸಚಿವ ಕೆ ಆರ್ ರಮೇಶ್ ಕುಮಾರ್

ramesh-kumar-20jul13_inಬೀದಿಗಳಲ್ಲಿ ತಯಾರಿಸುವ ಗೋಬಿ ಮಂಚೂರಿ ಮತ್ತು ಫ್ರೈಡ್ ರೈಸ್ ಹೆಚ್ಚಿನ ರುಚಿಗಾಗಿ ಟೇಸ್ಟಿಂಗ್ ಪೌಡರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದು ವೈಜ್ಞಾನಿಕವಾಗಿ ಹಲವು ರೋಗಗಳಿಗೆ ಕಾರಣವಾಗಿರುವುದು ವಿವಿಧ ಅಧ್ಯಯನಗಳಿಂದ ಬೆಳಕಿಗೆ ಬಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್‍ಕುಮಾರ್ ತಿಳಿಸಿದರು.
ವಿಧಾನ ಪರಿಷತ್ತಿನ ಕಲಾಪದಲ್ಲಿ ಹಿರಿಯ ಸದಸ್ಯ ರಾಮಚಂದ್ರ ಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಸಚಿವರು ಚೈನೀಸ್ ರೆಸ್ಟೋರೆಂಟ್‍ಗಳಲ್ಲಿ ಹಾಗೂ ಬೀದಿ ಬದಿಯ ಚೈನೀಸ್ ಆಹಾರ ಪದಾರ್ಥಗಳಲ್ಲಿ ಟೇಸ್ಟಿಂಗ್ ಪೌಡರ್‍ಆಗಿ ಬಳಸುವ ಮೋನೋಸೋಡಿಯಂ ಗ್ಲೋಟಾಮೇಟಾ ರಾಸಾಯನಿಕವನ್ನು ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತಿದ್ದು ಸದರಿ ರಾಸಾಯನಿಕವನ್ನು ನಿಗದಿತ ಪ್ರಮಾಣದಲ್ಲಿ ಉತ್ತಮ ಉತ್ಪಾದನಾ ವಿಧಾನದಲ್ಲಿ ಬಳಸಲು ಅನುಮತಿಸಲಾಗಿದ್ದು, ಅದರಂತೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ಹೆಚ್ಚಿನ ಜನರನ್ನು ಆಕರ್ಷಿಸಲು ವ್ಯಾಪಾರಸ್ಥರು ಈ ರಾಸಾಯನಿಕವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ.

ಇದರಿಂದ ತಲೆನೋವು, ಹೊಟ್ಟೆ ತೊಳಸುವುದು, ಎದೆನೋವು, ತಲೆಸುತ್ತು, ನಿಶಕ್ತಿಯಂತಹ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿದ್ದು, ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸುವುದು ಅಪರಾಧವಾಗಿದೆ ಈ ಬಗ್ಗೆ ಸರಕಾರ ಸೂಕ್ತ ಕ್ರಮ ವಹಿಸಲಿದೆ ಎಂದು ಸಚಿವರು ಹೇಳಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s