ಪ್ರತಿಭೆಗಳ ಸಂಗಮ :ವಾರ್ತಾ ಇಲಾಖೆ

14ನನಗೆ ಹೆಮ್ಮೆಯಾಗುತ್ತದೆ

ನಮ್ಮ ಇಲಾಖೆ
ಪ್ರತಿಭೆಗಳ ಸಂಗಮವೆಂದು
ಅಭಿಜಾತ ಕಲಾವಿದರ
ಪೊರೆದ ತಾಣವೆಂದು
ನಾಡಿನ ಮುನ್ನಡೆಯ
ಡಂಗುರ ಬಾರಿಸಿದ ಶಿವನೆಂದು
ನೆನಪುಗಳ ಜತನದಿ
ಕಾಪಿಟ್ಟ ಭಂಡಾರವೆಂದು..
ನಿನ್ನೆ ನಮ್ಮ ಇಲಾಖೆಯ ಹಲವಾರು ಸಹೋದ್ಯೋಗಿಗಳು ಕವನ ರಚನೆಯ ತಮ್ಮ ಪ್ರತಿಭೆಯನ್ನ ವಾಟ್ಸ್ ಆಪ್ ವೇದಿಕೆಯ ” ವಾರ್ತಾ ಸಮೂಹ” ದಲ್ಲಿ ಪರಿಚಯಿಸಿದ್ದರು.ಅದನ್ನು ಓದಿದ ನಂತರ ಇಲಾಖೆಯ ಪ್ರತಿಭೆ ಮತ್ತು ಪ್ರತಿಭಾನ್ವಿತರ ಬಗ್ಗೆ ನನಗೆ ಹೆಮ್ಮೆಯೆನಿಸಿತು. ಅದಕ್ಕಾಗಿ ಈ ವಾರದ ಅಂಕಣವನ್ನು ” ವಾರ್ತಾ ಇಲಾಖೆ : ಪ್ರತಿಭೆಗಳ ಸಂಗಮ” ಎಂದೇ ಹೆಸರಿಟ್ಟು ಬರೆದಿದ್ದೇನೆ.

11ನಮ್ಮ ವಾರ್ತಾ ಇಲಾಖೆಯನ್ನು ಇಂದಿನ ದಿನಮಾನಕ್ಕೆ ಅನುಗುಣವಾಗಿ ಕಾರ್ಪೊರೇಟ್ ಶೈಲಿಯಲ್ಲಿ ಕಾರ್ಯ ನಿರ್ವಹಿಸಲು ಅನುವಾಗುವಂತೆ ಮರು ರಚನೆ ಮಾಡಲು ಒಂದು ಪರಿಣಿತರ ಸಮಿತಿಯನ್ನು ರಚಿಸಿ ಕೊಡಬೇಕೆಂದು ನಾವು ಕೆಲವು ತಿಂಗಳ ಹಿಂದೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದೆವು.ನಿಮಗೆ ತಿಳಿದಿರಬಹುದು. ಸರ್ಕಾರ ನಮ್ಮ ಇಲಾಖೆಯ ಎಲ್ಲ ಪ್ರಸ್ತಾವಗಳನ್ನು ಸದಾ ಪುರಸ್ಕರಿಸುತ್ತಲೇ ಬಂದಿದೆ.ಎಂದಿನಂತೆ ಸರ್ಕಾರ ನಮ್ಮ ಈ ಪ್ರಸ್ತಾವನೆಯನ್ನು ಸಹ ಅಂಗೀಕರಿಸಿ ಹಿರಿಯ ನಿವೃತ್ತ ಐ ಎ ಎಸ್ ಅಧಿಕಾರಿ ಎಮ್ .ಆರ್ ಶ್ರೀನಿವಾಸಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿದೆ. 6ಇವರು ಬಹಳ ಹಿಂದೆ ವಾರ್ತಾ ಇಲಾಖೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದವರು. ಹಾಗೆಯೆ ಸಮಿತಿಯ ಇತರ ಸದಸ್ಯರಾಗಿ ಹಿರಿಯ ನಿವೃತ್ತ ಐ ಪಿ ಎಸ್ ಅಧಿಕಾರಿ ಎಸ್ ಕೃಷ್ಣಮೂರ್ತಿ , ‘ದಿ ವೀ ಕ್ ‘ ಪತ್ರಿಕೆಯ ದೆಹಲಿಯ ನಿವಾಸಿ ಸಂಪಾದಕ ವಿ . ಸಚ್ಚಿದಾನಂದ ಮೂರ್ತಿ ,ಪ್ರಜಾವಾಣಿಯ ನಿವೃತ್ತ ಸಂಪಾದಕ ರಾಜಾ ಶೈಲೇಶ ಚಂದ್ರಗುಪ್ತ , ಪ್ರಜಾವಾಣಿಯ ಹಿರಿಯ ಪತ್ರಕರ್ತ ಎಮ್ ಎ ಎನ್ ಇಸ್ಮಾಯಿಲ್ ಇವರುಗಳಿದ್ದಾರೆ . ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ವಾರ್ತಾ ಇಲಾಖೆಯ ನಿರ್ದೇಶಕನಾದ ನಾನು ಇದ್ದೇನೆ.

30433a3d-6ab1-4062-a77d-710adb6ca7abಈ ಸಮಿತಿಯ ಮುಂದೆ ನಮ್ಮ ಇಲಾಖೆಯ ಕಾರ್ಯವ್ಯಾಪ್ತಿ , ಕಾರ್ಯಶೈಲಿ ಇತ್ಯಾದಿಗಳ ಮಂಡನೆ ಮಾಡುವಾಗಲೆಲ್ಲಾ ನನಗೆ ಬಹಳ ಹೆಮ್ಮೆಯಾಗುತ್ತಿತ್ತು. ವಿಶೇಷವಾಗಿ ನಮ್ಮ ಇಲಾಖೆಯ ಕ್ಷೇತ್ರ ಪ್ರಚಾರ ಶಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದ ನಟ , ನಟಿಯರಾದ ಸಿ ಆರ್ ಸಿಂಹ , ಉಮಾ ಶಿವಕುಮಾರ್ , ಲೋಕೇಶ್ , ಆರ್ ನಾಗೇಶ್ , ಕಪ್ಪಣ್ಣ , ಭಾರತಿ,
ಇವರು ವಾರ್ತಾ ಇಲಾಖೆಯ ಬಗ್ಗೆ ಜನರಲ್ಲಿ ಒಂದು ರೀತಿಯ ಹೆಮ್ಮೆ ಮೂಡಿಸಿದ್ದರು. ಈ ಬಗ್ಗೆ ಸಮಿತಿಯ ಅಧ್ಯಕ್ಷರಾದಿಯಾಗಿ ಎಲ್ಲರೂ ಪ್ರಶಂಸಿಸುತ್ತಿದ್ದರು . ನಮ್ಮ ಇಲಾಖೆಯ ಇತರ ಶಾಖೆಗಳಲ್ಲಿ ಕೂಡಾ ಹಲವಾರು ಪ್ರತಿಭಾವಂತರು ಕಾರ್ಯ ನಿರ್ವಹಿಸಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಮುಂದಿನ ಸಂಚಿಕೆಗಳಲ್ಲಿ ಅವುಗಳ ಬಗ್ಗೆ ನಾನು ಹೇಳುತ್ತೇನೆ.

a9e98c18-9fce-47fa-bd3f-df1ee1c1e479ಈ ಮಾತುಗಳನ್ನೆಲ್ಲ ನಾನು ಇಲ್ಲಿ ಪ್ರಸ್ತಾಪಿಸಲು ಕಾರಣವಿದೆ. ಮೊನ್ನೆ ಸಮಿತಿ ಸಭೆ ಸೇರಿದ್ದಾಗ ನಮ್ಮ ಇಲಾಖೆಯ ಇತ್ತೀಚಿನ ಧ್ವನಿ ಬೆಳಕು ಕಾರ್ಯಕ್ರಮ ” ಭಾರತ ಭಾಗ್ಯ ವಿಧಾತ ” ದ ವಿಡಿಯೋವನ್ನು ಅವರಿಗಾಗಿ ಪ್ರದರ್ಶಿಸಿದೆವು. ಒಂದೂವರೆ ಘಂಟೆಯ ಈ ವಿಡಿಯೋವನ್ನು ಸಮಿತಿಯ ಸದಸ್ಯರು ಅತ್ತಿತ್ತ ತಿರುಗದಂತೆ ನೋಡಿದರು. ಪ್ರದರ್ಶನ ಮುಗಿದ ನಂತರ ನಮ್ಮ ಇಲಾಖೆಯ ಬಗ್ಗೆ ಮೆಚ್ಚುಗೆಯ ಸುರಿಮಳೆಗರೆದರು. ಆ ಸುರಿಮಳೆಯ ತಂಪು ತಮಗೂ ತಲುಪಬೇಕೆಂದು ಈ ಅಂಕಣದ ಮೂಲಕ ಆ ವಿಷಯವನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ.

4ಈವರೆಗೂ ನಡೆದಿರುವ ಸಭೆಗಳಲ್ಲಿ ನಮ್ಮ ಇಲಾಖೆಯ ಈವರೆಗಿನ ಕಾರ್ಯ ಶೈಲಿಯ ಬಗ್ಗೆ ಸಮಿತಿಗೆ ಸಮಾಧಾನವಿದೆ. ಆದರೆ ಇಲಾಖೆಗೆ ಇನ್ನೂ ಮಾಡಲು ನೂರಾರು ಕಾರ್ಯಗಳಿವೆ. ಸಮಾಧಾನದ ಸ್ಥಿತಿ ತಲುಪಿದೆವೆಂದರೆ ಅಲ್ಲಿಂದ ನಮ್ಮ ಅವನತಿ ಆರಂಭವಾಯಿತೆಂದೇ ಅರ್ಥ. ಈ ಎಚ್ಚರಿಕೆ ಸದಾ ನಮ್ಮಲ್ಲಿರ ಬೇಕು.

ಸದಾ ಹೊಸತಿಗಾಗಿ
ಮನ ಮಿಡಿಯಬೇಕು
ಕಾಯ ತುಡಿಯಬೇಕು
ನೆನಹಲ್ಲಿ ಉಳಿವ ಕಾರ್ಯ
ಆಗ ಆಯಿತು ನೋಡಾ ….

ವಚನ ಶೈಲಿಯಲ್ಲಿ ಮೂಡಿಬಂದ ಈ ನನ್ನ ಆಶಯವನ್ನು ಆಗು ಮಾಡುವ ಚೈತನ್ಯ ನಿಮ್ಮಲ್ಲಿದೆ ಎನ್ನುವ ವಿಶ್ವಾಸ ನನ್ನದು.n-r-vishu-kumar

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s