ದಡಾರ–ರುಬೆಲ್ಲಾ ಕಾಯಿಲೆ ಇಳಿಮುಖ:ಸಚಿವ ಕೆ ಆರ್ ರಮೇಶ್ ಕುಮಾರ್

ramesh_kumarರಾಜ್ಯದಲ್ಲಿ ದಡಾರ ಮತ್ತು ರುಬೆಲ್ಲಾ ಕಾಯಿಲೆಗೆ ಒಟ್ಟು 416 ಎಂ-ಆರ್ ಪ್ರಕರಣ, 360 ರಕ್ತ ಮಾದರಿ ಸಂಗ್ರಹ, 139 ದಡಾರ ಪಾಸಿಟಿವ್, 42 ರುಬೆಲ್ಲಾ ಪಾಸಿಟಿವ್ ಬೆಳಕಿಗೆ ಬಂದಿದ್ದು, ಅದರಲ್ಲಿ ದಡಾರ ಪಾಸಿಟಿವ್ ಬಳ್ಳಾರಿ ಜಿಲ್ಲೆಯಲ್ಲಿ 36 ಪ್ರಕರಣ ಹಾಗೂ ಬೆಂಗಳೂರು ನಗರದಲ್ಲಿ 22 ಪ್ರಕರಣಗಳು ದಾಖಲಾಗಿವೆ ಎಂದು ವಿಧಾನ ಪರಿಷತ್ತಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಕೆ.ಆರ್. ರಮೇಶ್ ಕುಮಾರ್ ಅವರು ತಿಳಿಸಿದರು.
ಶಾಸಕ ಆರ್ ಪ್ರಸನ್ನ ಕುಮಾರ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ದಡಾರ ಮತ್ತು ರುಬೆಲ್ಲಾ ಖಾಯಿಲೆ ಪ್ರಕರಣಗಳ ಮಾಹಿತಿಯನ್ನು ಸದನಕ್ಕೆ ತಿಳಿಸಿ, ವಿಶ್ವದಲ್ಲಿ 2015 ರಲ್ಲಿ 1,34,200 ದಡಾರ ಪ್ರಕರಣದಲ್ಲಿ ಸಾವು ಸಂಭವಿಸಿದ್ದು, ಅದರಲ್ಲಿ 49,200 ಸಾವುಗಳು ಭಾರತದಲ್ಲಿ ಸಂಭವಿಸಿವೆ. ದಡಾರ ಮತ್ತು ರುಬೆಲ್ಲಾ ಕಾಯಿಲೆಗೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಬಲಿಯಾಗಿರುವ ಮಕ್ಕಳ ಸಂಖ್ಯೆ 16 ಎಂದು ಹೇಳಿದ ಸಚಿವರು ವರ್ಷದಿಂದ ವರ್ಷಕ್ಕೆ ಪ್ರಕರಣಗಳು ಇಳಿಮುಖವಾಗುತ್ತಿವೆ ಎಂದರು.
ರಾಜ್ಯದಲ್ಲಿ ಇಲ್ಲಿಯವರೆಗೆ 35 ಲಕ್ಷಕ್ಕೂ ಹೆಚ್ಚಿನ ಮಕ್ಕಳಿಗೆ 2016-17 ನೇ ಸಾಲಿನಲ್ಲಿ ದಡಾರ ಲಸಿಕೆಯನ್ನು ಹಾಕಿಸಲಾಗಿದೆ. ಲಸಿಕೆ ಹಾಕಿಸದೇ ಇರುವ ಮಕ್ಕಳಿಗೆ ಪ್ರತಿ ಗುರುವಾರ ನಿರಂತರವಾಗಿ ಲಸಿಕಾ ದಿನವನ್ನು ಏರ್ಪಡಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s