ಕೇಬಲ್ ನಿಯಂತ್ರಣಕ್ಕೆ ಶೀಘ್ರವೇ ಕಾನೂನು:ಸಚಿವ ಜಿ ಪರಮೇಶ್ವರ್

parameshwar-22ಕೇಬಲ್ ಮತ್ತು ಟಿ.ವಿ. ಚಾನೆಲ್‍ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ದೂರುಗಳು ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ಟ್ರಾಯ್ ಅಡಿಯಲ್ಲಿ ಬರುತ್ತವೆ, ರಾಜ್ಯದಲ್ಲಿ ಈ ಕುರಿತು ಸಮಗ್ರ ಪರಿಶೀಲನೆ ನಡೆಸಿ ನೂತನ ಕೇಬಲ್ ಕಾನೂನು ಶೀಘ್ರದಲ್ಲಿ ಜಾರಿ ತರಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಸದಸ್ಯ ಪುಟ್ಟಣ್ಣ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು ಟ್ರಾಯ್ ಸಂಸ್ಥೆ ಅನ್ವಯ ಕರ್ನಾಟಕದಲ್ಲಿ ಈಗಾಗಲೇ ಟಿ.ವಿ. ಚಾನೆಲ್‍ಗಳ ಕಾರ್ಯಕ್ರಮಗಳ ಮೇಲಿನ ದೂರುಗಳನ್ನು ಪರಿಶೀಲಿಸಲು ರಾಜ್ಯ ಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಮಿತಿ ಹಾಗೂ ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಸಮಿತಿಗಳನ್ನು ರಚಿಸಲಾಗಿದ್ದು ಅವುಗಳು ಮುಖ್ಯವಾಗಿ ಪ್ರಸಾರವಾಗುವ ಕಾರ್ಯಕ್ರಮಗಳ ಮೇಲಿನ ದೂರುಗಳನ್ನು ಪರಿಶೀಲಿಸುತ್ತವೆ ಎಂದು ಸಚಿವರು ತಿಳಿಸಿದರು.

ಕೇಬಲ್ ಶುಲ್ಕವನ್ನು ಕೇಂದ್ರ ಸರ್ಕಾರದ ಅಧೀನ ಟ್ರಾಯ್ ಸಂಸ್ಥೆ ನಿಗದಿಪಡಿಸುವ ಅಧಿಕಾರ ಹೊಂದಿದ್ದು ಈ ತಿಂಗಳ 3 ರಂದು ನಡೆದ ಟ್ರಾಯ್ ಸಭೆಯಲ್ಲಿ ಕನಿಷ್ಠ 100 ಚಾನೆಲ್‍ಗಳ ತಿಂಗಳ ಶುಲ್ಕ 130 ರೂ. ಜೊತೆಗೆ ತೆರಿಗೆ ಸೇರಿ ಮಾಸಿಕ ಶುಲ್ಕ ಎಂದು ತಿಳಿಸಿದೆ ಇದು ಈ ಏಪ್ರಿಲ್‍ನಿಂದ ಜಾರಿಗೆ ಬರಲಿದೆ ಎಂದು ಸಚಿವರು ನುಡಿದರು.

ಕೇಬಲ್ ವ್ಯವಹಾರದಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ತೆರಿಗೆ ಸಂದಾಯವಾಗುವುದಿಲ್ಲ ಹಾಗೂ ರಾಜ್ಯ ಸರ್ಕಾರದ ವಿದ್ಯುತ್ ಕಂಬಗಳು ಸೇರಿದಂತೆ ಇನ್ನಿತರ ಸವಲತ್ತುಗಳನ್ನು ಬಳಸಿಕೊಳ್ಳುವ ಕೇಬಲ್ ವ್ಯವಹಾರ ಕುರಿತು ಅಧ್ಯಯನ ನಡೆಸಿ ಶೀಘ್ರದಲ್ಲಿ ನೂತನ ಕೇಬಲ್ ಕಾನೂನು ಜಾರಿಗೊಳಿಸಲು ಚಿಂತಿಸಲಾಗುವುದು ಎಂದು ಸಚಿವರು ಪರಿಷತ್ತಿನಲ್ಲಿ ಹೇಳಿದರು.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s