ಗದಗ:ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸಲು ಜಿಲ್ಲಾದಿಕಾರಿ ಸೂಚನೆ

ಗದಗ ಜಿಲ್ಲೆಯ ಹುಲಕೋಟಿಯ ಕೆ.ಎಚ್.ಪಾಟೀಲ ಸಮುದಾಯ ಭವನದಲ್ಲಿ ಹೋಬಳಿ ಮಟ್ಟದ ಜನಸ್ಪಂದನ ಸಭೆಯು ಜಿಲ್ಲಾಧಿಕಾರಿ ಮನೋಜ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹುಲಕೋಟಿ, ಅಂತೂರ-ಬೆಂತೂರ, ಅಸುಂಡಿ, ಬೆಳಧಡಿ, ಹತಿ೯, ಚಿಂಚಲಿ, ಯಲಿಶಿರೂರ, ಸೊರಟೂರು, ನಾಗಾವಿ,ಕುತ೯ಕೋಟಿ, ಗ್ರಾ.ಪಂ.ಗಳ ವ್ಯಾಪ್ತಿಯನ್ನು ಹೊಂದಿರುವ ಈ ಹೋಬಳಿಯಯಲ್ಲಿ ಜನತೆಗೆ ಕುಡಿಯುವ ನೀರಿನ ಪೂರೈಕೆ, ಜಾನುವಾರುಗಳಿಗೆ ಮೇವು, ನೀರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡಲು ಕೈಗೊಂಡ ಕಾಮಗಾರಿಗಳ ಕುರಿತು ಗ್ರಾ.ಪಂ.ಸದಸ್ಯರು, ತಾ.ಪಂ. ಸದಸ್ಯರು ಹಾಗೂ ಸಾವ೯ಜನಿಕರ ಅಹವಾಲುಗಳನ್ನು ಜಿಲ್ಲಾಧಿಕಾರಿಗಳು ಆಲಿಸಿದರು.

ಕುಡಿಯುವ ನೀರು:

ಈಗಾಗಲೇ ಇರುವ ಕೊಳವೆ ಬಾವಿಗಳ ಪುನಶ್ಚೇತನಕ್ಕೆ, ಉತ್ತಮವಾಗಿ ನೀರು ದೊರೆಯುವ ಖಾಸಗಿ ಕೊಳವೆ ಬಾವಿಗಳಿಂದ ನೀರು ಪಡೆಯಲು ಆದ್ಯತೆ ನೀಡಲು ಜಿಲ್ಲಾದಿಕಾರಿ ಸೂಚನೆ ನೀಡಿದರು. ಗ್ರಾಮ ಪಂಚಾಯ್ತಿಗಳಿಂದ ಬಂದಿರುವ 14ನೇ ಹಣಕಾಸು ಆಯೋಗದ ಅನುದಾನ ಹಾಗೂ ಜಿಲ್ಲಾ ಟಾಸ್ಕಫೋಸ೯ ಅನುದಾನ ಒಟ್ಟುಗೂಡಿಸಿ ಶಾಶ್ವತ ಕುಡಿಯುವ ನೀರಿನ ಪೂರೈಕೆ ಕಾಮಗಾರಿಗೆ ಪ್ರಾಮುಖ್ಯತೆ ನೀಡಿ.ಖಾಸಗಿ ಕೊಳವೆ ಬಾವಿಗಳ ಮಾಲಿಕರು ನೀರು ಕೊಡುವಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮನವೊಲಿಸ ಬೇಕು ಎಂದು ಜಿಲ್ಲಾದಿಕಾರಿಗಳು ಮನವಿ ಮಾಡಿದರು.

ಮೇವು ಗೋಶಾಲೆ:

ಜಾನುವಾರುಗಳ ಸಂಖ್ಯೆಯನ್ನು ಅನುಸರಿಸಿ ಮೇವು ಲಭ್ಯತೆ ಖಚಿತ ಪಡಿಸಿಕೊಳ್ಳಿ, ಗೋಶಾಲೆಗೆ ಗ್ರಾ.ಪಂ. ಯೋಜನಾಧಿಕಾರಿಗಳು ಕಡ್ಡಾಯವಾಗಿ, ನಿಯಮಿತವಾಗಿ ಭೇಟಿ ನೀಡ ಬೇಕು ಮೇವು ಲಭ್ಯತೆ, ನೀರು ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲಿಸ ಬೇಕು ಎಂದು ಜಿಲ್ಲಾದಿಕಾರಿಗಳು ಅದಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಪ್ರತಿಯೊಂದು ಗ್ರಾ.ಪಂ.ಗೆ ಬರ ಸಮಸ್ಯೆ ಕುರಿತಂತೆ ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ ಸಮಸ್ಯೆಗಳ ಕುರಿತು ತಹಶಿಲ್ದಾರರ ಹಾಗೂ ತಾಲೂಕು ನೋಡಲ್ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಮನೋಜ್ ಜೈನ್ ತಿಳಿಸಿದರು.

ಉದ್ಯೋಗ ಖಾತ್ರಿ:

ಉದ್ಯೋಗ ಖಾತ್ರಿಗೆ ನೋಂದಣಿ ಮಾಡಿಕೊಂಡು ಕಾರ್ಡು ನೀಡುವುದು, ಉದ್ಯೋಗ ಕೇಳಿದವರಿಗೆ ಉದ್ಯೋಗ ಒದಗಿಸುವದು ಗ್ರಾಮ ಪಂಚಾಯ್ತಿ ಪಿಡಿಓ ಗಳ ಜವಾಬ್ದಾರಿ. ಕೂಲಿ ಹಣ ನಿಗದಿತ ಅವಧಿಯೊಳಗೆ ನೀಡಿ ಈ ಕುರಿತು ಏನೇ ದೂರು ಬಂದರೂ ಪಿಡಿಓಗಳನ್ನು ಹೊಣೆ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಮಂಜುನಾಥ ಚವ್ಹಾಣ ಹೇಳಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s