ವಿಧಾನ ಪರಿಷತ್ತಿನಲ್ಲಿಂದು

 

 

Dr_G_Parameshwara

ಡ್ರಗ್ಸ್ ಮಾರಾಟ ಜಾಲ ತಡೆಗೆ ಕ್ರಮ : ಸಚಿವ ಜಿ ಪರಮೇಶ್ವರ್

ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಾದ ನೈಜಿರೀಯನ್‍ರು ಮಾದಕ ವಸ್ತುಗಳ ಮಾರಾಟ ಜಾಲದ ಮೂಲವಾಗಿದ್ದಾರೆ, ಇಲ್ಲಿಯ ತನಕ ಅವರ ಮೇಲೆ 23 ವಿವಿಧ ಪ್ರಕರಣಗಳು ದಾಖಲಾಗಿದ್ದು,  30 ನೈಜಿರೀಯನ್ ಪ್ರಜೆಗಳನ್ನು ಈ ಸಂಬಂಧವಾಗಿ ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸದನಕ್ಕೆ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಸಚಿವರು ಬೆಂಗಳೂರಿನಲ್ಲಿ ಶೈಕ್ಷಣಿಕ ಹೆಸರಿನಲ್ಲಿ ನೆಲೆ ನಿಂತಿರುವ ವಿದೇಶಿ ಪ್ರಜೆಗಳಲ್ಲಿ ನೈಜಿರೀಯನ್‍ರು ಮಾದಕ ವಸ್ತುಗಳ ಮಾರಾಟದ ಜಾಲದಲ್ಲಿ ತೊಡಗಿಕೊಂಡಿರುವುದು ಮತ್ತು ಅತ್ಯಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಅಪರಾಧಿಗಳನ್ನು ರಾಜ್ಯದಿಂದ ಗಡಿಪಾರು ಮಾಡಲು ಸರ್ಕಾರ ಕಠಿಣ ಕ್ರಮಕ್ಕಾಗಿ ಚಿಂತಿಸುತ್ತಿದೆ. ಈಗಾಗಲೇ ಎಲ್ಲಾ ಶಾಲಾ ಕಾಲೇಜುಗಳಿಗೆ ಈ ಸಂಬಂಧ ಸುತ್ತೋಲೆಯನ್ನು ಹೊರಡಿಸಲಾಗಿದ್ದು ತಮ್ಮ ಸಂಸ್ಥೆಗಳಲ್ಲಿ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳ ವಿವರವಾದ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆಗಳಿಗೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ramesh-kumar-20jul13_in

 

ರಾಜ್ಯದ ಎಲ್ಲ ಕಡೆ ಹೈಟೆಕ್ ಆಸ್ಪತ್ರೆಗೆ ಕ್ರಮ

ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಅವರು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ 10 ಹಾಸಿಗೆಗಳ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 2 ಹಾಸಿಗೆಗಳ ಡಯಾಲಿಸಿಸ್ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಲೂಕಿನಲ್ಲಿ ಒಂದು ವೆಂಟಿಲೇಟರ್ ಸಹಿತ 3 ಹಾಸಿಗೆಗಳ ತುರ್ತು ಚಿಕಿತ್ಸಾ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಟಿಲಿಮೆಡಿಸಿನ್ ಸೌಲಭ್ಯ ಕಲ್ಪಿಸಲಾಗುತ್ತದೆ. ರಾಜ್ಯದ 20 ಕೇಂದ್ರಗಳಲ್ಲಿ ತಾಯಿ ಮತ್ತು ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕ ಎಂ.ಸಿ.ಹೆಚ್. ವಿಭಾಗ ತೆರೆಯಲಾಗುತ್ತಿದೆ. ಗುಣಮಟ್ಟದ ಬ್ರಾಂಡೆಡ್ ಔಷಧಿಗಳನ್ನು ಕಡಿಮೆ ದರದಲ್ಲಿ ದೊರಕಿಸಿಕೊಡಲು ರಾಜ್ಯದ 200 ಕಡೆಗಳಲ್ಲಿ ಜನರಿಕ್ ಔಷಧ ಮಳಿಗೆಗಳನ್ನು ತೆರೆಯಲಾಗುತ್ತಿದೆ. ನವಜಾತ ಶಿಶುವಿನ ಆರೋಗ್ಯದ ಬಗ್ಗೆ 37  ಕೇಂದ್ರಗಳಲ್ಲಿ ಸುಸಜ್ಜಿತ ಸಲಕರಣೆಗಳನ್ನು ಎಸ್.ಎನ್.ಸಿಯು ಘಟಕ ಸ್ಥಾಪಿಸಲಾಗಿದೆ. ಉಪಹಾರ ಕೇಂದ್ರ, ಹಣ್ಣಿನ ಮಳಿಗೆ, ಹಾಲು ಉತ್ಪನ್ನ ಮಾರಾಟ ಮಳಿಗೆ, ಶೌಚಾಲಯಗಳನ್ನೊಳಗೊಂಡ ಕಟ್ಟಡಗಳ ಸಂಕೀರ್ಣ ಕಟ್ಟಡ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಆಸ್ಪತ್ರೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. 21 ಜಿಲ್ಲಾ  ಹಾಗೂ 146 ತಾಲೂಕು ಆಸ್ಪತ್ರೆಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ ಎಂದರು.

ಹೆಚ್1 ಎನ್1 ಸೋಂಕು ನಿಯಂತ್ರಣಕ್ಕೆ ಕ್ರಮ

ರಾಜ್ಯದಲ್ಲಿ ಹೆಚ್1 ಎನ್1 ಸೋಂಕು ನಿಯಂತ್ರಣದ ಬಗ್ಗೆ ಸಚಿವರು ರಾಜ್ಯದಲ್ಲಿ 2016 ರಲ್ಲಿ 110 ಮತ್ತು 2017 ರಲ್ಲಿ 871 ಹೆಚ್1 ಎನ್1  ಪ್ರಕರಣಗಳು ಕಾಣಿಸಿಕೊಂಡಿದ್ದು, ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ಉಚಿತ ಪರೀಕ್ಷೆ ಮಾಡಲಾಗುತ್ತಿದ್ದು,  ಈ ಸಂಬಂಧ ಪ್ರಯೋಗಾಲಯಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.

ಔಷಧಿ ದಾಸ್ತಾನು ಇಡಲಾಗಿದೆ. ಜಿಲ್ಲಾ ಕೇಂದ್ರಗಳಿಗೆ ಹೆಚ್ಚುವರಿ ಔಷಧ ಖರೀದಿಗೆ ತಲಾ 50 ಸಾವಿರ ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳಲಾಗಿದೆ. ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯಾ, ಮೆದುಳುಜ್ವರ ಇತ್ಯಾದಿ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಗಟ್ಟಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

hqdefault

ಬಯೋಮೆಟ್ರಿಕ್ ಪದ್ಧತಿ ಮೂಲಕ ಎಲ್.ಪಿ.ಜಿ. ಕೂಪನ್

ಹೊಸ ಪಡಿತರ ಚೀಟಿ ವಿತರಣೆ ಬಗ್ಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಯು.ಟಿ. ಖಾದರ್ ಅವರು, ಹಿಂದೆ ಇದ್ದ ಬೋಗಸ್ ಕಾರ್ಡ್ ವ್ಯವಸ್ಥೆ ತಪ್ಪಿಸಲು ಆನ್ ಲೈನ್ ಮೂಲಕ ಎಲ್ಪಿಜಿ ಕೂಪನ್‍ಗಳನ್ನು ವಿತರಿಸಲಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, ಸರಿಪಡಿಸಲಾಗುತ್ತಿದೆ. ಏಪ್ರಿಲ್ ನಿಂದ ಬಯೋ ಮೆಟ್ರಿಕ್ ಪದ್ದತಿ ಮೂಲಕ ಎಲ್.ಪಿ.ಜಿ. ಕೂಪನ್ ಒದಗಿಸಲಾಗುವುದು ಎಂದರು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s