ಸಾಧನೆಗಳನ್ನು ಜನರಿಗೆ ತಲುಪಿಸುವ ಹೊಣೆಗಾರಿಕೆ ಇದೆ

FILE400” ಜನಪರ ಜನಪ್ರಿಯ ಬಜೆಟ್ ” ರಾಜ್ಯದ 2017- 18 ರ ಆಯವ್ಯಯ ಮಂಡನೆಯಾಗಿದೆ. ಜನರ ಅನಿಸಿಕೆಯಂತೆ ಇದು “ಜನಪರ – ಜನಪ್ರಿಯ ” ಬಜೆಟ್.ಮುಂದಿನ ವರ್ಷ ಚುನಾವಣಾ ವರ್ಷವಾಗಿರುವುದರಿಂದ ಸರ್ಕಾರ ಜನರ ಮನಗೆಲ್ಲಲು ಈ ಬಜೆಟಿನಲ್ಲಿ ಜನರಿಗೆ ಅನುಕೂಲವಾಗುವ ಹಲವಾರು ಕಾರ್ಯಕ್ರಮಗಳನ್ನು ಘೋಷಿಸಿದೆ ಎಂದೂ ಕೆಲವರು ಹೇಳುತ್ತಿದ್ದಾರೆ.

 

 
ಇತಿಮಿತಿಯ ಉತ್ತಮ ಬಜೆಟ್:
ಅದು ಏನೇ ಇರಲಿ ಈ ಆಯವ್ಯಯದಲ್ಲಿ ಸಾಮಾನ್ಯ ಜನರಿಗೆ ಅದರಲ್ಲೂ ತಳಸಮುದಾಯದವರಿಗೆ , ಹಿಂದುಳಿದವರಿಗೆ , ನಗರ ಪ್ರದೇಶದ ಬಡವರಿಗೆ ಸಾಕಷ್ಟು ಕೊಡುಗೆಗಳಿವೆ. ನಿಜ , ಯಾವುದೇ ಆಯವ್ಯಯ ಅಂದುಕೊಂಡದ್ದನ್ನೆಲ್ಲ ಕೊಡುವ ಅಲ್ಲಾವುದ್ದೀನನ ಅದ್ಭುತ ದೀಪವೂ ಅಲ್ಲ ಹಾಗೆಯೇ ಕೇಳಿದ್ದನ್ನೆಲ್ಲ ಕೊಡುವ ಕಾಮಧೇನುವು ಅಲ್ಲ. ಸರ್ಕಾರಕ್ಕೆ ಬರುವ ಆದಾಯವನ್ನು ರಾಜ್ಯದ , ಸಮಾಜದ ಅಭ್ಯುದಯಕ್ಕಾಗಿ ತನ್ನ ಆಶಯ , ಆದ್ಯತೆ ಮತ್ತು ವಿವೇಚನೆಗೆ ಅನುಗುಣವಾಗಿ ಹಂಚಿಕೆ ಮಾಡುವ ಒಂದು ಅಧಿಕೃತ ದಾಖಲೆ ಪತ್ರ . ಹೀಗಾಗಿ ಆಯವ್ಯಯ ಪತ್ರದಿಂದ ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವುದು ಅತೀ ಆಶೆಯಾಗುತ್ತದೆ. FILE808ಈಗ ನಾನಾ ಕಾರಣಗಳಿಂದಾಗಿ ಸರ್ಕಾರಕ್ಕೆ ಸಂಪನ್ಮೂಲಗಳು ಮತ್ತು ವರಮಾನ ಸಹಜವಾಗೇ ಕಡಿಮೆಯಾಗುತ್ತಿವೆ. ಇಂತಹ ಸಂದಿಗ್ದ ಸ್ಥಿತಿಯಲ್ಲಿ ಕೂಡ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ತಮ್ಮ ಇತಿಮಿತಿಯಲ್ಲಿ ಸಾಕಷ್ಟು ಒಳ್ಳೆಯ ಬಜೆಟ್ ನೀಡಿದ್ದಾರೆ ಎನ್ನುವುದು ಸಾಮಾನ್ಯ ಅಭಿಪ್ರಾಯವಾಗಿದೆ. ಮಾದ್ಯಮಗಳಲ್ಲಿ ಕೂಡ ಈ ಭಾವನೆಯೇ ಬಿಂಬಿತವಾಗುವ ಸುದ್ದಿ ಶೀರ್ಷಿಕೆಗಳು ಪ್ರಕಟವಾಗಿವೆ .

ವಾರ್ತಾ ಇಲಾಖೆಯ ಕೊಡುಗೆ:

ನಮ್ಮ ವಾರ್ತಾ ಇಲಾಖೆಗೆ ಸಂಬಂಧಿಸಿದಂತೆ ಒಂದೆರಡು ಆಯವ್ಯಯ ಸಂಬಂದಿ ವಿಷಯಗಳನ್ನು ನಾನು ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳಲೇ ಬೇಕಾಗಿದೆ. ಈ ಆಯವ್ಯಯದಲ್ಲಿ ಅನ್ನ ಭಾಗ್ಯ ಯೋಜನೆಯಡಿ ನೀಡುವ ಆಹಾರಧಾನ್ಯದ ಪ್ರಮಾಣವನ್ನು ಒಬ್ಬ ವ್ಯಕ್ತಿಗೆ 5 ಕೆಜಿಯಿಂದ 7 ಕೆಜಿಗೆ ಹೆಚ್ಚಿಸಿದ್ದಾರೆ. ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ, ಸರ್ಕಾರೀ ಮತ್ತು ಅನುದಾನಿತ ಶಾಲೆಯ ಶಾಲಾಮಕ್ಕಳಿಗೆ ವಾರದಲ್ಲಿ ಮೂರು ದಿನ ಉಚಿತವಾಗಿ ವಿತರಿಸುತ್ತಿದ್ದ ಹಾಲನ್ನು ಐದು ದಿನಗಳಿಗೆ ವಿಸ್ತರಿಸಿದ್ದಾರೆ. ಈ ಎರಡು ನಿರ್ಧಾರಗಳ ಹಿಂದೆ ನಮ್ಮ ವಾರ್ತಾ ಇಲಾಖೆಯ ಕೊಡುಗೆ ಇದೆ.

238 ಕೋಟಿ ಅನುದಾನ:

1 (4)
ನಮ್ಮ ಇಲಾಖೆಯ ಜನಪ್ರಿಯ “ಜನಮನ ” ಕಾರ್ಯಕ್ರಮದಲ್ಲಿ ಎಲ್ಲ ಕಡೆ ಫಲಾನುಭವಿಗಳಿಂದ ಕೇಳಿ ಬಂದ ಅಭಿಪ್ರಾಯ ಮತ್ತು ಮನವೀಯ ಮೇರೆಗೆ ಮುಖ್ಯಮಂತ್ರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಕ್ಷೀರಭಾಗ್ಯ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ ಸರ್ಕಾರದ ನಾಲ್ಕನೇ ವರ್ಷಾಚರಣೆಯ ಸಂದರ್ಭದಲ್ಲಿ ವೇದಿಕೆಯಲ್ಲೇ ಮುಖ್ಯಮಂತ್ರಿಗಳು ಘೋಷಿಸಿದ್ದರು. ಈ ಸಾಲಿನ ಆಯವ್ಯಯದಲ್ಲಿ ನಮ್ಮ ಇಲಾಖೆಗೆ ದಾಖಲೆಯ 283 ಕೋಟಿ ರೂಗಳ ಅನುದಾನವನ್ನು ನೀಡಲಾಗಿದೆ.ಇದು ಚುನಾವಣಾ ವರ್ಷ ; ಆ ಕಾರಣಕ್ಕಾಗಿ ಪ್ರಚಾರಕ್ಕಾಗಿ ಹೆಚ್ಚು ಅನುದಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಆಂಶಿಕ ಸತ್ಯವಿರಬಹುದು. ಆದರೇ ಅದೇ ಪೂರ್ಣ ಸತ್ಯವಲ್ಲ.

ಆದ್ಯತೆ ಸಿಗಬೇಕು:

1 (3)
ಸರಕಾರದ ಕಾರ್ಯಕ್ರಮಗಳ ಮಾಹಿತಿ ಜನರಿಗೆ ವ್ಯಾಪಕವಾಗಿ ತಲುಪಬೇಕು.ಅದನ್ನು ತಲುಪಿಸಲು ಇನ್ನೂ ಹೆಚ್ಚಿನ ಪ್ರಮಾಣದ ಅನುದಾನ ಅಗತ್ಯವಿದೆ.ಈಗ ನೀಡಿರುವ ಅನುದಾನ ಕೊರತೆಯೆನಿಸಿದರೆ ಹಾಗೂ ಅಗತ್ಯವೆನಿಸಿದರೆ ಅದನ್ನು ಪೂರಕ ಆಯವ್ಯಯದಲ್ಲಿ ನೀಡುವ ಭರವಸೆಯನ್ನೂ ಸಹ ಮುಖ್ಯಮಂತ್ರಿಗಳು ಆಯವ್ಯಯ ಪೂರ್ವ ಚರ್ಚೆಯಲ್ಲಿ ತಿಳಿಸಿದ್ದಾರೆ . ಇದಕ್ಕೆಲ್ಲಾ ಮುಖ್ಯ ಕಾರಣ ಮುಖ್ಯಮಂತ್ರಿಗಳಿಗೆ ನಮ್ಮ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಸಮಾಧಾನ ಇರುವುದು. ಆದಾಗ್ಯೂ ವಾರ್ತಾ ಇಲಾಖೆ ಇನ್ನೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಅದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಎನ್ನುವ ಕಾರಣಕ್ಕಾಗಿ ಅವರು ನಮ್ಮ ಇಲಾಖೆಯನ್ನು ತಮ್ಮ ತೆಕ್ಕೆಗೇ ತೆಗೆದುಕೊಂಡಿದ್ದಾರೆ.
ಹೊಣೆಗಾರಿಕೆ ಇದೆ:
ಈಗ ಮುಖ್ಯಮಂತ್ರಿಗಳ ಆಶಯ , ನಿರೀಕ್ಷೆ, ಭರವಸೆಗಳನ್ನು ಈಡೇರಿಸುವ ಗುರುತರ ಹೊಣೆಗಾರಿಕೆ ಇಲಾಖೆಯ ಮೇಲಿದೆ. ನಮ್ಮ ಇಲಾಖೆಯ ಸಹೋದ್ಯೋಗಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಹಿತೈಷಿಗಳ ಸಲಹೆ, ಸಹಕಾರಗಳಿಂದ ಇದನ್ನು ನೆರವೇರಿಸುತ್ತೇನೆಂಬ ವಿಶ್ವಾಸ ನನಗಿದೆN R Vishu Kumar.jpg

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s