ಬರ ಸ್ಥಿತಿ ನಿರ್ವಹಣೆಗೆ ಹಣದ ಕೊರತೆ ಇಲ್ಲ : ಸಚಿವ ದೇಶಪಾಂಡೆ

ಬರ ಪರಿಸ್ಥಿತಿ ನಿರ್ವಹಿಸಲು ಹಣಕಾಸಿನ ಕೊರತೆ ಇಲ್ಲ, ಪ್ರತಿ ತಾಲ್ಲೂಕುಗಳ ಕಾರ್ಯಪಡೆಗೆ ಈ ಹಿಂದೆ ನೀಡಿದ್ದ 60 ಲಕ್ಷ ರೂ.ಗಳ ಜೊತೆಗೆ ಹೆಚ್ಚುವರಿಯಾಗಿ 40 ಲಕ್ಷ ರೂ.ಗಳನ್ನು ಒದಗಿಸಲಾಗಿದೆ ಎಂದು ಬರ ಪರಿಶೀಲನಾ ಸಂಪುಟ ಉಪಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ಹೇಳಿದರು.


ದಾರವಾಡ ಜಿಲ್ಲೆಯ ಮಾರಡಗಿ ಗ್ರಾಮ ಹೊರವಲಯದ ಕೊಂಗಸ್ ಕೆರೆ ಹೂಳೆತ್ತುವ ಕಾಮಗಾರಿ, ಹೆಬ್ಬಳ್ಳಿ ಗ್ರಾಮದ ಮೇವು ಬ್ಯಾಂಕ್, ಕುಸುಗಲ್ ಗ್ರಾಮದಲ್ಲಿ ಮಹಾತ್ಮ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಹಾಗೂ ಮಲಪ್ರಭಾ ಬಲದಂಡೆ ಕಾಲುವೆಯ ಮೂಲಕ ನೀರು ಪಡೆದು ಇತ್ತೀಚೆಗೆ ತುಂಬಿಸಲ್ಪಟ್ಟಿರುವ ಕಿರೇಸೂರ ಹಾಗೂ ಬ್ಯಾಹಟ್ಟಿ ಕೆರೆಗಳನ್ನು ಸಚಿವರು ವೀಕ್ಷಣೆ ನಡೆಸಿದರು. ನಂತರ ಅವರು ಧಾರವಾಡ ಜಿ.ಪಂ.ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾರ್ಚ್ ತಿಂಗಳ ನಂತರ ಕನಿಷ್ಠ ಇನ್ನೂ ಎರಡು ತಿಂಗಳುಗಳ ಕಾಲ ಪರಿಸ್ಥಿತಿಯ ಗಂಭೀರತೆ ಮುಂದುವರೆಯಲಿದೆ. ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಅಲ್ಲಿಯವರೆಗೂ ಅಧಿಕಾರಿಗಳು ಜನ ಜಾನುವಾರುಗಳಿಗೆ ಸಮರ್ಪಕವಾಗಿ ಕುಡಿಯುವ ನೀರು, ಮೇವು ಒದಗಿಸಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ರಾಜ್ಯ ಸರಕಾರ ಈಗಾಗಲೇ 671 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಧಾರವಾಡ ಜಿಲ್ಲೆಯಲ್ಲಿ 1 ಲಕ್ಷ 20 ಸಾವಿರ ರೈತರಿಗೆ 130 ಕೋಟಿ ರೂ.ಗಳ ಇನ್‍ಪುಟ್ ಸಬ್ಸಿಡಿ ಅಗತ್ಯವಿದೆ. ಈಗ 56,470 ರೈತರಿಗೆ 36 ಕೋಟಿ 91 ಲಕ್ಷ ರೂ. ಸಬ್ಸಿಡಿ ಬಿಡುಗಡೆಯಾಗಿದೆ. ಬಾಕಿ ಹಣ ಶೀಘ್ರ ದೊರೆಯಲಿದೆ ಎಂದರು.

ಬಿಳಿ ಜೋಳದ ಮೇವು ಪೂರೈಕೆಗೆ ಕ್ರಮ :

ಸಂಪುಟ ಉಪ ಸಮಿತಿ ಸದಸ್ಯರಾದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಮಾತನಾಡಿ, ಜಾನುವಾರುಗಳಿಗೆ ನೀಡುತ್ತಿರುವ ಹೈಬ್ರಿಡ್ ಮೇವನ್ನು ಜಾನುವಾರುಗಳು ತಿನ್ನುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಬಿಳಿಜೋಳದ ಮೇವನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು. ಮಲಪ್ರಭಾ ಬಲದಂಡೆ ಕಾಲುವೆಯ ಶಾಶ್ವತ ದುರಸ್ತಿಗೆ ಶೀಘ್ರ ನಿರ್ಧಾರ ಕೈಗೊಳ್ಳುತ್ತೇವೆ. ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ಕುಡಿಯುವ ನೀರಿಗಾಗಿ ಲಭ್ಯ ಇರುವ 2.3 ಟಿ.ಎಂ.ಸಿ.ನೀರು ಕಡ್ಡಾಯವಾಗಿ ಕುಡಿಯಲು ಮಾತ್ರ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿರುವ ಸಣ್ಣ ನೀರಾವರಿ ಇಲಾಖೆಯ 118 ಕೆರೆಗಳ ಹೂಳೆತ್ತಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅರಣ್ಯ ಪ್ರದೇಶದಲ್ಲಿರುವ ಕೆರೆಗಳ ಹೂಳೆತ್ತಲು ಕ್ರಮ :

ಗಣಿ,ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಅರಣ್ಯ ಪ್ರದೇಶಗಳಲ್ಲಿರುವ ಕಾಡು ಪ್ರಾಣಿಗಳೂ ಸಹ ಕುಡಿಯುವ ನೀರು ಹುಡುಕಿಕೊಂಡು ನಗರ ಪ್ರದೇಶದ ಚರಂಡಿಗಳಿಗೆ ಬರುತ್ತಿವೆ.ಅರಣ್ಯ ಪ್ರದೇಶದಲ್ಲಿರುವ ಕೆರೆಗಳಲ್ಲಿನ ಹೂಳನ್ನು ಎತ್ತಲು ಅರಣ್ಯ ಕಾಯ್ದೆಯಡಿ ಕಾಮಗಾರಿ ಕೈಗೊಳ್ಳಬೇಕು. ಹೈನುಗಾರಿಕೆ ವೃತ್ತಿಯಲ್ಲಿರುವ ಗೌಳಿ ಸಮುದಾಯಕ್ಕೆ ರಿಯಾಯತಿ ದರದಲ್ಲಿ ಮೇವು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದಾಗ, ಸಚಿವ ದೇಶಪಾಂಡೆ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಪದಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸಿ.ಎಸ್.ಶಿವಳ್ಳಿ,ಶಾಸಕರಾದ ಎನ್.ಹೆಚ್.ಕೋನರಡ್ಡಿ, ಶ್ರೀನಿವಾಸ ಮಾನೆ ಸಂಪುಟ ಉಪ ಸಮಿತಿಯ ಭೇಟಿ ವೇಳೆ ಹಾಜರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s