ನಾಳೆ ರಾಜ್ಯ ಬಜೆಟ್ ಮಂಡನೆ : ವಿಧಾನ ಸಭಾಧ್ಯಕ್ಷ ಕೆ ಬಿ ಕೋಳಿವಾಡ

ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಬೆಳಿಗ್ಗೆ 11.30 ಗಂಟೆಗೆ 2017-18 ನೇ ಸಾಲಿನ ರಾಜ್ಯದ ಬಜೆಟ್‍ನ್ನು ಮಂಡನೆ ಮಾಡಲಿದ್ದಾರೆ ಎಂದು ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರು ತಿಳಿಸಿದರು.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು 9 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪ ಹಾಗೂ ಬಜೆಟ್ ಮೇಲೆ ಚರ್ಚೆ ಹಾಗೂ ಅಂಗೀಕಾರ ಪಡೆಯಲಾಗುವುದು ಎಂದರು.

ಸುಮಾರು 2215 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು 90 ಚುಕ್ಕೆ ಗುರ್ತಿನ ಪ್ರಶ್ನೆಗಳಿಗೆ ಸದನದಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಸಚಿವರು ಉತ್ತರಿಸಲಿದ್ದಾರೆ.  25 ಗಮನ ಸೆಳೆವ ಸೂಚನೆಗಳು ಬಂದಿವೆ.  ನಿಯಮ 351 ರಡಿ 40 ಸೂಚನೆಗಳು ಹಾಗೂ ಒಂದು ಖಾಸಗಿ ನಿರ್ಣಯವನ್ನು ಸ್ವೀಕರಿಸಲಾಗಿದೆ. ಕಳೆದ ಅಧಿವೇಶನದಲ್ಲಿ ಮಂಡನೆಯಾಗಿರುವ ನಾಲ್ಕು ವಿಧೇಯಕಗಳು ಪರ್ಯಾಲೋಚನೆ ಹಾಗೂ ಅಂಗೀಕಾರ ಪಡೆಯಬೇಕಾಗಿದೆ ಎಂದು ತಿಳಿಸಿದರು.

ಹೊಸ ನಿಯಮಾವಳಿ ಪ್ರಕಾರ ಶಾಸಕರ ಕಡ್ಡಾಯ ಹಾಜರಾತಿಗಾಗಿ ದಿನಕ್ಕೆ ಎರಡು ಬಾರಿ ಸಹಿ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸಭಾಧ್ಯಕ್ಷರು ಸ್ಪಷ್ಟಪಡಿಸಿದರು. ಶಾಸಕರ ಕಡ್ಡಾಯ ಹಾಜರಾತಿ ಕುರಿತಂತೆ ರಾಜಕೀಯ ಪಕ್ಷಗಳ ಮುಖ್ಯ ಸಚೇತಕರಿಗೆ ಹೆಚ್ಚಿನ ಜವಾಬ್ದಾರಿ ನಿರ್ವಹಿಸುವಂತೆ ಸೂಚಿಸಿ ಹಾಜರಾತಿ ಆಗುವಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಕೆ.ಬಿ. ಕೋಳಿವಾಡ ಅವರು ತಿಳಿಸಿದರು. ಬಜೆಟ್ ಅಂಗೀಕಾರದ ನಂತರ ವಿಷಯವಾರು ಚರ್ಚೆ ನಡೆದು ಪೂರ್ಣ ಪ್ರಮಾಣದ ಬಜೆಟ್‍ಗೆ ಸದನದಲ್ಲಿ ಜುಲೈನಲ್ಲಿ ಒಪ್ಪಿಗೆ ಪಡೆಯಲಾಗುವುದು.  ವರ್ಷದಲ್ಲಿ 60 ದಿನಗಳ ಕಾಲ ಶಾಸನ ಸಭೆ ನಡೆಸಬೇಕು ಎಂದು ನಿಯಮಾವಳಿಯನ್ನು ಅಂಗೀಕರಿಸಲಾಗಿದೆ ಆ ನಿಟ್ಟಿನಲ್ಲಿ ಸರ್ಕಾರ ಕೂಡ ಇದಕ್ಕೆ ಸಹಕಾರ ನೀಡಬೇಕು ಎಂದರು.

ಶಾಸನ ರಚನೆ ವಿಷಯಗಳಲ್ಲಿ ಸದನದಲ್ಲಿ ವಿಸೃತವಾಗಿ ಚರ್ಚೆ ಆಗಬೇಕು.  ತರಾತುರಿ ಶಾಸನ ಅನುಮೋದನೆಗೆ ಅವಕಾಶ ಮಾಡಿಕೊಡಬಾರದು ಎಂದು ಸರ್ಕಾರಕ್ಕೆ ಸಲಹೆ ನೀಡಿರುವುದಾಗಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s