ಸಾವಯವ ಕೃಷಿ ಅಭಿವೃದ್ಧಿಗೆ 181 ಕೋಟಿ ರೂ.: ಸಚಿವ ಕೃಷ್ಣ ಬೈರೇಗೌಡ

kbg-whiteಸರ್ಕಾರವು ನಾಲ್ಕು ವರ್ಷದಲ್ಲಿ ಸಾವಯವ ಕೃಷಿ ಅಭಿವೃದ್ಧಿಗೆ 181 ಕೋಟಿ ರೂ.ಗಳ ಅನುದಾನವನ್ನು ನೀಡಿದ್ದು, ಸುಮಾರು 81,000 ರೈತರು ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಹೊಟೇಲ್ ಕ್ಯಾಪಿಟಲ್‍ನಲ್ಲಿ ಆಯೋಜಿಸಿದ್ದ ಸಾವಯವ ಪದಾರ್ಥ ಮತ್ತು ಸಿರಿಧಾನ್ಯಗಳ ರಾಷ್ಟ್ರೀಯ ವಾಣಿಜ್ಯ ಮೇಳ-2017ರ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸುಮಾರು 53,000 ರೈತರನ್ನು ಸುಮಾರು 63,677 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಪದ್ಧತಿಗೆ ಬದಲಾಯಿಸಲಾಗಿದೆ. 40 ಹೆಕ್ಟೇರ್ ಭೂಮಿಯಲ್ಲಿ ರೈತರು ಸ್ವಯಂ ಪ್ರೇರಿತರಾಗಿ ಸಾವಯವ ಕೃಷಿಯನ್ನ ಅಳವಡಿಸಿಕೊಂಡಿದ್ದಾರೆ. ಪ್ರಸ್ತುತ 1,35,000 ಹೆಕ್ಟೇರ್ ಪ್ರದೇಶದಲ್ಲಿ 81,000 ರೈತರು ಪೂರ್ಣ ಪ್ರಮಾಣದ ಸಾವಯವ ಕೃಷಿಕರಾಗಿದ್ದು, ಇದಕ್ಕಾಗಿ ಸರ್ಕಾರವು 181 ಕೋಟಿ ರೂ.ಗಳನ್ನು ಅನುದಾನ ನೀಡಿದೆ ಎಂದರು.

ಆಹಾರ ಉತ್ಪಾದನೆಯನ್ನು ಹೆಚ್ಚಿಸಲು, ಮಣ್ಣಿನ ಆರೋಗ್ಯ ವರ್ಧಿಸಲು, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಹಾಗೂ ಗ್ರಾಮೀಣಾಭಿವೃದ್ಧಿಯನ್ನು ಪ್ರವರ್ಧಿಸಲು ಹಾಗೂ ಬರದ ಪರಿಸ್ಥಿತಿಯನ್ನು ನಿಭಾಯಿಸಲು ಸಾವಯವ ಹಾಗೂ ಸಿರಿಧಾನ್ಯಗಳ ಕಡೆಗೆ ನಡೆಯುವುದು ಇದು ಸೂಕ್ತ ಸಮಯ ಎಂದರು. ಆಯಾ ಭಾಗದಲ್ಲಿ ಒಕ್ಕೂಟಗಳನ್ನು ರಚಿಸಿ ಸಾವಯವ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡುವುದು ಹಾಗೂ ಒಕ್ಕೂಟದಿಂದ ಚಿಲ್ಲರೆ ಮಾರಾಟ ಕೈಗೆತ್ತಿಕೊಳ್ಳಲು ಸರ್ಕಾರವು 10 ಕೋಟಿ ರೂ.ಗಳನ್ನು ಸರ್ಕಾರದಿಂದ ನೀಡಲಾಗುವುದು ಎಂದು ಸಚಿವರು ಹೇಳಿದರು.
ಬೆಂಗಳೂರು ಆರ್ಗಾನಿಕ್ ಹಬ್ ಎಂದು ಪ್ರಸಿದ್ದಿಯಾಗಿದ್ದು, ಏಪ್ರಿಲ್ 28 ರಿಂದ 30ರ ವರೆಗೆ ಜರುಗುವ ಸಾವಯವ ಮತ್ತು ಸಿರಿಧಾನ್ಯಗಳ ರಾಷ್ಟ್ರೀಯ ಮೇಳ-17 ನ್ನು ಏರ್ಪಡಿಸಲಾಗಿದೆ. ಈ ಮೇಳ ಕೃಷಿ ವಿಚಾರದ ಪರಿಣತಿ ಮತ್ತು ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಒಂದು ವೇದಿಕೆ ಹಾಗೂ ಸಂಪರ್ಕ ಸೇತುವಾಗಿದೆ ಎಂದರು. ವಿವಿಧ ರಾಜ್ಯಗಳಿಂದ ಬರುವ ರೈತರು ಮತ್ತು ಕೃಷಿಕ ತಂಡಗಳ ಸಾಧನೆ ಮತ್ತು ಸಾಮಥ್ರ್ಯಗಳನ್ನು ಪ್ರದರ್ಶಿಸುವುದಲ್ಲದೆ, ಪ್ರಮುಖವಾಗಿ ಕರ್ನಾಟಕವು ತನ್ನ ಸಾವಯವ ಸಂಪತ್ತು, ವೈವಿದ್ಯತೆ ಹಾಗೂ ರೈತರ ಸಮಗ್ರ ಸಾಧನೆ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ಒದಗಿಸಲಾಗುವುದು. ಸಾವಯವ ಕೃಷಿ ಮತ್ತು ಮಾರಾಟಕ್ಕೆ ಉತ್ತಮ ಅವಕಾಶ ಹಾಗೂ ಅನುಕೂಲ ಕಲ್ಪಿಸುವ ವಿಚಾರ ಕುರಿತ ರಾಷ್ಟ್ರೀಯ ಸಮ್ಮೇಳನ ಹಾಗೂ ಕರ್ನಾಟಕದ ರೈತರಿಗೋಸ್ಕರ ಕನ್ನಡ ಭಾಷೆಯಲ್ಲಿ ನಡೆಯವ ರೈತರ ಕಾರ್ಯಾಗಾರ, ಸಾವಯದ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಸಿರಿಧಾನ್ಯ ಮತ್ತು ಸಾವಯವ ಆಹಾರ ಕೋರ್ಟ್ ಮುಂತಾದ ವ್ಯವಸ್ಥೆಗಳಿರುತ್ತವೆ. ಈ ಮೇಳಕ್ಕೆ ವ್ಯಾಪಾರಿ ಸಮುದಾಯ, ರೈತರು ಮತ್ತು ಸಾರ್ವಜನಿಕರು ಭಾಗವಹಿಸುವಂತೆ ಮಾಧ್ಯಮಗಳ ಮೂಲಕ ವಿನಂತಿಸಿದರು. ರಾಸಾಯನಿಕದಿಂದ ದೂರವಿದ್ದು, ಸಾವಯವಕ್ಕೆ ಹತ್ತಿರವಾಗುವುದರ ಜೊತೆಗೆ ಉತ್ತಮ ಆರೋಗ್ಯದ ಕಡೆಗೆ ನಡಿಗೆ ಸೂಕ್ತ ಎಂದು ಸಚಿವರು ನುಡಿದರು. ಈ ಸಂದರ್ಭದಲ್ಲಿ ಸಚಿವರು ಮೇಳದ ಪೂರ್ವಭಾವಿಯಾಗಿ ಕಾರ್ಯಕ್ರಮದ ಲೋಗೋ, ಮಾಹಿತಿ ಪುಸ್ತಕ ಹಾಗೂ ವೆಬ್‍ಸೈಟ್‍ ಉದ್ಘಾಟಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s