ಮಹಿಳಾ ಸಬಲೀಕರಣಕ್ಕೆ 10ಕೋಟಿ ಮೀಸಲು:ಮುಖ್ಯಮಂತ್ರಿ ಸಿದ್ದರಾಮಯ್ಯ

cm3ಎಲ್ಲಾ ರಂಗಗಳಲ್ಲೂ ಮಹಿಳೆಯರಿಗೆ ಅವಕಾಶ, ಸವಲತ್ತು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಇತರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸಬಲೀಕರಣಕ್ಕೆ 10ಕೋಟಿ ಮೀಸಲು
1909 ರಲ್ಲಿ ಅಮೇರಿಕಾದಲ್ಲಿ ಮೊದಲ ಮಹಿಳಾ ದಿನಾಚರಣೆ ನಡೆದಿತ್ತು. 2011 ರ ಜನಗಣತಿಯ ಪ್ರಕಾರ 1000 ಪುರುಷರಿಗೆ 973 ಮಹಿಳೆಯರಿದ್ದಾರೆ. ನಾವು ಹೆಣ್ಣು ಭ್ರೂಣಹತ್ಯೆಯನ್ನು ನಿಲ್ಲಿಸಬೇಕು. ಮಹಿಳೆಯರಿಗೆ ಪುರುಷರಂತೆ ಸಮಾನ ಅವಕಾಶ ಸಿಗಬೇಕು. ಕೆಲವರಿಗೆ ಪ್ರತಿಭೆ, ವಿದ್ಯೆಯಿದ್ದರೂ ಅವಕಾಶ ವಂಚಿತರಾಗಿದ್ದಾರೆ. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಗಳಲ್ಲೂ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಸಮಾಜದಲ್ಲಿ ಲಿಂಗ ತಾರತಮ್ಯ, ಹೆಣ್ಣು ಭ್ರೂಣಹತ್ಯೆ ಮಹಿಳಾ ದೌರ್ಜನ್ಯವನ್ನು ಹೋಗಲಾಡಿಸುವಲ್ಲಿ ನಾವು ಪ್ರಯತ್ನಿಸಬೇಕು.cm4 ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಅವಕಾಶಗಳು ಸಿಗಬೇಕು. ದೇಶ ಸ್ವಾತಂತ್ರ್ಯ ದೊರೆತು 70 ವರ್ಷಗಳಾದರೂ ಸಹ ಅಸಮಾನತೆ ಮುಂದುವರೆದಿದೆ. ಸ್ವಾಮಿ ವಿವೇಕಾನಂದರು ಮಹಿಳೆಯರ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದರು. ಈಗಲೂ ಮಹಿಳೆಯರು ಬಸ್ ಚಾಲಕಿ, ಗಗನಸಖಿ ಹೀಗೆ ಹಲವು ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರವು ಕಳೆದ 4 ವರ್ಷಗಳಿಂದ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಮೃದ್ಧಿ ಯೋಜನೆಯಡಿ ಸ್ವಂತ ವೃತ್ತಿ ಆರಂಭಿಸುವ ಮಹಿಳೆಯರಿಗೆ 10 ಸಾವಿರ ಸಬ್ಸಿಡಿ, 40 ಸಾವಿರ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಸರ್ಕಾರ ಇದಕ್ಕೆ 10 ಕೋಟಿ ಮೀಸಲಿಟ್ಟಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ರಾಜ್ಯದಲ್ಲಿ ಒಂದೂವರೆ ಲಕ್ಷ ಮಹಿಳಾ ಸ್ವಯಂಸೇವಾ ಸಂಘಗಳಿದ್ದು, 22 ಲಕ್ಷ ಸದಸ್ಯರಿದ್ದಾರೆ. ಅವರಿಗೆ ಸುತ್ತು ನಿಧಿಯ ಮೊತ್ತವನ್ನು 5000 ದಿಂದ 25,000 ರೂ. ಗಳಿಗೆ ಹೆಚ್ಚಿಸಲಾಗಿದೆ. ಅಂರ್ತಜಾತಿಯ ವಿವಾಹಕ್ಕೆ 50,000 ರೂ. ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. cm5ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿ ಮಾತನಾಡಿದ ಸಚಿವರಾದ ಉಮಾಶ್ರೀ ಅವರು, ಇಲಾಖೆ ವತಿಯಿಂದ ಮಹಿಳೆಯರ ಸಬಲೀಕರಣ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಗೆ ಬಡ್ಡಿರಹಿತ ಸಾಲ, ಮಂಗಳಮುಖಿಯರ ಏಳಿಗೆ, ಆಸಿಡ್ ಸಂತ್ರಸ್ತರಿಗೆ ಸಹಾಯಧನ ಹಾಗೂ 3000 ರೂ.ಗಳ ಮಾಸಾಶನ, ಧನಶ್ರೀ ಯೋಜನೆಯಡಿ ಎಚ್.ಐ.ವಿ. ಸಂತ್ರಸ್ಥರಿಗೆ ಸಹಾಯಧನ ಸಮೃದ್ಧಿ ಯೋಜನೆಯಡಿ ಸ್ವಂತ ಉದ್ಯೋಗ ನಡೆಸುವವರಿಗೆ 10,000 ರೂ.ಗಳ ಸಹಾಯಧನ ಹೀಗೆ ಮಹಿಳೆಯರ ಏಳಿಗೆಗಾಗಿ ಇಲಾಖೆ ಶ್ರಮಿಸುತ್ತಿದೆ ಎಂದರು.

cm6ಕಾರ್ಯಕ್ರಮದಲ್ಲಿ ಮಹಿಳೆಯರ ಪರ ಶ್ರಮಿಸಿದ 5 ಸಂಸ್ಥೆಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಅತ್ಯುತ್ತಮ ಸ್ತ್ರೀ ಜಾಗೃತಿ ಮೂಡಿಸಿದ ಮಹಿಳೆಯರಿಗೆ, ಅತ್ಯುತ್ತಮ ಸ್ತ್ರೀಶಕ್ತಿ ಸಂಘಗಳಿಗೆ, ತಾಲ್ಲೂಕು ಮಟ್ಟದ ಸಂಸ್ಥೆಗಳಿಗೆ, ಅಂತರರಾಷ್ಟ್ರೀಯ ಈಜುಪಟು ರೇವತಿ ನಾಯಕ್ ಅವರಿಗೆ, ಬಳ್ಳಾರಿಯಲ್ಲಿ ಮಹಿಳೆಯರ ಕಳ್ಳಸಾಗಣೆ ನಿಗ್ರಹ ಮಾಡಿದ 43 ಸಂತ್ರಸ್ತರನ್ನು ಕಾಪಾಡಿದ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಧಿಕಾರಿಗಳ ಕಾರ್ಯಕ್ರಮದಲ್ಲಿ ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಕೆ. ಜೆ. ಜಾರ್ಜ್ ಅವರು, ಗಣ್ಯರು ಮತ್ತು ಹಿರಿಯ ಅದಿಕಾರಿಗಳು ಉಪಸ್ಥಿತರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s