ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸರ್ಕಾರದ ಆನ್ ಲೈನ್ ಮಾಹಿತಿ ಕೋಶ ಲೋಕಾರ್ಪಣೆಗೆ ಸಜ್ಜು

cm-181ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 7 ರಂದು ಮುಖ್ಯಮಂತ್ರಿಯವರ ಮಾಹಿತಿ ಮಂಡಲ (ಡ್ಯಾಷ್ ಬೋರ್ಡ್ ) ವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ರಾಜ್ಯ ಸಚಿವ ಸಂಪುಟದ ಸದಸ್ಯರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಸುಭಾಷ್ ಚಂದ್ರ ಕುಂಟಿಯಾ ಅವರೂ ಸೇರಿದಂತೆ ಉನ್ನತ ಅಧಿಕಾರಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಏನಿದು ಪ್ರತಿಬಿಂಬ ?
ಪ್ರತಿಬಿಂಬ – ಇದು ರಾಜ್ಯ ಸರ್ಕಾರವು ಲೋಕಾರ್ಪಣೆ ಮಾಡುತ್ತಿರುವ ಅಂತರ್ಜಾಲ ಆಧಾರಿತ ಮಾಹಿತಿ ಮಂಡಲ ( ಮಾಹಿತಿ ಕೋಶ ). ಇದು ರಾಷ್ಟ್ರದ ಜನತೆಗೆ ಕರ್ನಾಟಕ ಸರ್ಕಾರದ ಸಮಗ್ರ ಸಾಧನೆ ಹಾಗೂ ಪ್ರಗತಿಯ ಮಾಹಿತಿ ಒದಗಿಸಲಿದೆ. ಮುಖ್ಯಮಂತ್ರಿಯವರ ಮಾಹಿತಿಕೋಶ ಎಂದು ಹೆಸರಿಸಿ ಅಭಿವೃದ್ಧಿ ಪಡಿಸಲಾಗಿರುವ ಈ ತಾಣವು ಆಡಳಿತವನ್ನು ಪರಿಣಾಮಕಾರಿಯಾಗಿಸುವಲ್ಲಿ ಪ್ರಮುಖ ಸಾಧನವಾಗಲಿದೆ. ಅದೇ ವೇಳೆ ಸರ್ಕಾರದ ಪ್ರಗತಿಯ ಬಗ್ಗೆ ನಿಗಾ ಇರಿಸಲು ಜನತೆಗೆ ಅವಕಾಶ ಒದಗಿಸಲಿದೆ. ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷಾ ಆವೃತ್ತಿಯಲ್ಲಿ ಈ ಮಾಹಿತಿ ತಾಣವು ಲಭ್ಯವಿರಲಿದೆ.

ಕರ್ನಾಟಕದ ಪ್ರಗತಿಪಥದ ಮೈಲುಗಲ್ಲುಗಳನ್ನು ಬಿಂಬಿಸುವ ಹಾಗೂ ಅಭಿವೃದ್ದಿಯ ಚಿತ್ರಣವನ್ನು ನೀಡುವ ಸಲುವಾಗಿ ರಾಜ್ಯ ಸರ್ಕಾರವು ಪ್ರತಿಬಿಂಬ ತಾಣವನ್ನು ಲೋಕಾರ್ಪಣೆ ಮಾಡುತ್ತಿದೆ. ಈ ಮಾಹಿತಿ ತಾಣವು ಎಲ್ಲಾ ಇಲಾಖೆಗಳ ಕಾರ್ಯ ಚಟುವಟಿಕೆಗಳನ್ನು, ಪ್ರಮುಖ ಯೋಜನೆಗಳ ಹಾಗೂ ಮಹತ್ವದ ಕಾರ್ಯಕ್ರಮಗಳ ಕಾರ್ಯಾನುಷ್ಠಾನವನ್ನು ಜನರ ಮುಂದೆ ಸಾದರಪಡಿಸಲಿದೆ.
ಸರ್ಕಾರದ ವಿವಿಧ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಭರವಸೆಗಳ ಈಡೇರಿಕೆಯಲ್ಲಿ ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿಯ ಮಾಪನ ಮಾಡಲು ಮಾಹಿತಿ ಕೋಶದಲ್ಲಿ ಇರುವ ಸಾಧನಗಳು ನೆರವಾಗುತ್ತವೆ. ಇದು ಸರ್ಕಾರದ ಇಲಾಖೆಗಳು ಹೆಚ್ಚು ಪಾರದರ್ಶಕ, ಉತ್ತರದಾಯಿತ್ವ ಹಾಗೂ ಪರಿಣಾಮಕಾರಿಯಾಗಲು ಸಹಕಾರಿಯಾಗಲಿದೆ. ಆ ಮೂಲಕ ಸರ್ಕಾರವು ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಅಭಿವೃದ್ಧಿಯೆಡೆಗಿನ ತನ್ನ ಆಡಳಿತ ತತ್ವಕ್ಕೆ ಬದ್ಧವಾಗಿರಲು ಪೂರಕವಾಗಲಿದೆ.
ಪ್ರತಿಬಿಂಬವು ಸರ್ಕಾರದ ಪ್ರಮುಖ ಯೋಜನೆಗಳ ಹಾಗೂ ಮಹತ್ವದ ಕಾರ್ಯಕ್ರಮಗಳ ಕುರಿತ ಮಾಹಿತಿಯನ್ನು ಕ್ಷಿಪ್ರವಾಗಿ, ನಿಖರವಾಗಿ ಹಾಗೂ ಪಾರದರ್ಶಕವಾಗಿ ಜನರಿಗೆ ಒದಗಿಸಲಿದೆ. ಇದರಿಂದ ಜನತೆಗೆ ಸರ್ಕಾರದ ಪ್ರಗತಿ ಪರಿಶೀಲನೆ ಸಾಧ್ಯವಾಗಲಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಲಾಗಿರುವ ಭರವಸೆಗಳ ಈಡೇರಿಕೆಗೆ, ಆಯವ್ಯಯದಲ್ಲಿ ನೀಡಲಾಗಿರುವ ಭರವಸೆಗಳ ಪೂರೈಕೆಗೆ ಹಾಗೂ ದೈನಂದಿನ ಆಡಳಿತದ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಡೆಸಲು ಅಗತ್ಯವಾದ ಮಾಹಿತಿ ಆಧಾರಿತ ಸಾಧನಗಳನ್ನು ಪ್ರತಿಬಿಂಬವು ಸರ್ಕಾರಕ್ಕೆ ಒದಗಿಸಲಿದೆ.
ಭವಿಷ್ಯದಲ್ಲಿ ಪ್ರತಿಬಿಂಬವನ್ನು ಮತ್ತಷ್ಟು ವಿಸ್ತರಿಸುವ, ವೈವಿಧ್ಯವಾಗಿಸುವ ರೀತಿಯಲ್ಲಿ ರೂಪಿಸಲಾಗಿದೆ. ಮುಂದಿನ ಆವತರಣಿಕೆಯ ಸಂದರ್ಭದಲ್ಲಿ ವಿವಿಧ ಇಲಾಖಾ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಜಿಲ್ಲಾವಾರು ಪ್ರಗತಿ, ಬೇರೆ ಬೇರೆ ಇಲಾಖೆಗಳಿಗೆ ಸಂಬಂಧಿಸಿದ ತಂತ್ರಾಂಶ ಮತ್ತು ಗಣಕೀಕೃತ ವ್ಯವಸ್ಥೆಯನ್ನು ಒಂದೇ ವೇದಿಕೆಯಡಿ ತರುವ ಏಕೀಕೃತ ವ್ಯವಸ್ಥೆಯ ನಿರ್ಮಾಣವನ್ನೂ ಪ್ರತಿಬಿಂಬವು ಒಳಗೊಳ್ಳಲಿದೆ. ಅಲ್ಲದೆ, ಜನರ ಪ್ರತಿಕ್ರಿಯೆಗಳಿಗೆ ಅಗತ್ಯವಾದ ವೇದಿಕೆಯನ್ನು ನಿರ್ಮಿಸಲಿದೆ. ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಪರಿವರ್ತನೆಯ ತತ್ವಗಳಲ್ಲಿ ಭದ್ರವಾಗಿ ನೆಲೆಯೂರಿರುವ ಈ ಸರ್ಕಾರದ ಆಡಳಿತವನ್ನು ಮತ್ತಷ್ಟು ಬಲಪಡಿಸಿ ಜನರತ್ತ ಕೊಂಡೊಯ್ಯುವಲ್ಲಿ ಪ್ರತಿಬಿಂಬ ಅತ್ಯುತ್ತಮ ವೇದಿಕೆ ಕಲ್ಪಿಸಲಿದೆ

Advertisements
Posted in CM

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s