‘ಮುಖ್ಯಮಂತ್ರಿ ಮಾಹಿತಿ ಕೋಶ’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

1ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯವರ ಆನ್ ಲೈನ್ ಮಾಹಿತಿ ಕೋಶ “ಪ್ರತಿಬಿಂಬ” ಕ್ಕೆ ಅಧಿಕೃತ ಚಾಲನೆ ನೀಡಿದರು. ರಾಜ್ಯ ಸರ್ಕಾರವು ಲೋಕಾರ್ಪಣೆ ಮಾಡುತ್ತಿರುವ ಅಂತರ್ಜಾಲ ಆಧಾರಿತ ಮಾಹಿತಿ ಮಂಡಲ ( ಮಾಹಿತಿ ಕೋಶ ) ಜನತೆಗೆ ಕರ್ನಾಟಕ ಸರ್ಕಾರದ ಸಮಗ್ರ ಸಾಧನೆ ಹಾಗೂ ಪ್ರಗತಿಯ ಮಾಹಿತಿ ಒದಗಿಸಲಿದೆ.
ಏನಿದು ಪ್ರತಿಬಿಂಬ?:
ಮುಖ್ಯಮಂತ್ರಿಯವರ ಮಾಹಿತಿಕೋಶ ಎಂದು ಹೆಸರಿಸಿ ಅಭಿವೃದ್ಧಿ ಪಡಿಸಲಾಗಿರುವ ಈ ತಾಣವು ಆಡಳಿತವನ್ನು ಪರಿಣಾಮಕಾರಿಯಾಗಿಸುವಲ್ಲಿ ಪ್ರಮುಖ ಸಾಧನವಾಗಲಿದೆ. ಅದೇ ವೇಳೆ ಸರ್ಕಾರದ ಪ್ರಗತಿಯ ಬಗ್ಗೆ ನಿಗಾ ಇರಿಸಲು ಜನತೆಗೆ ಅವಕಾಶ ಒದಗಿಸಲಿದೆ. ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷಾ ಆವೃತ್ತಿಯಲ್ಲಿ ಈ ಮಾಹಿತಿ ತಾಣವು ಲಭ್ಯವಿರಲಿದೆ.
2ಸಾಧನೆ,ಅನುಷ್ಠಾನಗಳ ವರದಿ:
ಕರ್ನಾಟಕದ ಪ್ರಗತಿಪಥದ ಮೈಲುಗಲ್ಲುಗಳನ್ನು ಬಿಂಬಿಸುವ ಹಾಗೂ ಅಭಿವೃದ್ದಿಯ ಚಿತ್ರಣವನ್ನು ನೀಡುವ ಸಲುವಾಗಿ ರಾಜ್ಯ ಸರ್ಕಾರವು ಪ್ರತಿಬಿಂಬ ತಾಣವನ್ನು ಲೋಕಾರ್ಪಣೆ ಮಾಡುತ್ತಿದೆ. ಈ ಮಾಹಿತಿ ತಾಣವು ಎಲ್ಲಾ ಇಲಾಖೆಗಳ ಕಾರ್ಯ ಚಟುವಟಿಕೆಗಳನ್ನು, ಪ್ರಮುಖ ಯೋಜನೆಗಳ ಹಾಗೂ ಮಹತ್ವದ ಕಾರ್ಯಕ್ರಮಗಳ ಕಾರ್ಯಾನುಷ್ಠಾನವನ್ನು ಜನರ ಮುಂದೆ ಸಾದರಪಡಿಸಲಿದೆ. ಸರ್ಕಾರದ ವಿವಿಧ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಭರವಸೆಗಳ ಈಡೇರಿಕೆಯಲ್ಲಿ ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿಯ ಮಾಪನ ಮಾಡಲು ಮಾಹಿತಿ ಕೋಶದಲ್ಲಿ ಇರುವ ಸಾಧನಗಳು ನೆರವಾಗುತ್ತವೆ. ಇದು ಸರ್ಕಾರದ ಇಲಾಖೆಗಳು ಹೆಚ್ಚು ಪಾರದರ್ಶಕ, ಉತ್ತರದಾಯಿತ್ವ ಹಾಗೂ ಪರಿಣಾಮಕಾರಿಯಾಗಲು ಸಹಕಾರಿಯಾಗಲಿದೆ.

ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸಂಪುಟದ ಸದಸ್ಯರುಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಸುಭಾಷ್ ಚಂದ್ರ ಕುಂಟಿಯಾ ಮತ್ತು ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s