ರಾಜ್ಯಕ್ಕೆ “ಮೋಸ್ಟ್ ಸಪೋರ್ಟೀವ್ ಸ್ಟೇಟ್ ಗೌರ್ನಮೆಂಟ್” ಪುರಸ್ಕಾರದ ಗರಿ

5ಮಹಿಳಾ ಅರ್ಥಿಕ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ “Most supportive State Government ” ಪ್ರಶಸ್ತಿ ಲಭಿಸಿದೆ.
ಮಹಿಳಾ ಅರ್ಥಿಕ ಅಭಿವೃದ್ಧಿಯಲ್ಲಿ ಆಗಿರುವ ಸಾಧನೆಯನ್ನು ಗುರುತಿಸಿ ವಿ ಕನೆಕ್ಟ್ ಸಂಸ್ಥೆ “Most Supportive State Government Award-2017″ಪ್ರಶಸ್ತಿಯನ್ನು ಘೋಷಿಸಿದೆ.
ಪ್ರಶಸ್ತಿ ಪ್ರಧಾನ ಸಮಾರಂಭ ಮಾರ್ಚ್ 30ರಂದು ವಾಷಿಂಗ್‍ಟನ್ ಡಿಸಿಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿಗಳ ಪರವಾಗಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ವಿಶ್ವದಲ್ಲಿಯೇ ಮೊದಲು:
ಈ ಪ್ರಶಸ್ತಿಯು ವಿಶ್ವದಲ್ಲಿಯೇ ಮೊದಲ ಬಾರಿಗೆ ಒಂದು ಸರ್ಕಾರಕ್ಕೆ ನೀಡಲಾಗುತ್ತಿದೆ. ಈ ಪ್ರಶಸ್ತಿಯು ಅನನ್ಯ ಮತ್ತು ವಿಶೇಷವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರಕ್ಕೆ ಮಾನ್ಯತೆ ತಂದಿದೆ. ಈ ಪ್ರಶಸ್ತಿ ಮಹಿಳಾ ಆರ್ಥಿಕ ಸಬಲೀಕರಣ ಮತ್ತು ಮಹಿಳಾ ಉದ್ಯಮ ಕ್ಷೇತ್ರವನ್ನು ಬಲಿಷ್ಟಗೊಳಿಸಲು ಸರ್ಕಾರಕ್ಕೆ ಸಹಕಾರಿಯಾಗುತ್ತದೆ.
ಕರ್ನಾಟಕ ರಾಜ್ಯವು ಹೂಡಿಕೆದಾರರಿಗೆ ಭಾರತದಲ್ಲಿಯೇ ಮೊದಲನೇ ಸ್ಥಾನದಲ್ಲಿದ್ದು, ವಾಣಿಜ್ಯ ಅವಕಾಶಗಳನ್ನು ನೀಡುವಲ್ಲಿ ಉದ್ಯಮಾವಕಾಶಗಳನ್ನು ನೀಡುವಲ್ಲಿ ಇತರೆ ರಾಜ್ಯಗಳಿಗಿಂತ ಮುಂಚೂಣಿಯಲ್ಲಿರಲು ಕರ್ನಾಟಕ ರಾಜ್ಯವು ಮೊದಲನೇ ಸ್ಥಾನದಲ್ಲಿ ನಿಲ್ಲಲು ಈ ಪ್ರಶಸ್ತಿಯು ಸಹಕಾರಿಯಾಗುತ್ತದೆ.
ವಿ ಕನೆಕ್ಟ್ ಇಂಟರ್ ನ್ಯಾಷನಲ್ ಸಂಸ್ಥೆಯು ಸಂಯುಕ್ತ ಸಂಸ್ಥಾನದ ಹೊರಗಿರುವ ಮಹಿಳಾ ವಾಣಿಜ್ಯ ಉದ್ಯಮಿಗಳ ಸಂಸ್ಥೆಗಳನ್ನು ಗುರುತಿಸಿ ಶಿಕ್ಷಣ ಮತ್ತು ನೊಂದಣಿಯೊಂದಿಗೆ ಬಹುರಾಷ್ಟ್ರೀಯ ವಾಣಿಜ್ಯ ಕಾರ್ಪೋರೇಟ್ ಖರೀದಿದಾರರನ್ನು ಸಂಪರ್ಕಿಸುವ ಕಾರ್ಯ ಮಾಡುತ್ತಿರುವ ವಿಶ್ವದ ಅತಿ ದೊಡ್ಡ ಸಂಸ್ಥೆಯಾಗಿದೆ.
ಇದು ಫಾರ್ಚ್ಯೂನ್-500 ವಾಣಿಜ್ಯ ಮುನ್ನೆಡೆಸುವ ಸಂಸ್ಥೆಯಾಗಿದ್ದು ವಾಷಿಂಗ್‍ಟನ್ ಡಿಸಿಯಲ್ಲಿ ಕಾರ್ಯಸ್ಥಾನ ಹೊಂದಿದ್ದು ಮಹಿಳಾ ವ್ಯಾಪಾರಕ್ಕೆ ಫಾರ್ಚ್ಯೂನ್-500 ಸಂಸ್ಥೆಗಳೊಂದಿಗೆ ವ್ಯವಹಾರ ಸಂಬಂಧ ಕೂಡಿಸುತ್ತದೆ. ಈ ಸಂಸ್ಥೆಯು ಸರಬರಾಜು ಸರಣಿಯಲ್ಲಿದ್ದು ಮಹಿಳೆಯರನ್ನು ವಿವಿಧ ಸರಬರಾಜು ಸರಣಿಗಳೊಂದಿಗೆ ಸೇರಿಸುವ ಕಾರ್ಯನಿರ್ವಹಿಸುತ್ತದೆ.

ಕರ್ನಾಟಕ ಸರ್ಕಾರವು ಮಹಿಳಾ ಉದ್ಯಮವನ್ನು ಇತರೆ ಉದ್ಯಮಗಳೊಂದಿಗೆ ಸಮನಾಗಿ ಅಭಿವೃದ್ಧಿ ಹೊಂದಲು ಹೆಚ್ಚಿನ ಮಹತ್ವವನ್ನು ನೀಡಿರುವ ಬಗ್ಗೆ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರ ಪಾತ್ರ ಅತಿ ಪ್ರಾಮುಖ್ಯವಾಗಿದೆಯೆಂದು ವಿ ಕನೆಕ್ಟ್ ಇಂಟರ್ ನ್ಯಾಷನಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಹ ಸಂಸ್ಥಾಪಕರಾದ ಮಿಸಸ್. ಎಲಿಜಬೆತ್ ಎ. ವಾಜ್‍ಕ್ವಿಸ್ ತಿಳಿಸಿರುತ್ತಾರೆ.

ಅಂತಾರಾಷ್ಟ್ರೀಯ ಸಮುದಾಯವು ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ ಹಲವಾರು ಪ್ರಮುಖ ಅಧ್ಯಯನಗಳನ್ನು ಕೈಗೊಂಡಿದ್ದು ಈ ಕಾರ್ಯವು ಅವಿಚ್ಛಿನ್ನವಾಗಿ ನಡೆಯುತ್ತಿದೆ. ಕರ್ನಾಟಕ ಸರ್ಕಾರವು ಕಳೆದ ಹಲವಾರು ವರ್ಷಗಳಿಂದ ಮಹಿಳಾ ಅಭಿವೃದ್ಧಿಗಾಗಿ ಪೂರಕವಾದ ಕೆಲಸವನ್ನು ತಾವು ಮತ್ತು ತಮ್ಮ ತಂಡವು ಅದ್ಭುತವಾಗಿ ನಿರ್ವಹಿಸಿರುವುದನ್ನು ವಿ ಕನೆಕ್ಟ್ ಇಂಟರ್ ನ್ಯಾಷನಲ್ ಸಂಸ್ಥೆಯು ಗುರುತಿಸಿದೆ.

ಕರ್ನಾಟಕ ಸರ್ಕಾರವು ಹೊಸ ಕೈಗಾರಿಕಾ ನೀತಿ 2014-19ನ್ನು 2014ರ ಆಕ್ಟೋಬರ್, 14ರಂದು ಅನಾವರಣಗೊಳಿದಾಗ ಮಹಿಳಾ ಉದ್ಯಮಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಮೊದಲ ಬಾರಿಗೆ ನೀಡಲಾಯಿತು. ಮಹಿಳಾ ಉದ್ದಿಮೆದಾರರಿಗೆ ತಮ್ಮ ಉದ್ದಿಮೆಗಳನ್ನು ಪ್ರಾರಂಭಿಸಲು ವಿಶೇಷ ಗಮನ ಹರಿಸಲಾಯಿತು. ಮಹಿಳಾ ಉದ್ಯಮಿಗಳ ಸುಸ್ಥಿರ ಅಭಿವೃದ್ಧಿಗಾಗಿ ಕೈಗಾರಿಕಾ ಸಾಮರ್ಥ್ಯ ಮತ್ತು ಸಬಲೀಕರಣ ಕ್ರಮಗಳನ್ನು ಕೈಗೊಳ್ಳಲಾಯಿತು. ಈ ಕೆಳಕಂಡ ಪ್ರೋತ್ಸಾಹ ಮತ್ತು ವಿನಾಯ್ತಿಗಳನ್ನು ಮಹಿಳಾ ಉದ್ದಿಮೆದಾರರಿಗೆ ನೀಡಲಾಯಿತು.
• ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ/ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಯಮಿತ ಇವರು ಅಭಿವೃದ್ಧಿಪಡಿಸಿರುವ ಕೈಗಾರಿಕಾ ನಿವೇಶನ/ಷಡ್‍ಗಳ ಹಂಚಿಕೆಯಲ್ಲಿ ಮಹಿಳಾ ಉದ್ಯಮಿಗಳಿಗೆ ಶೇ.5% ಮೀಸಲಾತಿ
• ಮಹಿಳಾ ಉದ್ಯಮಿಗಳಿಗೆ ವಿಶೇಷ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳು
• ಮಹಿಳಾ ಉದ್ಯಮಿಗಳು ಅಭಿವೃದ್ಧಿಪಡಿಸುವ ಎಂಎಸ್‍ಎಂಇ ಶೇ.75% ಸ್ಟಾಂಪ್ ಡ್ಯೂಟಿಯಲ್ಲಿ ವಿನಾಯ್ತಿ ಮತ್ತು ಶೇ.75% ಭೂ-ಪರಿವರ್ತನಾ ವೆಚ್ಚ ಮರುಪಾವತಿ ಮತ್ತು ಇಟಿಪಿ ಸ್ಥಾಪನೆಗೆ ಒಂದು ಬಾರಿ ಶೇ.75% ಬಂಡವಾಳ ರಿಯಾರ್ತಿ (ಬೆಂಗಳೂರಿಗೆ 50 ಲಕ್ಷ ಗರಿಷ್ಠ ಮಿತಿ)
• ಮಹಿಳಾ ಮಾಲೀಕತ್ವದ ಉದ್ಯಮಿಗಳಿಗೆ ವಿ ಕನೆಕ್ಟ್ ಪ್ರಮಾಣೀಕರಣದ ವೆಚ್ಚದ ಮರುಪಾವತಿ 3 ವರ್ಷಗಳವರೆಗೆ ಗರಿಷ್ಠ ಮಿತಿ ರೂ.75,000/-
• ಮೊದಲನೆಯ ಮಹಿಳಾ ಪಾರ್ಕ್ ಅನ್ನು ಬೆಂಗಳೂರಿನ ಸಮೀಪ ಹಾರೊಹಳ್ಳಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ರಾಜ್ಯದೆಲ್ಲಡೆಯಿಂದ ಬಂದ ಉತ್ತಮ ಪ್ರತಿಕ್ರಿಯೆಯಿಂದ ಮೈಸೂರು, ಧಾರವಾಡ, ಬೆಳಗಾಂ, ಬಳ್ಳಾರಿ, ಮತ್ತು ಗುಲ್ಬರ್ಗಾಗಳಲ್ಲಿ ಮಹಿಳೆಯರ ಪಾರ್ಕ್ ಅನ್ನು ಸ್ಥಾಪಿಸಲು ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ಮಹಿಳಾ ಉದ್ದಿಮೆದಾರರಿಗೆ ವಿಶೇಷವಾದ ಸೌಕರ್ಯಗಳನ್ನು ಕಲ್ಪಿಸುವ ದೃಷ್ಠಿಯಿಂದ ಸನ್ಮಾನ್ಯ ಮುಖ್ಯ ಮಂತ್ರಿಯವರು ಹಾಗೂ ಸನ್ಮಾನ್ಯ ಬೃಹತ್ ಕೈಗಾರಿಕಾ ಸಚಿವರಾದ ಆರ್. ವಿ. ದೇಶಪಾಂಡೆ ರವರ ಅಧ್ಯಕ್ಷತೆಯಲ್ಲಿ ಇನ್ವೆಸ್ಟ್ ಕರ್ನಾಟಕ, ಥಿಂಕ್‍ಬಿಗ್, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಅಂತಾರಾಷ್ಟ್ರೀಯ ಉದ್ಯಮಿಗಳ ದಿನಾಚರಣೆ, ಕಾರ್ಯಕ್ರಮಗಳನ್ನು ವರ್ಷವಿಡಿ ಆಯೋಜಿಸಲಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s