ಕರ್ನಾಟಕ ಚಲನಚಿತ್ರ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ

ಕನ್ನಡ ಚಿತ್ರರಂಗದಲ್ಲಿ ಅಮೋಘ ಸೇವೆ ಸಲ್ಲಿಸಿ ವಿವಿಧ ವಿಭಾಗಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಎಲೆಮರೆ ಕಾಯಿಯಾಗಿರುವ 15 ದಿಗ್ಗಜರನ್ನು ಗುರುತಿಸಿ ಕರ್ನಾಟಕ ಚಲನಚಿತ್ರ ಅಕಾಡೆಮಿ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಕನ್ನಡ ಮೊದಲ ವಾಕ್ಚಿತ್ರ ಸತಿ ಸುಲೋಚನ 1934 ಮಾರ್ಚ್ 3ರಂದು ಬಿಡುಗಡೆಯಾಗಿತ್ತು. ಅದರ ಸವಿನೆನಪಿಗಾಗಿ ಅಕಾಡೆಮಿಯು ಕನ್ನಡ ಚಲನಚಿತ್ರಕ್ಕಾಗಿ ದುಡಿದ ಹಿರಿಯ ಜೀವಗಳನ್ನು ಗುರುತಿಸಿ ಪ್ರತಿ ವರ್ಷ ಮಾರ್ಚ 3 ರಂದು ಪ್ರಶಸ್ತಿ ನೀಡಿ ಗೌರವಿಸುತ್ತದೆ.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಸತಿ ಸಚಿವ ಎಂ. ಕೃಷ್ಣಪ್ಪ ಇಂದಿನ ಜನಾಂಗಕ್ಕೆ ಕುತೂಹಲವೆನ್ನುವುದು ಇಲ್ಲ, ಪ್ರಪಂಚವನ್ನು ಅಂಗೈನಲ್ಲಿ ನೋಡುವ ಜನರೇಷನ್ ಇದು. ತಮ್ಮ ಯೌವ್ವನದಲ್ಲಿ ಯಾವ ಯಾವ ಕಾರಣಗಳಿಗೆ ಯಾರ್ಯಾರ ಸಿನಿಮಾ ನೋಡುತ್ತಿದ್ದರು ಎಂದು ಮೆಲುಕು ಹಾಕಿ ಹಾಸ್ಯಮಿಶ್ರಿತ ಘಟನೆಗಳನ್ನು ವಿವರಿಸಿದರು.

ಕಲಾವಿದರ ಬಣ್ಣದ ಬದುಕಿನ ನಂತರದ ದಿನಗಳ ಜೀವನವನ್ನು ನಾನು ಬಲ್ಲೆ, ಅವರ ಬೇಡಿಕೆಗಳ ಬಗ್ಗೆ ಮಾತಾನಾಡದೆ ಮಾಡಿ ತೋರಿಸುತ್ತೇನೆ ಎಂದ ಅವರು ಚಿತ್ರರಂಗಕ್ಕೆ ಸರಕಾರದ ಪ್ರೋತ್ಸಾಹ ಇದೆ ಎಂದು ಹೇಳಿದರು.

ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರು ಪ್ರಾಸ್ತಾವಿಕ ಮಾತನಾಡಿ ಕನ್ನಡ ಚಿತ್ರರಂಗದ ಉತ್ಸಾಹಕ್ಕೆ ಪ್ರೋತ್ಸಾಹ ನೀಡಲು ಸರಕಾರ ಸದಾ ಸಿದ್ಧ, ಚಲನಚಿತ್ರ ರಂಗದ ಕಲ್ಯಾಣಕ್ಕಾಗಿ ಹಲವು ಕೊಡುಗೆಗಳನ್ನು ನೀಡಿರುವ ಸರಕಾರ ಕಳೆದ ವರ್ಷ ಅಕಾಡೆಮಿಯಿಂದ 10 ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು ಪ್ರಸ್ತುತ 15 ಸಾಧಕರಿಗೆ ಏರಿಸಲಾಗಿದೆ.

ಕನ್ನಡ ಚಲನಚಿತ್ರ ಮಂಡಳಿ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಜಂಟಿಯಾಗಿ ಭವಿಷ್ಯದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಶಯ ವ್ಯಕ್ತಪಡಿಸಿದ ಅವರು ಮುಂದಿನ ವರ್ಷದಿಂದ ಮತ್ತಷ್ಟು ವಿಭಾಗಗಳ ಪ್ರಶಸ್ತಿಗಳನ್ನು ಸೇರಿಸಲಾಗುವುದು ಹಾಗೂ ದೇಶದಲ್ಲಿ ಮೊದಲ ಬಾರಿ ಪ್ರೋಡಕ್ಷನ್ ಮ್ಯಾನೇಜರ್ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್. ಆರ್. ವಿಶುಕುಮಾರ ಮಾತನಾಡಿ ಕನ್ನಡ ಚಿತ್ರರಂಗಕ್ಕೆ ಸರಕಾರದ ಕೊಡುಗೆ ಅಪಾರ, ಅಕಾಡೆಮಿ ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಿ ಸಂಭ್ರಮ ಪಡಬೇಕು, ಮುಂದಿನ ವರ್ಷದಿಂದ ಇದೊಂದು ಅದ್ಧೂರಿ ಕಾರ್ಯಕ್ರಮವಾಗಲಿ ಎಂದು ಪ್ರಶಸ್ತಿ ವಿಜೇತರಿಗೆ ಶುಭ ಕೋರಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ. ರಾ. ಗೋವಿಂದು ಮಾತನಾಡಿ ಚಲನಚಿತ್ರ ರಂಗಕ್ಕೆ ದುಡಿದ ಹಿರಿಯ ಸಾಧಕರನ್ನು ಸನ್ಮಾನಿಸುವ ಸೌಭಾಗ್ಯ ತಮಗೆ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಇಂದಿನ ತಲೆಮಾರಿನ ಬೆಳೆದ ಕಲಾವಿದರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತಾನಾಡಿದ ಹಿರಿಯ ನಟಿ ಮತ್ತು ವಿಧಾನಪರಿಷತ್ ಸದಸ್ಯೆ ಜಯಮಾಲ ಅವರು ಇಂದಿನ ತಲೆಮಾರಿನ ಕನ್ನಡ ಚಿತ್ರರಂಗದ ಸಾಧನೆಗಳ ಯುವಕರಿಗೆ ಮೆಚ್ಚುಗೆ ವ್ಯಕ್ತಪಡಿಸುವುದು ಹಿರಿಯರಾದ ತಮ್ಮ ಕರ್ತವ್ಯ, 83 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 4000ಕ್ಕಿಂತ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಹೆಚ್. ಬಿ. ದಿನೇಶ್ ಸ್ವಾಗತಿಸಿದರು, ಅಪರ್ಣ ನಿರೂಪಿಸಿದರು. ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನಾ ಶ್ರೀಮತಿ ಅರ್ಚನ ಉಡುಪ ಹಾಗೂ ತಂಡದವರು ನಡೆಸಿಕೊಟ್ಟ ಕನ್ನಡ ಚಲನಚಿತ್ರ ರಂಗದ ಮೈಲಿಗಲ್ಲುಗಳ ಸ್ಮೃತಿ ಗೀತಗಾಯನ ಹಾಗೂ ಹೊರಾಂಗಣದಲ್ಲಿ ಪ್ರಶಸ್ತಿ ವಿಜೇತರ ಛಾಯಚಿತ್ರ ಪ್ರದರ್ಶನ ಪ್ರೇಕ್ಷಕರ ಕಣ್ಮನ ಸೆಳೆಯಿತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s