ರಾಜ್ಯ ಸರ್ಕಾರದ ಸಾಧನೆ ಸಾರುವ ಕ್ಷೇತ್ರ ಪ್ರಚಾರ ವಾಹನಕ್ಕೆ ಚಾಲನೆ

78ಕಳೆದ ನಾಲ್ಕು ವಷ೯ಗಳಲ್ಲಿ ಜಾರಿಗೊಂಡಿರುವ ರಾಜ್ಯ ಸರಕಾರದ ಹಲವಾರು ಪ್ರಮುಖ ಜನಹಿತ ಯೋಜನೆಗಳ ಸಾಧನೆ ಕುರಿತು ಜನತೆಗೆ ಮಾಹಿತಿ ಹಾಗೂ ಜಾಗೃತಿಯ 20 ದಿನಗಳ ಪ್ರಗತಿ ವಾಹಿನಿ, ವಾರ್ತಾ ಜಾಗೃತಿಯ ವಿಶೇಷ ಕ್ಷೇತ್ರ ಪ್ರಚಾರ ವಾಹನಕ್ಕೆ ಗದಗ ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ ಅವರು ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
9ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶ ಒದಗಿಸುವ ನಿಟ್ಟಿನಲ್ಲಿ ಪ್ರತಿ ವರ್ಗದ ಜನರಿಗೆ ಒಂದಿಲ್ಲೊಂದು ಸೌಲಭ್ಯ ಒದಗಿಸುವ ಹತ್ತು ಹಲವಾರು ಅಭಿವೃದ್ದಿಪರ ಯೋಜನೆಗಳನ್ನು ಜಾರಿಗೊಳಿಸಿದೆ. ಅರ್ಹ ಫಲಾನುಭವಿಗಳಿಗೆ ಇವುಗಳು ತಲುಪಲು ಇಂತಹ ವಿಶೇಷ ಕಾರ್ಯಕ್ರಮಗಳು ಸಹಾಯಕಾರಿಯಾಗಬೇಕು ಎಂದು ಕುರಡಗಿ ನುಡಿದರು.

56
ಗದಗ ಜಿಲ್ಲಾಡಳಿತ ಮತ್ತು ಜಿ.ಪಂ.ಸಹಕಾರದಲ್ಲಿ ಆಯೋಜಿಸಿರುವ 20 ದಿನಗಳ ಈ ವಿಶೇಷ ಕ್ಷೇತ್ರ ಪ್ರಚಾರ ಕಾರ್ಯಕ್ರಮ ಜಿಲ್ಲೆಯ 5 ತಾಲೂಕುಗಳ ಆಯ್ದ 40 ಗ್ರಾಮಗಳಲ್ಲಿ ಮೊದಲ ಹತ್ತು ದಿನಗಳ ಕಾಲ ಚಿತ್ರ ಮತ್ತು ವಸ್ತು ಪ್ರದರ್ಶನ ಹಾಗೂ ನಂತರ ಹತ್ತು ದಿನಗಳ ಕಾಲ 20 ಗ್ರಾಮಗಳಲ್ಲಿ ಕೊತಬಾಳದ ಅರುಣೋದಯ ಕಲಾ ತಂಡದಿಂದ ವಿವಿಧ ಯೋಜನೆಗಳ ಮಾಹಿತಿ ನೀಡುವ ಬೀದಿನಾಟಕ ಪ್ರದರ್ಶನ ಮೂಲಕ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಕುರಿತು ಮಾಹಿತಿ ನೀಡುವ ಪ್ರಯತ್ನ ಇದಾಗಿದೆ. ಗದಗ ಜಿ.ಪಂ. ಉಪಾಧ್ಯಕ್ಷರಾದ ಶ್ರೀಮತಿ ರೂಪಾ ಅಂಗಡಿ, ಮುಖ್ಯ ಕಾಯ೯ನಿವ೯ಹಣಾಧಿಕಾರಿ ಮಂಜುನಾಥ ಚವ್ಹಾಣ, ಗದಗ ತಾ.ಪಂ. ಅಧ್ಯಕ್ಷ ರವಿ ಮನೋಹರ ಇನಾಮತಿ, ಉಪಾಧ್ಯಕ್ಷ ಎ.ಆರ್.ನದಾಫ, ಕಾಯ೯ನಿವಾ೯ಹಕ ಅಧಿಕಾರಿ ಡಾ. ಜಿನಗಾ, ವಾತಾ೯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s