ಸರ್ವಜ್ಞರ ವಚನ ವರ್ತಮಾನಕ್ಕೂ ಅನ್ವಯವಾಗುತ್ತದೆ:ಸಚಿವೆ ಉಮಾಶ್ರೀ

umashreeಸಮಾಜದ ಅಸಮಾನತೆ ವಿರುದ್ಧ ತಮ್ಮ ನೇರ ಮತ್ತು ನಿಷ್ಠುರ ವಚನಗಳ ಮೂಲಕ ಹೋರಾಡಿದ ಮಹನೀಯರಲ್ಲಿ ಸರ್ವಜ್ಞರು ಅಗ್ರ ಗಣ್ಯರು ಎಂದು ಕನ್ನಡ ಸಂಸ್ಕತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಅವರು ಹೇಳಿದರು.

ಕನ್ನಡ ಭವನದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ ಆಯೋಜಿಸಿದ್ದ ಸರ್ವಜ್ಞ ಜಯಂತಿಯನ್ನು ಸರ್ವಜ್ಞರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವ ಮೂಲಕ ಜಯಂತೋತ್ಸವವನ್ನು ಸಚಿವೆ ಉಮಾಶ್ರಿ ಅವರು ಉದ್ಘಾಟಿಸಿದರು. ಮನುಷ್ಯನನ್ನು ಮನುಷ್ಯನಂತೆ ಕಾಣಬೇಕು, ಎಲ್ಲರಿಗೂ ಸಮಬಾಳು ಸಮಪಾಲು ಎಂದು ಹೇಳುವ ಮೂಲಕ ಸಮಾಜದಲ್ಲಿದ್ದ ಅಸಮಾನತೆ ವ್ಯವಸ್ಥೆಯನ್ನು ಸರ್ವಜ್ಞರು ತಮ್ಮ ವಚನಗಳ ಮೂಲಕ ಕಟುವಾಗಿ ಟೀಕಿಸುತ್ತಿದ್ದರು. ಅವರ ವಚನಗಳು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೂ ಅನ್ವಯವಾಗುತ್ತಿರುವುದು ನೋಡಿದರೆ ಶತಮಾನಗಳೇ ಕಳೆದುಹೋಗಿದ್ದರೂ ನಾವು ಇನ್ನೂ ಬದಲಾಗಿಲ್ಲವೆಂದರು ಸಚಿವರು ನುಡಿದರು.

ಶತಮಾನಗಳ ಹಿಂದೆ ಸರ್ವಾಧಿಕಾರಿಗಳ ಹಿಡಿತದಲ್ಲಿದ್ದ ಸಮಾಜದ ವ್ಯವಸ್ಥೆ ವಿರುದ್ಧ ತಮ್ಮ ವಚನಗಳ ಮೂಲಕ ಅವರು ಹೋರಾಡಿದರು. ಆದರೆ ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ರಕ್ಷಣೆ, ಆಹಾರ, ವಾಕ್ ಸ್ವಾತಂತ್ರ್ಯಗಳಂತಹ ಅನೇಕ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳಿದ್ದರೂ ಕೂಡ ಇಂದಿಗೂ ಅಸಮಾನತೆ ಮತ್ತು ಜಾತೀಯತೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದು ಸಚಿವರು ವಿಷಾದ ವ್ಯಕ್ತಪಡಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s