ಕರ್ನಾಟಕ ವಾರ್ತೆ

Department of Information and Public Relations

ಭಾರತ ಭಾಗ್ಯವಿಧಾತ:ಅಂಬೇಡ್ಕರ್ ಜೀವನದ ಯಶೋಗಾಥೆ ಅನಾವರಣ

ಪ್ರೇಕ್ಷಕರ  ಎದೆಯಲ್ಲಿ ಜಾಗೃತಿಯ ಕಿಚ್ಚು ಹಚ್ಚಿದ ‘ಭಾರತ ಭಾಗ್ಯ ವಿಧಾತ’

e56f93f5-620c-4fda-839c-2195c086993b

ಭಾರತ ಭಾಗ್ಯವಿಧಾತ- ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮಡಿಗೊಳಿಸಿದ ಮಹಾಚೇತನದ ಜೀವನ ಚರಿತೆ… ಇದು!
ನೊಂದವರ ನೋವಿಗೆ ದನಿಯಾಗಿ ನಿಂತ ಧೀಮಂತ ನಾಯಕನ ಆತ್ಮಕತೆ. ತನ್ನ ಪ್ರತಿಭೆ, ಪರಿಶ್ರಮಗಳಿಂದ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ, ಪುರಸ್ಕಾರ ಗಳಿಸಿದ ಆರ್ಥಿಕ ತಜ್ಞನ ಯಶೋಗಾಥೆ. ಸಂವಿಧಾನ ಶಿಲ್ಪಿ ಎನಿಸಿಕೊಂಡ ಮಹಾ ಮಾನವತಾವಾದಿಯ ಜೀವಗಾಥೆಯನ್ನು ಕಲಾವಿದರು ಅನಾವರಣಗೊಳಿಸಿದಾಗ ನೆರೆದ ಜನರಿಗೆ ರೋಮಾಂಚನ.

belgavi-bbv3

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಭಾರತ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್‍ ಅವರ 125ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರ ಜೀವನಸಾಧನೆಗಳನ್ನು ಬಿಂಬಿಸುವ ಭಾರತ ಭಾಗ್ಯವಿಧಾತ ಧ್ವನಿ-ಬೆಳಕು ದೃಶ್ಯವೈಭವಗಳ ವಿನೂತನ ರೂಪಕವು ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ ಗುರುವಾರ(ಫೆ.16) ವರ್ಣರಂಜಿತವಾಗಿ ನಡೆಯಿತು.
ಯಾರು ಭಾರತ ಭಾಗ್ಯವಿಧಾತ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಇದಕ್ಕೆ ಉತ್ತರ ಕೊಡುತ್ತ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಜೀವನದ ವಿವಿಧ ಮಜಲುಗಳನ್ನು ಹಾಗೂ ಸಾಧನೆಯನ್ನು ಕಂಸಾಳೆ ಕಲಾವಿದರು ಪರಿಚಯಿಸುತ್ತಾ ಸಾಗುತ್ತಾರೆ.

belgavi-bbv18
ಕಾರ್ಮಿಕರ ಕಾನೂನು ರೂಪಿಸಿದಾತ.. ಕುಡಿಯುವ ನೀರಿನ ಹಕ್ಕು ಕೊಡಿಸಿದವ… ಪ್ರತಿ ಹೆಣ್ಣಿಗೂ ಗೌರವದ ಬದುಕು ಕಲ್ಪಿಸಿಕೊಟ್ಟವ ಭಾರತ ಭಾಗ್ಯವಿಧಾತ. ಆತನೇ ಡಾ.ಅಂಬೇಡ್ಕರ್ ಎಂಬುದನ್ನು ದೃಶ್ಯ-ವೈಭವ ಮತ್ತು ಧ್ವನಿ-ಬೆಳಕಿನ ಮೂಲಕ ಜನಮನದಲ್ಲಿ ಅಚ್ಚೊತ್ತಿದರು.
ಅಂಬೇಡ್ಕರ್ ಅವರು ಬಾಲಕನಾಗಿದ್ದಾಗ ಶಾಲೆಯಲ್ಲಿ ಓರಗೆಯವರಿಂದ ಅನುಭವಿಸಿದ ಅವಮಾನ, ಜಾತಿ ಕಾರಣಕ್ಕೆ ಗಾಡಿಯಿಂದ ಕೆಳಕ್ಕೆ ದಬ್ಬಿಸಿಕೊಂಡ ಘಟನೆಯನ್ನು ಕಲಾವಿದರು ವೇದಿಕೆಯಲ್ಲಿ ಪ್ರದರ್ಶಿಸಿದಾಗ ಪ್ರೇಕ್ಷಕರ ಮನಕಲಕಿತು.
ಶಾಹು ಮಹಾರಾಜರ ಸಹಾಯದಿಂದ ವಿದೇಶದಲ್ಲಿ ಓದುವ ಡಾ.ಅಂಬೇಡ್ಕರ್ ಅವರು, ಬಾಡಿಗೆ ಮನೆಯನ್ನು ಪಡೆಯಲು ಪಟ್ಟ ಪಾಡು; ಕುಡಿಯುವ ನೀರಿಗಾಗಿ ನಡೆಸಿದ ಹೋರಾಟ; ಅವಮಾನದ ಬದುಕಿನ ನಡುವೆಯೂ ಅಪಾರ ಪಾಂಡಿತ್ಯ ಗಳಿಸಿ ಸಂವಿಧಾನ ರಚಿಸುವುದು ಸೇರಿದಂತೆ ಬದುಕಿನ ವಿವಿಧ ಘಟ್ಟಗಳಲ್ಲಿ ಅನುಭವಿಸಿದ ಕಹಿ ಗಳಿಗೆಯನ್ನು ಕಲಾವಿದರು ಮನೋಜ್ಞವಾಗಿ ಅನಾವರಣಗೊಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್.ಆರ್.ವಿಶುಕುಮಾರ್ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಭಾರತ ಭಾಗ್ಯವಿಧಾತ ಧ್ವನಿಬೆಳಕು ರೂಪಕವು ಜನರ ಮೆಚ್ಚುಗೆಗೆ ಪಾತ್ರವಾಯಿತು.

e1904929-3f62-4de7-ade4-6961ecbf5fed
ಬಿ.ಎಂ.ಗಿರಿರಾಜ್ ಅವರ ನಿರ್ದೇಶನದಲ್ಲಿ ರೂಪುಗೊಂಡಿರುವ ಈ ದೃಶ್ಯ ವೈಭವಗಳ ರೂಪಕದಲ್ಲಿ ಸುಮಾರು 80 ಕಲಾವಿದರು ಅದ್ಭುತ ಪ್ರದರ್ಶನ ನೀಡಿದರು. ಗೀತರಚನೆ ಡಾ.ಕೆ.ವೈ.ನಾರಾಯಣಸ್ವಾಮಿ ಹಾಗೂ ಬಿ.ಎಂ.ಗಿರಿರಾಜ್, ಸಂಗೀತ ಪೂರ್ಣಚಂದ್ರ ತೇಜಸ್ವಿ, ರಂಗವಿನ್ಯಾಸ ಶಶಿಧರ ಅಡಪ, ನೃತ್ಯ ಸಂಯೋಜನೆ ಪದ್ಮಿನಿ ಅಚ್ಚಿ, ಬೆಳಕು ನಂದಕಿಶೋರ್, ವಸ್ತ್ರಾಲಂಕಾರ ಪ್ರಮೋದ ಶಿಗ್ಗಾವ್, ಪ್ರಸಾಧನ ರಾಮಕೃಷ್ಣ ಬೆಳ್ತೂರು ಹಾಗೂ ಸಹ ನಿರ್ದೇಶನ ಎಂ.ಪಿ.ಎಂ.ವೀರೇಶ್ ಅವರದಾಗಿತ್ತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: