ಅಂಬೇಡ್ಕರ್ ನೆನಪಿನಲ್ಲಿ 125ನೂತನ ವಸತಿ ಶಾಲೆಗಳ ಸ್ಥಾಪನೆ:ಮುಖ್ಯಮಂತ್ರಿ ಸಿದ್ದರಾಮಯ್ಯ

ambedkarಪ್ರತಿ ಹೋಬಳಿಗಳಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದ್ದು, ಮುಂದಿನ ಪ್ರಸಕ್ತ ವರ್ಷದಲ್ಲಿ ಪ್ರಾರಂಭಿಸಲಾಗುವ 125 ವಸತಿ ಶಾಲೆಗಳಿಗೆ ಡಾ: ಬಾಬಾ ಸಾಹೇಬ್ ಅಂಬೇಡ್ಕರ್  ಅವರ ಹೆಸರನ್ನು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

 

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಭಾರತ ರತ್ನ ಬಾಬಾಸಾಹೇಬ್ ಡಾ: ಬಿ.ಆರ್. ಅಂಬೇಡ್ಕರ್ ಅವರ 125 ನೇ ವರ್ಷಾಚರಣೆಯ ಅಂತಾರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಡಾ: ಬಿ.ಆರ್. ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆಯಬೇಕಾದರೆ  ಎಲ್ಲರಿಗೂ ಶಿಕ್ಷಣ ಸಿಗುವುದು ಪ್ರಮುಖವಾಗುತ್ತದೆ.  ಆದ್ದರಿಂದ  ಮಕ್ಕಳು ಉತ್ತಮವಾಗಿ ಶಿಕ್ಷಣ ಪಡೆಯಲು ಅನುಕೂಲವಾಗುವಂಗತೆ ವಸತಿ ಸೌಲಭ್ಯ ನೀಡಲು ಉದ್ದೇಶಿಸಲಾಗಿದ್ದು,  ಪ್ರತಿ ಹೋಬಳಿಗಳಲ್ಲಿ ವಸತಿ ಶಾಲೆಯನ್ನು ತೆರೆಯಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು.

ಮೌಢ್ಯ ನಿಷೇಧ ಕಾಯ್ದೆ ಜಾರಿಗೆ:

125-ambedkarಶೇ. 66 ರಷ್ಟು  ಮಕ್ಕಳಿಗೆ ಸರ್ಕಾರದವತಿಯಿಂದ ಶಿಕ್ಷಣವನ್ನು ನೀಡಲಾಗುತ್ತಿದೆ.  ಆದರೆ ಶಿಕ್ಷಣದ ಜೊತೆಗೆ ಜ್ಞಾನವನ್ನು ನೀಡುವುದು ಮುಖ್ಯವಾಗಿದೆ. ಬಸವಣ್ಣ, ಕನಕದಾಸ, ಅಂಬೇಡ್ಕರ್ ಅವರಂತ ಮಹಾನ್ ವ್ಯಕ್ತಿಗಳ ಚಿಂತನೆ, ವಿಚಾರಧಾರೆಯನ್ನು ಯುವ ಸಮುದಾಯದವರಿಗೆ ತಿಳಿಸುವ ಮೂಲಕ ಅವರ ಜ್ಞಾನವನ್ನು ಹೆಚ್ಚಿಸಿ ಅವರು ಸರಿ ದಾರಿಗೆ ಹೋಗುವಂತೆ ನೋಡಿಕೊಳ್ಳಬೇಕಿದೆ. ಆದ್ದರಿಂದ ಸಾಮಾಜಿಕ ನ್ಯಾಯಕ್ಕೆ ಸಂಬಂಧಪಟ್ಟಂತಹ ಯಾವುದೇ ಕಾರ್ಯಕ್ರಮಗಳಿಗೆ ಅನುದಾನ ನೀಡಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಭರವಸೆ ನೀಡಿದ ಮುಖ್ಯಮಂತ್ರಿ ಅವರು ಮೌಡ್ಯ ನಿಷೇಧ ಕಾಯ್ದೆಯನ್ನು  ತಮ್ಮ ಸರ್ಕಾರದ ಅವಧಿಯಲ್ಲಿಯೇ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

 

 

ಉತ್ತಮ ಸಂವಿಧಾನವನ್ನು ರಚನೆ ಮಾಡಿದ್ದರೂ ಕೂಡ ಅಂಬೇಡ್ಕರ್  ಅವರಿಗೆ ಸಂಪೂರ್ಣ ಸಮಾಧಾನವಿರಲಿಲ್ಲ. ಸಂವಿಧಾನದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಹಕ್ಕುಗಳಾಗಿ ಮಾಡಬೇಕಿತ್ತು ಎಂದು ಅವರಿಗೆ ಅನಿಸಿತ್ತು. ಎಲ್ಲಿಯವರೆಗೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇರುವುದೋ ಅಲ್ಲಿಯವರೆಗೆ ಅವರ ಚಿಂತನೆ ಮತ್ತು ಬರಹಗಳು ಪ್ರಸ್ತುತವಾಗಿರುತ್ತವೆ ಎಂದರು.

 

125ನೇ ಜಯಂತೋತ್ಸವಕ್ಕೆ ಉನ್ನತ ಮಟ್ಟದ ಸಮಿತಿ:

ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಆಚರಿಸಬೇಕೆಂಬ ಉದ್ದೇಶದಿಂದ ನನ್ನ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿಯನ್ನು ರಚಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

 

ಜ್ಞಾನ ದರ್ಶನ ಸಂಚಾರ:

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ  ಸಚಿವ ಆಂಜನೇಯ ಅವರು ಮಾತನಾಡಿ ಅಂಬೇಡ್ಕರ್ ಅವರ 125ನೇ ವರ್ಷಾಚರಣೆಯನ್ನು ವಿಶಿಷ್ಟವಾಗಿ ಆಚರಿಸಬೇಕೆಂಬ ದೃಷ್ಟಿಯಿಂದ ಅಂಬೇಡ್ಕರ್ ಅವರ ಜ್ಞಾನ, ಚಿಂತನೆ ವಿಚಾರವನ್ನು ಆರು ತಿಂಗಳುಗಳ ಕಾಲ ಸುಮಾರು ಎರಡು ಲಕ್ಷ ಯುವ ಸಮುದಾಯಕ್ಕೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

 

 

ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಮುಖ್ಯಮಂತ್ರಿಯವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ಹಾಗೂ ಸ್ವಾತಂತ್ರ್ಯ ನೀಡುತ್ತಿದ್ದು, ದಲಿತರ ಪರವಾದ ಯಾವುದೇ ಪ್ರಸ್ತಾವನೆಗಳಿಗೆ ಅವರು ಕಣ್ಣುಮುಚ್ಚಿ ಸಹಿ ಮಾಡುತ್ತಾರೆಂದು ತಿಳಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಟ್ಟಿರುವ ಅನುದಾನ ಕೆಲವು ಸಂದರ್ಭಗಳಲ್ಲಿ ಖರ್ಚಾಗದೇ ಉಳಿದರೆ ಆ ಅನುದಾನವನ್ನು ಮುಂದಿನ ವರ್ಷದ ಅನುದಾನಕ್ಕೆ ಸೇರ್ಪಡೆಯಾಗುವಂತೆ ಹಾಗೂ ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ತಪ್ಪೆಸೆಗುವ ಅಧಿಕಾರಿ ಸಿಬ್ಬಂದಿಯವರಿಗೆ ಆರು ತಿಂಗಳ ಜೈಲು ಶಿಕ್ಷೆಗೆ ಗುರಿಪಡಿಸುವಂತಹ ಕಠಿಣ ಕಾಯ್ದೆಯನ್ನು ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದ ಕೀರ್ತಿ ನಮ್ಮ ಸರ್ಕಾರದ್ದಾಗಿದೆ ಎಂದರು.

 

 

ಅಂಬೇಡ್ಕರ್ ಅವರ ವಿಚಾರಧಾರೆ ಕುರಿತ ಪುಸ್ತಕ  ಬಿಡುಗಡೆಗೊಳಿಸಿ, ಅಂತಾರಾಷ್ಟ್ರೀಯ ಸಮ್ಮೇಳನಕ್ಕಾಗಿ ತಯಾರಿಸಿರುವ ವೆಬ್‍ಸೈಟ್‍ನ್ನು  ಮುಖ್ಯಮಂತ್ರಿವರು  ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.

 

 

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಡಾ: ಹೆಚ್.ಸಿ. ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಆರ್. ರೋಷನ್‍ಬೇಗ್, ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಡಾ: ಚಂದ್ರಶೇಖರ ಕಂಬಾರ, ನಿವೃತ್ತ ಐ.ಎ.ಎಸ್. ಅಧಿಕಾರಿ ರಾಜು, ಖ್ಯಾತ ಚಿಂತಕರಾದ ಡಾ: ಮರುಳಸಿದ್ದಪ್ಪ, ಖ್ಯಾತ ಕವಿ ಡಾ: ಸಿದ್ದಲಿಂಗಯ್ಯ, ಕವಿಯತ್ರಿ  ಡಾ: ಕೆ. ಷರೀಫಾ, ಹಂಪಿ ವಿಶ್ವವಿದ್ಯಾನಿಲಯದ ಕುಲಪತಿ ಡಾ: ಮಲ್ಲಿಕಾ ಘಂಟಿ, ಡಾ: ಬಿ.ಆರ್. ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ ಸಂಯೋಜನಾ ಸಮಿತಿ ವಿಶೇಷಾಧಿಕಾರಿ ಪ್ರೊ. ಎಸ್. ಜಾಫೆಟ್ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s